ಕರ್ನಾಟಕ

ಸಾಮೂಹಿಕ ವಿವಾಹ ದಲ್ಲಿ ಸಚಿವ ಆಂಜನೇಯ ಪುತ್ರಿ ವಿವಾಹ

Pinterest LinkedIn Tumblr

Samuhika-maduve

ಚಿತ್ರದುರ್ಗ, ನ.19: ಸಚಿವ ಎಚ್.ಆಂಜನೇಯ ಅವರ ಪುತ್ರಿ ಅನುಪಮಾ ಸೇರಿದಂತೆ 67 ಜೋಡಿಗಳಿಗೆ ನಡೆದ ಸಾಮೂಹಿಕ ವಿವಾಹ ಸಮಾರಂಭ ಸರ್ವಧರ್ಮ ಸಮಾನತೆಯ ಪ್ರತಿಬಿಂಬವಾಗಿ ಮಾರ್ಪಟ್ಟಿತ್ತು. ಇಂದು ಹೊಳಲ್ಕೆರೆಯ ಕೋಟ್ರನಂಜಪ್ಪ ಪದವಿಪೂರ್ವ ಕಾಲೇಜಿನಲ್ಲಿ ಇಂದಿರಾಗಾಂಧಿ ಅವರ ೯೭ನೇ ಜನ್ಮದಿನಾಚರಣೆ ಅಂಗವಾಗಿ ೯೭ ಜೋಡಿಗಳು ಸಾಮೂಹಿಕ ವಿವಾಹದ ಮೂಲಕ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು.

ಈ ವಿಶೇಷ ಸಮಾರಂಭ ಹಿಂದೂ, ಮುಸ್ಲಿಂ, ಕ್ರೈಸ್ತರೂ ಸೇರಿದಂತೆ ವಿವಿಧ ಧರ್ಮಗಳ ಮುಖಂಡರು ಪಾಲ್ಗೊಂಡಿದ್ದರಿಂದ ಸಮಾನತೆಯನ್ನು ಸಾರುವಂತಿತ್ತು. ವಿವಿಧ ಧರ್ಮಗಳ ಮುಖಂಡರು, ವಿವಿಧ ಮಠಗಳ ಸ್ವಾಮೀಜಿಗಳು, ರಾಜಕೀಯ ಮುಖಂಡರು, ವಧು-ವರರ ಬಂಧು ವರ್ಗ ಸೇರಿದಂತೆ ೨೦ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ವಧು-ವರರನ್ನು ಆಶೀರ್ವದಿಸಿದರಲ್ಲದೆ, ಸಚಿವರ ಈ ಸಮಾಜ ಸೇವೆಯನ್ನು ಶ್ಲಾಘಿಸಿದರು.

ಸರಳ ಸಾಮೂಹಿಕ ವಿವಾಹವಾದರೂ ೨೦ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರಿಂದ ಜನಾಕರ್ಷಣೆಯ ಸಮಾರಂಭವಾಗಿ ಕಾರ್ಯಕ್ರಮ ನೆರವೇರಿತು. ವಿವಾಹ ನೋಡಲೆಂದು ಸಾವಿರಾರು ಮಂದಿ ಈ ಕಾರ್ಯಕ್ರಮಕ್ಕೆ ಬಂದಿದ್ದು ವಿಶೇಷ. ಸಚಿವ ಎಚ್.ಆಂಜನೇಯ ತಮ್ಮ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ ಅವರ ಪುತ್ರಿ ಅನುಪಮಾ ಹಾಗೂ ಶಾಶ್ವತ್ ಸೇರಿದಂತೆ ೯೭ ಜೋಡಿಗಳಿಗೆ ವಸ್ತ್ರ, ತಾಳಿ, ಕಾಲುಂಗುರವನ್ನು ಉಚಿತವಾಗಿ ನೀಡಲಾಯಿತು.

ಇನ್ನು ಸಮಾರಂಭಕ್ಕೆ ಬಂದಿದ್ದ ಹೆಣ್ಣು ಮಕ್ಕಳಿಗೆ ಕುಂಕುಮ, ಬಳೆ ವಿತರಿಸಲಾಯಿತು. ಸರಳ ವಿವಾಹವು ದೊಡ್ಡ ಸಮಾರಂಭದಂತೆ ಕಳೆ ಕಟ್ಟಿತ್ತು. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಸದುದ್ದೇಶದಿಂದ ಈ ರೀತಿಯ ಸರಳ ಸಾಮೂಹಿಕ ವಿವಾಹ ವನ್ನು ಅನುಪಮಾ ಹಾಗೂ ಶಾಶ್ವತ್ ನೆರವೇರಿಸಿಕೊಳ್ಳುವ ಮೂಲಕ ಸಮಾಜಕ್ಕೆ ಸರಳತೆಯ ಸಂದೇಶ ರವಾನಿಸಿದ್ದಾರೆ.

Write A Comment