ಮಂಗಳೂರು: ಇದುವರೆಗೂ ರಿಕ್ಷಾ ಮಾಲಕರು ಹೆಚ್ಚು ಹೆಚ್ಚು ರಿಕ್ಷಾ ಪರ್ಮಿಟ್ ಪಡೆದುಕೊಂಡು ದುಬಾರಿ ಬೆಲೆಗೆ ವರ್ಗಾಯಿಸುವುದು ಮತ್ತು ದಿನಕ್ಕೆ 300ರೂಪಾಯಿಯಂತೆ ಬಾಡಿಗೆಗೆ ರಿಕ್ಷಾ ಚಾಲಕರಿಗೆ ಕೊಡುತ್ತಿದ್ದು ದನ್ನು ರದ್ದು ಮಾಡುವ ಮುನ್ಸೂಚನೆ ಸಿಕ್ಕಿದೆ. ಜಿಲ್ಲಾಧಿಕಾರಿಗೆ ದ.ಕ.ಆಟೋ ರಿಕ್ಷಾ ಚಾಲಕರ ಸಂಘದ ಸದಸ್ಯರು ಸಲ್ಲಿಸಿದ ದೂರಿನನ್ವಯ ಚರ್ಚಿಸಿ ಈ ಆದೇಶದ ಮುನ್ಸೂಚನೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನೀಡಿದ್ದಾರೆ.
ಹಲವು ಬೇಡಿಕೆಗಳನ್ನು ಹೊತ್ತು ಆಟೋ ರಿಕ್ಷಾ ಚಾಲಕರ ಸಂಘದ ಸದಸ್ಯರು ನಿನ್ನೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಅದರಂತೆ ಹಲವು ರಿಕ್ಷಾ ಮಾಲಕರು 30ಕ್ಕೂ ಹೆಚ್ಚು ಪರ್ಮಿಟ್ ಹೊಂದಿದ್ದು, ರಿಕ್ಷಾಗ ಳನ್ನು ಬಾಡಿಗೆಗೆ ಬಿಟ್ಟು ಸುಲಿಯುತ್ತಿದ್ದಾರೆ. ಹೆಚ್ಚು ಬೆಲೆಗೆ ಪರವಾನಿಗೆಯನ್ನು ಮಾರಾಟ ಮಾಡುತ್ತಿದ್ದಾರೆ. ಬ್ರೋಕರ್ ಗಳ ಮಧ್ಯಸ್ಥಿಕೆಯಿಂದ ಪರ್ಮಿಟ್ ದುಬಾರಿ ಬೆಲೆಗೆ ನಮಗೆ ತಲುಪುತ್ತಿದೆ. 1.75 ಲಕ್ಷ ರೂಪಾಯಿ ನಾವು ಪಾವತಿ ಸಬೇಕಾಗಿದೆ. ಇದರ ಸಂಪೂರ್ಣ ಲಾಭ ರಿಕ್ಷಾ ಮಾಲಕರು ಪಡೆದುಕೊಳ್ಳುತ್ತಿದ್ದಾರೆ.
ಕೆಲವರು ಪರ್ಮಿಟ್ ಮಾಡಿ ಯಾರ್ಯಾರಿಗೋ ಬಾಡಿಗೆಗೆ ರಿಕ್ಷಾ ಕೊಟ್ಟು ವಿದೇಶದಲ್ಲಿ ನೆಲೆಸಿದ್ದಾರೆ. ಆದ್ದರಿಂದ ಮುಂದೆ ದುಡಿಯುವ ರಿಕ್ಷಾ ಚಾಲಕನಿಗೆ ಒಂದು ಪರ್ಮಿಟ್ ಮಾತ್ರ ನೀಡಬೇಕು ಅದರಲ್ಲಿ ವರ್ಗಾಯಿಸು ವಂತಿಲ್ಲ ಎಂದು ನಮೂಧಿಸಬೇಕು ಎಂದು ಆಗ್ರಹಿಸಿ ಸಲ್ಲಿಸಿದ ದೂರಿನ ಕುರಿತು ಚರ್ಚಿಸಿದ ಜಿಲ್ಲಾಧಿಕಾರಿ ಇಬ್ರಾಹಿಂ ಕೊನೆಗೆ ಸಮ್ಮತಿಯ ಭರವಸೆ ನೀಡಿದ್ದಾರೆ.
ಅಲ್ಲದೆ, ಅಲ್ಪಸಂಖ್ಯಾತ ದಲಿತ ಹಿಂದುಳಿದ ಕೋಟಾದಡಿ ಸಿಗುತ್ತಿರುವ ಆಟೋ ರಿಕ್ಷಾ ಸ್ಕೀಂ ಹೆಚ್ಚಾಗಿ ಇತರ ಖಾಸಗಿ ಮತ್ತು ಸರಕಾರಿ ನೌಕರರ ಪಾಲಾಗುತ್ತಿದೆ. ದುಡಿಯುವ ವರ್ಗದ ಚಾಲಕರಿಗೆ ಇದರಿಂದ ಏನೂ ಲಾಭವಾಗುತ್ತಿಲ್ಲ. ಹಗಲು ಹೊತ್ತು ಬೇರೆ ಕೆಲಸದಲ್ಲಿ ತೊಡಗಿರುವ ಕೆಲವರಿಗೆ ಈ ಯೋಜನೆಯ ಸಫಲತೆಯ ಅವಶ್ಯಕತೆಯಿಲ್ಲ. ರಿಕ್ಷಾ ಚಾಲನೆಯನ್ನೇ ನಂಬಿ ಬದುಕುತ್ತಿರುವ ಕುಟುಂಬಕ್ಕೆ ಈ ಯೋಜನೆ ತಲುಪಿಸಿ ಎಂದು ರಿಕ್ಷಾ ಚಾಲಕರು ಕೋರಿದರು. ಅದಕ್ಕೆ ಸಮ್ಮತಿ ಸಿದ ಜಿಲ್ಲಾಧಿಕಾರಿಗಳು, ಸರಕಾರಿ ನೌಕ ರರಿಗೆ ರಿಕ್ಷಾ ನೀಡದಂತೆ ಆದೇಶಿಸಿದರು.
ನಂತರ ರಿಕ್ಷಾ ಚಾಲಕರು, ಮಾಲಕರು ಪಡೆದುಕೊಳ್ಳುತ್ತಿರುವ ದೈನಂದಿನ 300ರೂಪಾಯಿಯಷ್ಟಿರುವ ಸಂಭಾವನೆಯನ್ನು 50ರೂಗೆ ಇಳಿಸಬೇಕೆಂದು ಆಗ್ರಹಿಸಿದರು. ಈ ವೇಳೆ ಸಭೆಯಲ್ಲಿ ಉಪಸ್ಥಿತರಿದ್ದ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ರಿಕ್ಷಾ ಚಾಲಕರ ಅಹವಾಲು ಆಲಿಸಿದರು.