ರಾಷ್ಟ್ರೀಯ

ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿಗೆ ಭಯೋತ್ಪಾದಕರ ಯತ್ನ: ಮೋದಿ

Pinterest LinkedIn Tumblr

Narendra-Modi

ಹಜಾರಿಬಾಗ್(ಜಾರ್ಖಂಡ್): ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ದಾಳಿ ನಡೆಸುವುದರ ಮೂಲಕ ಭಯೋತ್ಪಾದಕರು ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜಾರ್ಖಂಡ್‌ನ 3ನೇ ಹಂತದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಜಾರಿಬಾಗ್‌ನಲ್ಲಿ ಪ್ರಚಾರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದೇ ವೇಳೆ ಉಗ್ರರ ದಾಳಿ ಪ್ರತಿಯಾಗಿ ದಾಳಿ ನಡೆಸಿ ಧೈರ್ಯಶಾಲಿಯಾಗಿ ಮಡಿದ ಎಲ್ಲಾ ಯೋಧರಿಗೂ ನನ್ನ ಸೆಲ್ಯೂಟ್ ಎಂದರು.

ಗಡಿ ನಿಯಂತ್ರಣ ರೇಖೆ ಬಳಿ ಅನಧಿಕೃತವಾಗಿ ಭಾರತದ ಗಡಿಯೊಳಗೆ ನುಸುಳಿ ಭಾರತೀಯ ಸೇನಾ ಕ್ಯಾಂಪ್‌ಗಳ ಮೇಲೆ ದಾಳಿ ನಡೆಸಿದ್ದು ಖಂಡನೀಯ, ನಮ್ಮ ಪ್ರಜಾಪ್ರಭುತ್ವದ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಿರುವ ಭಯೋತ್ಪಾದಕರು ನಾಚಿಕೆ ಪಡಬೇಕು. ಅಲ್ಲದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹೊಡೆದೋಡಿಸಬೇಕಿದೆ ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ ಜಾರ್ಖಂಡ್ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನತೆ ಏನು ಹೇಳುತ್ತಾರೋ ಅದನ್ನು ಶಿರಸಾವಹಿಸಿ ಮಾಡುತ್ತನೆ. ನಾನು ಜತೆಯ ಆಜ್ಞೆಯ ಪರಿಪಾಲಕ ಎಂದರು. ದೇವರು ಜಾರ್ಖಂಡ್‌ಗೆ ಸಾಕಷ್ಟು ಸಂಪತ್ತು ನೀಡಿದ್ದಾನೆ. ನೈಸರ್ಗಿಕ ಸಂಪನ್ಮೂಲ ಜಾರ್ಖಂಡ್‌ಗೆ ಒಲಿದಿರುವ ಅದೃಷ್ಟ. ಇಷ್ಟೊಂದು ಸಂಪತ್ತನ್ನು ಹೊಂದಿದ್ದರು ಜಾರ್ಖಂಡ್ ಆರ್ಥಿಕವಾಗಿ ಹಿಂದೂಳಿದಿದೆ. ಹೀಗಾಗಿ ಆರ್ಥಿಕ ದೃಷ್ಠಿಯಿಂದಲೂ ಜಾರ್ಖಂಡನ್ನು ಬಲಗೊಲಿಸಬೇಕಿದೆ ಎಂದರು.

ಜಾರ್ಖಂಡ್‌ನಲ್ಲಿ ಹಿಂದಿನಿಂದಲೂ ಜಾತಿವಾದಿಗಳ ಪ್ರಭಾವಳಿ ಹೆಚ್ಚಿದೆ. ಜಾತಿವಾದಿ ಒಳಗೊಂಡ ರಾಜ್ಯ ನೀತಿ ಇನ್ನು ಮುಂದೆ ನಡೆಯಲು ಬಿಡುವುದಿಲ್ಲ ಎಂದರು.

Write A Comment