ಕನ್ನಡ ವಾರ್ತೆಗಳು

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವೃದ್ಧೆ ಕೆರೆಗೆ ಹಾರಿ ಆತ್ಮಹತ್ಯೆ

Pinterest LinkedIn Tumblr

ಕುಂದಾಪುರ: ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ವೃದ್ಧೆಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗೋಪಾಡಿ ಗ್ರಾಮದ ಚಿಕ್ಕುಬೆಟ್ಟಿನ ಚಿಕ್ಕುಕೆರೆಯಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಈ ವೃದ್ಧೆ ಮನೆಯಿಂದ ನಾಪತ್ತೆಯಾಗಿದ್ದು ಸೋಮವಾರ ಸಂಜೆ ವೇಳೆ ಮನೆಗೆ ಸಮೀಪದ ಕೆರೆಯಲ್ಲಿ ಶವವಾಗಿ ಸಿಕ್ಕಿದ್ದಾರೆ.

ಕುಂಭಾಸಿ ಹೊಳೆಕಟ್ಟು ನಿವಾಸಿ ಲಕ್ಷ್ಮೀ ಪೂಜಾರ್ತಿ (67) ಎನ್ನುವವರೇ ಆತ್ಮಹತ್ಯೆಗೆ ಶರಣಾದವರು.

Kumbhasi_Old women_Death (4) Kumbhasi_Old women_Death (8) Kumbhasi_Old women_Death (9) Kumbhasi_Old women_Death (6) Kumbhasi_Old women_Death (5) Kumbhasi_Old women_Death (7) Kumbhasi_Old women_Death (3) Kumbhasi_Old women_Death (2) Kumbhasi_Old women_Death (1) Kumbhasi_Old women_Death (10) Kumbhasi_Old women_Death

ಘಟನೆ ವಿವರ: ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಲಕ್ಷ್ಮೀ ಅವರು ಗೋಪಾಡಿ ಸಮೀಪದ ಚಿಕ್ಕುಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕುಟುಂಬಿಕರು ಹೇಳುವ ಪ್ರಕಾರ ಕುಂಭಾಸಿ ಹೊಳೆಕಟ್ಟುವಿನ ನಿವಾಸದಲ್ಲಿ ಮಗಳು ಶಕುಂತಲಾ ಹಾಗೂ ಮೊಮ್ಮಗಳೊಂದಿಗೆ ವಾಸಿಸುತ್ತಿದ್ದ ಲಕ್ಷ್ಮೀ ಅವರು ಮಾನಸಿಕವಾಗಿ ಖಿನ್ನರಾಗಿದ್ದು ಇದೇ ಕಾರಣದಿಂದಾಗಿ ಹಲವು ಬಾರೀ ಮನೆಯಿಂದ ಹೊರಗೆ ಹೋಗುತ್ತಿದ್ದರಂತೆ. ಆ ಬಳಿಕ ಸ್ಥಳೀಯರ ಸಹಾಯದಿಂದ ಮನೆಗೆ ಮರಳುತ್ತಿದ್ದ ಕಾರಣದಿಂದಾಗಿ ಈ ಬಾರೀ ಮನೆಯಿಂದ ಹೊರ ಹೋದ ಬಗ್ಗೆ ಮನೆಯವರು ದೂರು ದಾಖಲಿಸಿರಲಿಲ್ಲ. ಕಳೆದ ಮೂರು ದಿನಗಳಿಂದಲೂ ಲಕ್ಷ್ಮೀ ಅವರನ್ನು ಕುಟುಂಬಿಕರು ಹಾಗೂ ಸ್ಥಳೀಯರು ಹುಡುಕಾಡಿದ್ದು ಯಾವುದೇ ಮಾಹಿತಿ ಲಭಿಸಿರಲಿಲ್ಲ. ಸೋಮವಾರ ಸಂಜೆ ವೇಳೆ ಕೆರೆಯ ಬಳಿ ಬಂದ ಸ್ಥಳೀಯ ಮಹಿಳೆಯೋರ್ವರು ಕೆರೆಯಲ್ಲಿ ಶವವೊಂದು ನೋಡಿದ್ದು ಈ ಸುದ್ದಿ ಊರವರಿಗೆ ತಲುಪಿ ಕುಂದಾಪುರ ಪೊಳಿಸರಿಗೆ ಮಾಹಿತಿ ನೀಡಿದ್ದಾರೆ.

ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸಿದ ಬಳಿಕ ಶವವು ಸ್ಥಳೀಯರೇ ಆದ ಲಕ್ಷ್ಮೀ ಅವರದ್ದು ಎಂದು ತಿಳಿದಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Write A Comment