ಕುಂದಾಪುರ : ರಾಜಸ್ಥಾನದ ಜೈಪುರದಲ್ಲಿ ನ.14 ರಂದು ನಡೆದ 30ನೇ ರಾಷ್ಟ್ರೀಯ ಮಟ್ಟದ ಅಂಚೆ ಇಲಾಖಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ 55 ಕೆಜಿ ವಿಭಾಗದಲ್ಲಿ ಕುಂದಾಪುರ ತಾಲೂಕಿನ ತ್ರಾಸಿ ಅಂಚೆ ಕಛೇರಿ ಉದ್ಯೋಗಿ ಎಂ.ಗುರುದೀಪಕ ಕಾಮತ್ ಅವರು ಬೆಳ್ಳಿ ಪದಕ, 70 ಕೆಜಿ ವಿಭಾಗದಲ್ಲಿ ಶಿವಮೊಗ್ಗದ ವಿ.ರವಿಕುಮಾರ್ ಕಂಚಿನ ಪದಕ ಮತ್ತು 75 ಕೆಜಿ ವಿಭಾಗದಲ್ಲಿ ಮಂಗಳೂರಿನ ನಾಗರಾಜ್ ಕಂಚಿನ ಪದಕ ದೊರೆತಿದೆ.
ಚಿತ್ರ- 55 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದ ಎಂ.ಗುರುದೀಪಕ ಕಾಮತ್