ಕರಾವಳಿ

ಕುಕ್ಕೆಸುಬ್ರಹ್ಮಣ್ಯದಲ್ಲಿ ದೇವಸ್ಥಾನದಲ್ಲಿ ನಿರಾತಂಕವಾಗಿ ನಡೆದ ಮಡೆಸ್ನಾನ

Pinterest LinkedIn Tumblr

madesnana

ಸುಬ್ರಹ್ಮಣ್ಯ: ಚಂಪಾಷಷ್ಠಿಯ ಮಾರ್ಗಶಿರ ಶುದ್ಧ ಚೌತಿಯ ದಿನವಾದ ಮಂಗಳವಾರ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಡೆಸ್ನಾನ ಸೇವೆ ನಿರಾತಂಕವಾಗಿ ನೆರೆವೇರಿತು. ಮಧ್ಯಾಹ್ನ ನಡೆದ ಸೇವೆಯಲ್ಲಿ 229 ಮಂದಿ ಭಕ್ತರು ಸ್ವಯಂ ಇಚ್ಛೆಯಿಂದ ಪಾಲ್ಗೊಂಡರು.

ಮಧ್ಯಾಹ್ನ ಮಹಾಪೂಜೆ ನೆರೆವೇರಿದ ಬಳಿಕ ಹೊರಾಂಗಣದಲ್ಲಿ ಬ್ರಾಹ್ಮಣರಿಗೆ ಅನ್ನಪ್ರಸಾದ ವಿತರಣೆಯಾಯಿತು. ಬಳಿಕ ಊಟ ಮಾಡಿದ ಎಂಜಲೆಲೆಯ ಮೇಲೆ ಹರಕೆ ಹೇಳಿಕೊಂಡ ಭಕ್ತರು ಉರುಳು ಸೇವೆ ನಡೆಸಿದರು.

ಮಡೆಸ್ನಾನ ಸೇವೆ ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿದ ಮೇರೆಗೆ ಈ ಭಾರಿ ಯಾವುದೇ ಆತಂಕವಿಲ್ಲದೇ ಮಡೆಸ್ನಾನ ಸೇವೆ ನೆರೆವೇರಿತು. ಸೇವೆಗೆ ನಾಡಿನಾದ್ಯಂತ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಷೇತ್ರ ಹಾಗೂ ಮಡೆಸ್ನಾನ ನಡೆಯುವಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Write A Comment