ಮನೋರಂಜನೆ

ಟ್ಯಾಟೂ ಹಾಕಿಸಿಕೊಂಡು ಸಿಕ್ಕಾಪಟ್ಟೆ ಗಿಮಿಕ್ ಕಂ ಮ್ಯಾಜಿಕ್ ಮಾಡುತ್ತಿರುವ ನಟಿ ತ್ರಿಶಾ

Pinterest LinkedIn Tumblr

trisha

ಸಿನಿಮಾ ನಟಿಯರಿಗೂ ಟ್ಯಾಟೂ ಜಗತ್ತಿಗೂ ಬಿಡಿಸಲಾಗದ ನಂಟು. ಶೋಕಿಗಾಗಿ ಟ್ಯಾಟೂ ಹಾಕಿಸಿಕೊಳ್ಳುವ ನಟಿಯರೇ ಹೆಚ್ಚು. ಆದರೆ ನಟಿ ತ್ರಿಶಾ ಮಾತ್ರ ಈ ಟ್ಯಾಟೂ ಶೋಕಿಯನ್ನು ಬೇರೆ ರೀತಿಯಲ್ಲಿ ಬಳಸಿಕೊಳ್ಳಲು ಹೊರಟಿದ್ದಾಳೆ.

ಹೀಗಾಗಿ ನಟಿ ತ್ರಿಶಾ ಇತ್ತೀಚೆಗೆ ಸಿಕ್ಕಾಪಟ್ಟೆ ಗಿಮಿಕ್ ಕಂ ಮ್ಯಾಜಿಕ್ ಮಾಡುತ್ತಿದ್ದಾರೆ. ಅವರ ಈ ಆಟ ಬಿಡುಗಡೆಯ ಹಂತದಲ್ಲಿರುವ ಚಿತ್ರವೊಂದರ ಪ್ರಚಾರದ ತಂತ್ರ. ಇಲ್ಲಿರುವ ಫೋಟೋಗಳನ್ನು ಒಮ್ಮೆ ನೋಡಿ. ಹೌದು, ಜನವರಿಯಲ್ಲಿ ತೆರೆ ಕಾಣಲಿರುವ ‘ಭೂಲೋಗಂ’ ಎನ್ನುವ ಚಿತ್ರಕ್ಕೆ ತ್ರಿಶಾ ಕಂಡ ಕಂಡ ಜಾಗದಲ್ಲಿ ಟ್ಯಾಟೂ ಬಿಸಿಡಿಸಕೊಂಡಿದ್ದಾಳೆ.

ನಟ ಜಯಂ ರವಿ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ತ್ರಿಶಾ. ಈ ಹಿಂದೆ ಎದೆ ಮೇಲೆ ಟ್ಯಾಟೂ ಬಿಡಿಸಿಕೊಂಡು ಎಲ್ಲರ ಕುತೂಹಲ ಕೆರಳಿಸಿದ ತ್ರಿಶಾ, ಈಗ ತಾನೂ ನಟಿಸಿರುವ ಚಿತ್ರದ ನಾಯಕನ ಭಾವಚಿತ್ರ ಬಿಡಿಸಿಕೊಳ್ಳುವ ಮೂಲಕ ತಮಿಳು ಚಿತ್ರರಂಗದಲ್ಲಿ ಅಚ್ಚರಿ ಮೂಡಿಸಿದ್ದಾಳೆ.

ಈ ಟ್ಯಾಟೂಗಳನ್ನು ನೋಡಿ ಸ್ವತಃ ಜಯಂ ರವಿನೇ ಅಚ್ಚರಿಗೊಂಡಿದ್ದಾರೆನ್ನುವುದು ಮತ್ತೊಂದು ಗಾಸಿಪ್. ಇನ್ನೂ ಈ ಟ್ಯಾಟೂ ಹಾಕಿಸಿಕೊಳ್ಳುವ ದೃಶ್ಯಗಳು ರಹಸ್ಯವಾಗಿ ಹೊರಬಂದಿದೆ ಎಂದು ಹೇಳಲಾಗುತ್ತಿದೆಯಾದರೂ ಇಲ್ಲಿ ಯಾವ ರಹಸ್ಯವೂ ಇಲ್ಲ. ಯಾಕೆಂದರೆ ಚಿತ್ರತಂಡದ್ದೇ ಗಿಮಿಕ್ ಎಂಬುದರಲ್ಲಿ ಎರಡು ಮಾತಿಲ್ಲ.

Write A Comment