ಕನ್ನಡ ವಾರ್ತೆಗಳು

ತಣ್ಣೀರುಬಾವಿ ಗಾಲ್ಫ್ ಕೋರ್ಸ್ : ತ್ವರಿತಗೊಳಿಸಲು ಡಿಸಿ ಸೂಚನೆ

Pinterest LinkedIn Tumblr

DC_Press_Meet

ಮಂಗಳೂರು ನ,19: ತಣ್ಣೀರು ಬಾವಿ ಕಡಲ ತೀರ ಸಮೀಪ ಗಾಲ್ಫ್‌ಕೋರ್ಸ್ ಅಭಿವೃದ್ಧಿಗೊಳಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸೂಚಿಸಿದ್ದಾರೆ.  ಅವರು ಈ ಸಂಬಂಧ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತ ಈಗಾಗಲೇ ಈ ಪರಿಸರದ ಭೂಮಿಯನ್ನು ಸರ್ವೆ ಮಾಡಲಾಗಿದೆ.

ಗಾಲ್ಫ್‌ಕೋರ್ಸ್ ಸ್ಥಾಪಿಸುವ ಸಲುವಾಗಿ 166 ಎಕರೆ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಕಾದಿರಿಸಿ, ಹಸ್ತಾಂತರಿಸಲಾಗಿದೆ. ಈ ಬಗ್ಗೆ ಜಿಲ್ಲಾಡಳಿತದಿಂದ ನಿರಾಕ್ಷೇಪಣಾ ಪತ್ರ ಪಡೆದು ಕರಾವಳಿ ನಿಯಂತ್ರಣ ವಲಯದಿಂದ ಅನುಮತಿ ಪಡೆಯಲು ಕ್ರಮ ಜರುಗಿಸುವಂತೆ ಅವರು ಯೋಜನೆಯ ಪ್ರವರ್ತಕರಿಗೆ ಸೂಚಿಸಿದರು. ಭಾರತದಲ್ಲಿ ಕಡಲ ತೀರದಲ್ಲಿ ಗಾಲ್ಫ್‌ಕೋರ್ಸ್‌ಗಳಿಲ್ಲ.ಈ ಹಿನ್ನೆಲೆಯಲ್ಲಿ ತಣ್ಣೀರುಬಾವಿ ಗಾಲ್ಫ್ ಕೋರ್ಸ್ ಕರಾವಳಿಯ ಪ್ರವಾಸೋದ್ಯಮ ದೃಷ್ಠಿಯಿಂದ ಮಹತ್ವದ್ದಾಗಿದೆ.

ಇದರಿಂದ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.  ಸಭೆಯಲ್ಲಿ ಮಂಗಳೂರು ತಹಶೀಲ್ದಾರ್ ಮೋಹನ್ ರಾವ್,ಲೋಕೋಪಯೋಗಿ ಮತ್ತು ಮಹಾನಗರಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment