ಅಂತರಾಷ್ಟ್ರೀಯ

ಭಾರತದ ಆಶಾ ಭಟ್ ಮಿಸ್‌ಸೂಪರ್ ನ್ಯಾಷನಲ್

Pinterest LinkedIn Tumblr

Miss-super

ನವದೆಹಲಿ,ಡಿ.6: ಭಾರತದ ಆಶಾಭಟ್ ಅವರು ಮಿಸ್ ಸೂಪರ್‌ನ್ಯಾಷನಲ್ 2014 ಸೌಂದರ್ಯ ಸ್ಪರ್ಧೆಯಲ್ಲಿ ವಿಜಯಿಯಾಗಿದ್ದು , ಈ ಪ್ರಶಸ್ತಿ ಪಡೆಯುತ್ತಿರುವ ಮೊದಲ ಭಾರತೀಯ ಯುವತಿಯಾಗಿದ್ದಾಳೆ.

ಪೋಲ್ಯಾಂಡ್‌ನ ವಾರ್ಸದಲ್ಲಿ ಕಳೆದ ರಾತ್ರಿ ನಡೆದ ಈ ಅಂತಿಮ ಹಂತದ ಸ್ಪರ್ಧೆಯಲ್ಲಿ 70 ರಾಷ್ಟ್ರಗಳ ಸುಂದರಿಯರನ್ನು ಹಿಂದಿಕ್ಕಿ ಈ ಭಾರತ ಸುಂದರಿ ಮಿಸ್ ಸೂಪರ್ ನ್ಯಾಷನಲ್ ಕಿರೀಟ ಧರಿಸಿದಳು. ಸೌಂದರ್ಯ ಸ್ಪರ್ಧೆಯಲ್ಲಿ ಜಯಗಳಿಸಿದ ಆಶಾಭಟ್‌ಗೆ ಕಳೆದ ಬಾರಿಯ ಮಿಸ್ ಸೂಪರ್ ನ್ಯಾಷನಲ್ ಫಿಲಪೈನ್ಸ್ ಮುತ್ಯಾ ದತೂಲ್ ಕಿರೀಟ ತೊಡಿಸಿದರು. ಈ ಸಂದರ್ಭ ಹರ್ಷ ವ್ಯಕ್ತಪಡಿಸಿದ ಆಶಾ ಭಟ್ ಈ ಗೆಲುವನ್ನು ನಾನು ಕನಸಿನಲ್ಲೂ ಎಣಿಸಿರಲಿಲ್ಲ ಎಂದು ಹೇಳಿದರು.

Write A Comment