ಕುವೈಟ್; ಉಜಿರೆಯಲ್ಲಿರುವ ಸೈಯ್ಯದ್ ಜಲಾಲುದ್ದೀನ್ ಅಲ್ ಹಾದಿ ತಂಞಳ್ ನ ಅಧೀನದಲ್ಲಿರುವ “ಮಲ್ಜ ದಅವತಿಲ್ ಇಸ್ಲಾಮಿಯ್ಯ” ಇದರ ಕುವೈಟ್ ಸೆಂಟ್ರಲ್ ಕಮಿಟಿಯ ವತಿಯಿಂದ ಮಹಬೂಲದಲ್ಲಿರುವ ಅಲ್ ಈಸಾ ಬಿಲ್ಡಿಂಗ್ ನ ಆರನೇ ಮಹಡಿಯಲ್ಲಿ ಜನಾಬ್ ಇಮ್ರಾನ್ ರವರ ಫ್ಲ್ಯಾಟ್ ನಲ್ಲಿ ಶುಕ್ರವಾರ ದಿನಾಂಕ 5/12/2014 ರಂದು ಜುಮಾ ನಮಾಝಿನ ನಂತರ ಸ್ವಲಾತ್ ಮಜ್ಲಿಸ್ ನಡೆಯಿತು.
ಇದರ ನೇತೃತ್ವವನ್ನು ಫಾರೂಕ್ ಸಖಾಫಿಯವರು ವಹಿಸಿದ್ದರು. ಸ್ವಲಾತ್ ನ ನಂತರ ಕುವೈಟ್ ನ ಮಲ್ಜ ಕಮಿಟಿಯ ಪ್ರಧಾನ ಸಂಯೋಜಕರಾದ ಜನಾಬ್ ಯಾಕೂಬ್ ಅಬ್ದುಲ್ ರಹಿಮಾನ್ ಕಾರ್ಕಳ ಇವರು ಉಜಿರೆ ತಂಞಳ್ ರವರು ನಿರ್ವಹಿಸುವ ಸಮಾಜ ಸೇವೆಗಳನ್ನು ಸಂಕ್ಷಿಪ್ತವಾಗಿ ಎಲ್ಲರಿಗೂ ಮನವರಿಕೆಯಾಗುವ ಹಾಗೆ ವಿವರಿಸಿದರು.
ಇನ್ನೋರ್ವ ಮುಖ್ಯ ಅಥಿತಿಯಾಗಿ ಆಗಮಿಸಿದ ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮಿಯವರು ಮಾತನಾಡುತ್ತಾ, ಇಂದು ಕರ್ನಾಟಕದಲ್ಲಿ ಅದೆಷ್ಟೋ ಸಮಾಜಸೇವಾ ಘಟಕಗಳಿರಬಹುದು. ಆದರೆ ಉಜಿರೆ ತಂಞಳ್ ಎಂದೇ ಖ್ಯಾತಿಯನ್ನು ಗಳಿಸಿದ ಸೈಯ್ಯದ್ ಜಲಾಲುದ್ದೀನ್ ತಂಞಳ್ ರವರ ಸೇವೆಯು ನಿಸ್ವಾರ್ಥ ಹಾಗೂ ಮಾದರೀ ಸೇವೆ ಎಂಬುವುದರಲ್ಲಿ ಎರಡು ಮಾತಿಲ್ಲ. ಕೆಲವೇ ಕೆಲವು ವರ್ಷಗಳಲ್ಲಿ ತಾವು ಹಮ್ಮಿಕೊಂಡ ಅಪರೂಪದ ಚಟುವಟಿಕೆಗಳನ್ನು ವಿವರಿಸಲು ಶಬ್ದಗಳು ಸಾಕಾಗುತ್ತಿಲ್ಲ. ಇಂತಹ ಬಹುಮುಖಿ ಪ್ರತಿಭೆಯುಳ್ಳ ವ್ಯಕ್ತಿಯನ್ನು ಹಾಗೂ ಅವರು ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಎಲ್ಲಾ ರೀತಿಯಿಂದಲೂ ನಾವು ಸಹಕರಿಸಬೇಕು ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅಥಿತಿಯವರಾದ ಜನಾಬ್ ಮನ್ಸೂರ್ ಅಹ್ಮದ್(ಪ್ರಧಾನ ಕಾರ್ಯದರ್ಶಿ ಕೆ.ಸಿ.ಎಫ್.ಕುವೈಟ್) ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಪ್ರಧಾನ ಮಜ್ಲಿಸ್ ನಲ್ಲಿ ಇಬ್ರಾಹಿಂ ವೇಣೂರು(ಪ್ರಧಾನ ಕಾರ್ಯದರ್ಶಿ ಮಲ್ಜ ಕಮಿಟಿ ಕುವೈಟ್) ಹಾಗೂ ಅಶ್ರಫ್ ಮೂಡಬಿದ್ರೆ(ಕೋಶಾಧಿಕಾರಿ ಮಲ್ಜ ಕಮಿಟಿ ಕುವೈಟ್) ಹಮೀದ್ ಕಾಶಿಪಟ್ಣ, ಹೈದರಾಕ, ನಾಸಿರ್ ಆದ್ಯಪ್ಪಾಡಿ(ಅಧ್ಯಕ್ಷರು ಕೆ.ಕೆ.ಎಮ್.ಎ.ಕುವೈಟ್ ಫಹಾಹೀಲ್ ಯುನಿಟ್),ಇಕ್ಬಾಲ್(ಅಧ್ಯಕ್ಷರು ಕೆ.ಸಿ.ಎಫ್.ಫರ್ವಾನಿಯ ಘಟಕ) ಕಾದ್ರಿಯಾಕ ಹಾಗೂ ಇನ್ನಿತರ ಹಲವು ಸದಸ್ಯರೂ ಕಾರ್ಯಕರ್ತರೂ ಉಪಸ್ಥಿತರಿದ್ದರು.
ಯಾಕೂಬ್ ಕಾರ್ಕಳ ಇವರು ಅಥಿತಿಗಳಿಗೆ ಧನ್ಯವಾದವಿತ್ತರು. ಜನಾಬ್ ಫಾರೂಕ್ ಸಖಾಫಿಯವರ ದುವಾಃದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು. ಕೊನೆಯಲ್ಲಿ ಎಲ್ಲಾ ಅಥಿತಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.