ಪ್ರಮುಖ ವರದಿಗಳು

ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ವಿಆರ್ ಕೃಷ್ಣ ಅಯ್ಯರ್ ನಿಧನ: ಕಂಬನಿ ಮಿಡಿದ ಗಣ್ಯರು

Pinterest LinkedIn Tumblr

K_iyer5

ಕೊಚ್ಚಿ: ಖ್ಯಾತ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವೈದ್ಯನಾಥಪುರ ರಾಮಕೃಷ್ಣ ಅಯ್ಯರ್ ಅವರು ಗುರುವಾರ ನಿಧನರಾಗಿದ್ದಾರೆ.

ಇದೇ ನವೆಂಬರ್ 15ರಂದು ತಮ್ಮ 100ನೇ ವಸಂತದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ನಿವೃತ್ತ ನ್ಯಾ. ವಿಆರ್ ಕೃಷ್ಣ ಅಯ್ಯರ್ ಅವರು ಕೊಚ್ಚಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ 3.30ರ ಸುಮಾರಿನಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಅಯ್ಯರ್ ಅವರು ಕಳೆದ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕೇರಳದ ಪಾಲಕ್ಕಾಡ್ ಸಮೀಪದಲ್ಲಿರುವ ವೈದ್ಯನಾಥಪುರದಲ್ಲಿ 1915 ನವೆಂಬರ್ 15ರಂದು ಜನಿಸಿದ ವಿಆರ್ ಕೃಷ್ಣ ಅಯ್ಯರ್ ಅವರು, ವಿಆರ್ ಕೃಷ್ಣ ಅಯ್ಯರ್ ಅವರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಶಾಸಕರಾಗಿ, ಸಚಿವರಾಗಿ ಮತ್ತು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾಗಿಯೂ ಸೇವೆಸಲ್ಲಿಸಿದ್ದರು. 1957ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 1957ರಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೇರಿದ್ದ ಕಮ್ಯುನಿಸ್ಟ್ ಸರ್ಕಾರದಲ್ಲಿ ಕಾನೂನು ಮಂತ್ರಿಯಾಗಿಯೂ ಕೂಡ ವಿಆರ್ ಕೃಷ್ಣ ಅಯ್ಯರ್ ಅವರು ಸೇವೆ ಸಲ್ಲಿಸಿದ್ದಾರೆ.

1968ರಲ್ಲಿ ಕೇರಳ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ವಿಆರ್ ಕೃಷ್ಣ ಅಯ್ಯರ್ ಅವರು 1971ರವರೆಗೂ ಅಲ್ಲಿಯೇ ತಮ್ಮ ಸೇವೆ ಸಲ್ಲಿಸಿದ್ದರು. 1973ರಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವಿಆರ್ ಕೃಷ್ಣ ಅಯ್ಯರ್ ಅವರು 1980ರಲ್ಲಿ ನಿವೃತ್ತಿಯಾದರು. ರಾಜಕಾರಣಿಯಾಗಿದ್ದವರು ಬಳಿಕ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿದ್ದು ಭಾರತದ ಇತಿಹಾಸದಲ್ಲಿಯೇ ಅದೇ ಮೊದಲಾಗಿತ್ತು. ವಿಆರ್ ಕೃಷ್ಣ ಅಯ್ಯರ್ ಅವರು 1999ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೂ ಭಾಜನರಾಗಿದ್ದರು.

ವಿಆರ್ ಕೃಷ್ಣ ಅಯ್ಯರ್ ಅವರ ನಿಧನ ವಿಚಾರ ತಿಳಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಕಂಬನಿ ಮಿಡಿದಿದ್ದು, ಟ್ವಿಟರ್‌ನಲ್ಲಿ ಅವರ ಆತ್ಮಕ್ಕೆ ಶಾಂತಿಕೋರಿದ್ದಾರೆ.

Write A Comment