ಬೆಂಗಳೂರು: ನವೆಂಬರ್ ೨೧ ರಿಂದ ೨೩ ರವೆರೆಗೆ ನಡೆಯಲಿರುವ ಡಾ. ರಾಜ್ ಕಪ್ ನ ನಾಲ್ಕನೇ ಆವೃತ್ತಿಯ ಕ್ರಿಕೆಟ್ ಸರಣಿಯಲ್ಲಿ ಸುದೀಪ್ ಭಾಗವಹಿಸುವಂತೆ ಮನವಿ ಮಾಡಲು ೧೨ ಜನರ ನಿರ್ಮಾಪಕರ ತಂಡವೊಂದು ಚೆನ್ನೈಗೆ ತೆರಳಿದೆ ಎಂದು ಮೂಲಗಳು ತಿಳಿಸಿವೆ. ‘ರನ್ನ’ ಚಲನಚಿತ್ರಕ್ಕೆ ಚಿತ್ರೀಕರಣ ಮುಗಿಸಿರುವ ಸುದೀಪ್, ಈಗ ಚೆನ್ನೈನಲ್ಲಿ ‘ವಿಜಯ್ ೫೮’ ಚಿತ್ರ ತಂಡವನ್ನು ಸೇರಿಕೊಂಡಿದ್ದಾರೆ. ಅಲ್ಲಿ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ನೃತ್ಯ ನಿರ್ದೇಶಕ ರಾಜೇಶ್ ಬ್ರಹ್ಮಾವಾರ್ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಚಲನಚಿತ್ರ ಕಾರ್ಮಿಕರ ಮತ್ತು ಕಲಾವಿದರ ಒಕ್ಕೂಟ ಈ ಕ್ರಿಕೆಟ್ ಸರಣಿಯ ಆಯೋಜಕರು.
ಈ ಸರಣಿಯ ಅಂತಿಮ ಪಂದ್ಯ ಡಿಸೆಂಬರ್ ೭ ರಂದು ಮಲೇಶಿಯಾದಲ್ಲಿ ನಡೆಯಲಿದೆ. ಈಗಾಗಲೇ ೭ ತಂಡಗಳು ಅಂತಿಮಗೊಂಡಿದ್ದು, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್, ಉಪೇಂದ್ರ, ದುನಿಯಾ ವಿಜಯ್ ಮತ್ತು ಶ್ರೀನಗರ ಕಿಟ್ಟಿ ತಮ್ಮ ತಂಡಗಳ ನಾಯಕರು. ಸುದೀಪ್ ಅವರು ತಮ್ಮ ನಿಗದಿತ ಕಾರ್ಯದಿಂದ ಬಿಡುವು ಮಾಡಿಕೊಂಡು ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸುವಂತೆ ಮನವೊಲಿಸುವ ನಿಟ್ಟಿನಲ್ಲಿ ನಿರ್ಮಾಪಕರ ತಂದ ಚೆನ್ನೈಗೆ ತೆರಳಿದೆ. ಸುದೀಪ್ ಅವರು ಕ್ರಿಕೆಟ್ ಮೈದಾನದ ಕ್ರೀಸ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಷ್ಟೇ.