ಉಡುಪಿ: ಡೆತ್ನೋಟ ಬರೆದಿಟ್ಟು ಉಡುಪಿಯ ಶಾರದಾ ರೆಸಿಡೆನ್ಷಿಯಲ್ ಸ್ಕೂಲ್ನಿಂದ ನವೆಂಬರ್ 15ರಂದು ನಿಗೂಢವಾಗಿ ನಾಪತ್ತೆಯಾದ 8ನೇ ತರಗತಿ ವಿದ್ಯಾರ್ಥಿನಿ ಇಶಿಕಾ ಶೆಟ್ಟಿ ಮುಂಬೈನಲ್ಲಿ ಪತ್ತೆಯಾಗಿದ್ದಾಳೆ.
ಮುಂಬೈಯ ಛತ್ರಪತಿ ರೈಲ್ವೇ ನಿಲ್ದಾಣದಲ್ಲಿ ಇಶಿಕಾ ಪತ್ತೆಯಾಗಿದ್ದು ಆಕೆಯನ್ನು ಭೇಟಿ ಮಾಡಲು ತಾಯಿ ಉಡುಪಿಯಿಂದ ಮುಂಬೈಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಆಕೆ ಮುಂಬೈಗೆ ತೆರಳಿದ್ದಾದರೂ ಏಕೆ, ಇಷ್ಟು ದಿನ ಎಲ್ಲಿದ್ದಳು ಎನ್ನುವುದು ಇನ್ನಷ್ಟೇ ತಿಳಿಯಬೇಕಾಗಿದೆ.
ಘಟನೆ ಹಿನ್ನ್ಲೆ: ನವೆಂಬರ್ 15ರಂದು ಉಡುಪಿಯ ಶಾರದಾ ರೆಸಿಡೆಸ್ನಿಯಲ್ ಸ್ಕೂಲಿನಿಂದ ನಿಗೂಢವಾಗಿ ನಾಒಅತ್ತೆಯಾಗಿದ್ದ ಇಶಿಕಾ ಅವರನ್ನು ಸಾಕಷ್ಟು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಪ್ರಕರಣದ ತನಿಖೆ ಹಾಗೂ ಇಶಿಕಾ ಹುಡುಕಾಟಕ್ಕಾಗಿ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದರು. ತದನಂತರ ಇಶಿಕಾ ಬರೆದ ಪತ್ರವೊಂದು ಫೈಝಲ್ ಖಾನ್ ಮನೆ ತಲುಪಿತ್ತು. ಆ ಪತ್ರದಲ್ಲಿ ತನಗೆ ಕರೆ ಮಾಡುವಂತೆ ಇಶಿಕಾ ಬರೆದಿದ್ದಳು. ಆಕೆ ಮುಂಬೈನಲ್ಲಿಯೇ ಇರುವ ಬಗ್ಗೆ ದಟ್ಟ ಅನುಮಾನವಿದ್ದ ಕಾರಣ ಮುಂಬೈಯನ್ನು ಕೇಂದ್ರವಾಗಿಸಿಕೊಂಡು ಹುಡುಕಾಟ ನಡೆದಿತ್ತು.
ಒಟ್ಟಿನಲ್ಲಿ ಸತತ 20 ದಿನಗಳ ಮೇಲೆ ಉಡುಪಿ ಮೂಲದ ಇಶಿಕಾ ಪತ್ತೆಯಾಗಿದ್ದು ಆಕೆ ಕುಟುಂಬಿಕರು ಸಂತಸದಲ್ಲಿದ್ದಾರೆ.