ಮಂಗಳೂರು,ನ.19 : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನವೆಂಬರ್ 21 ನೇ ಶುಕ್ರವಾರದಂದು ಲಕ್ಷದೀಪೋತ್ಸವವು ಜರಗಲಿರುವುದು. ಅಂದು ಬೆಳಿಗ್ಗೆ ಶ್ರೀ ಅಯ್ಯಪ್ಪ ದೇವರಿಗೆ ಸೀಯಾಳಾಭಿಷೇಕ ಮಧ್ಯಾಹ್ನ ಅನ್ನದಾನ, ಹಾಗೂ ರಾತ್ರಿ ಯಕ್ಷಗಾನ ಬಯಲಾಟ ಕಾರ್ಯಕ್ರಮವಿರುವುದು.
ಜನವರಿ 15, 2015 ರಂದು ‘ಕದ್ರಿ ತೀರ್ಥ’ ಹಾಗೂ ಜನವರಿ 22 ರಂದು ‘ರಥೋವತ್ಸವ’ ಜರಗಲಿರುವುದೆಂದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.