ಕರಾವಳಿ

ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಜಾಗತಿಕ ಬಂಟರ ಸಮ್ಮೇಳನ.

Pinterest LinkedIn Tumblr

bunt_sangha_photo_1

ಮಂಗಳೂರು,ನ.20 : ಬಂಟರ ಯಾನೆ ನಾಡವರ ಮಾತೃ ಸಂಘದ ಆಶ್ರಯದಲ್ಲಿ ಜಾಗತಿಕ ಬಂಟರ ಸಮ್ಮೇಳನ ಮತ್ತು ಶತಮಾನೋತ್ಸವದ ಕಾರ್ಯಕ್ರಮಗಳು ಸದ್ಯದಲ್ಲೇ ಜರಗಲಿದ್ದು, ಈ ಕಾರ್ಯಕ್ರಮದ ಅಂಗವಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಈಗಾಗಲೇ`ಶುಭಾರಂಭಂ’ ಎಂಬ ನಾಮಾಂಕಿತದೊಂದಿಗೆ ಪ್ರಾರಂಭವಾದ ಮಾತೃ ಸಂಘದ ಶತಮಾನೋತ್ಸವ ಮತ್ತು ಜಾಗತಿಕ ಸಮ್ಮೇಳನದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕಿ ಶಕುಂತಳಾ ಶೆಟ್ಟಿ, ಮೇಯರ್ ಮಹಾಬಲ ಮಾರ್ಲ, ಡಾ.ಎಂ.ಮೋಹನ್ ಆಳ್ವ, ಸಿ‌ಎ. ಶಂಕರ್ ಶೆಟ್ಟಿ, ಡಾ. ಕೆ.ಆರ್. ಶೆಟ್ಟಿ, ಪ್ರಕಾಶ್ ಶೆಟ್ಟಿ, ಅಮರ್‌ನಾಥ್ ಹೆಗ್ಡೆ, ಐಕಳ ಹರೀಶ್ ಶೆಟ್ಟಿ, ಶ್ಯಾಮ್ ಶೆಟ್ಟಿ, ಎಣ್ಮಕಜೆ ಸುಧೀರ್ ಶೆಟ್ಟಿ, ಶ್ರೀಮತಿ ಗಾಯತ್ರಿ ಶೆಟ್ಟಿ ಇವರುಗಳು ಭಾಗವಹಿಸಿದ್ದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳು ಬಂಟರ ಸಮ್ಮೇಳನದ ಲಾಂಛನವನ್ನು ಲೋಕಾರ್ಪಣೆ ಮಾಡಿದ್ದರು. ಜಾಗತಿಕ ಬಂಟರ ಸಮ್ಮೇಳನ ಮತ್ತು ಶತಮಾನೋತ್ಸವ ಕಾರ್ಯಕ್ರಮವನ್ನು ಅವಿಸ್ಮರಣೀಯ ಕಾರ್ಯಕ್ರಮವನ್ನಾಗಿ ಮಾಡುವ ಉದ್ದೇಶದಿಂದ ವಿಶ್ವವ್ಯಾಪಿಯಾಗಿರುವ ಬಂಟರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ಆರೋಗ್ಯ, ವಸತಿ, ವೈವಾಹಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವನದ ವ್ಯವಸ್ಥೆ ಮತ್ತಿತರ ಮಾಹಿತಿಗಳನ್ನು ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ. ಇದೇ ವೇಳೆ ಸಹಾಯ, ಸಹಕಾರಗಳ ಅಗತ್ಯವಿರವವರನ್ನು ಹಾಗೂ ಸಹಾಯ ಸಹಕಾರ ನೀಡಲು ಶಕ್ತರಿರುವವರನ್ನು ಗುರುತಿಸುವ ಮೂಲಕ ಸಂಪರ್ಕ ಕೊಂಡಿಯಾಗಿ ಸುಖೀ ಸಮಾಜವನ್ನು ನಿರ್ಮಾಣ ಮಾಡೋಣ. ಜಗತ್ತಿನಾದ್ಯಂತ ಇರುವ ಬಂಟ ಬಾಂಧವರನ್ನು ಸಂಪೂರ್ಣ ಮಾಹಿತಿಗಳನ್ನೊಳಗೊಂಡ `ವಿಶ್ವ ಬಂಟರ ಮಾಹಿತಿ ಕೋಶ’ ಮುಂದಿನ ದಿನಗಳಲ್ಲಿ ಸಂಘದ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡುವ ಸದುದ್ದೇಶದಿಂದ ಮಾಹಿತಿ ಸಂಗ್ರಹಿಸಲು ಮಾತೃಸಂಘದಿಂದ ನೇಮಿಸಲ್ಪಟ್ಟ ಪ್ರತಿನಿಧಿಗಳು ತಮ್ಮ ಮನೆಗೆ ಭೇಟಿ ನೀಡಿದಾಗ ಸಹಕರಿಸುವುದರೊಂದಿಗೆ ಸಮ್ಮೇಳನದ ಯಶಸ್ಸಿಗೆ ಸಮಾಜ ಬಾಂಧವರು ಕೈಜೋಡಿಸಬೇಕೆಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಮಾಲಾಡಿ ಅಜಿತ್ ಕುಮಾರ್ ರೈ ಅವರು ವಿನಂತಿಸಿದ್ದಾರೆ.

Write A Comment