ಕನ್ನಡ ಚಿತ್ರರಂಗದಲ್ಲಿ ವೀಣಾ ಮಲ್ಲಿಕ್ ‘ನಟನೆ’ ನೋಡಿ ತಲೆಕೆಡಿಸಿಕೊಂಡ ಪಡ್ಡೆ ಹುಡುಗರಿಗೆ ಮತ್ತೊಂದು ಖುಷಿ ಸುದ್ದಿ! ಕನ್ನಡದ ಚಿತ್ರ ಪ್ರೇಮಿಗಳ ಎದೆ ಝಲ್ ಎನಿಸಲು ಇದೀಗ ಮುಂಬೈ ಬೆಡಗಿ ಮೇಘನಾ ಪಟೇಲ್ ಎಂಬ ಬಿಚ್ಚಮ್ಮ ಕನ್ನಡಕ್ಕೆ ಎಂಟ್ರಿಯಾಗಲಿದ್ದು ಸದ್ಯದಲ್ಲಿಯೇ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.
ಲೋಕಸಭಾ ಚುನಾವಣೆ ಸಮಯದಲ್ಲಿ ಪ್ರಧಾನಿ ಮೋದಿ ಅವರಿಗೇ ಮತ ನೀಡಿ ಎಂದು ಬಟ್ಟೆ ಬಿಚ್ಚಿ ನಗ್ನವಾಗಿ ಮತಯಾಚನೆ ಮಾಡಿದ್ದ ಈ ನಿರಾಭರಣ ಸುಂದರಿ ಮೇಘನಾ ಪಟೇಲ್ ಇದೀಗ ಕನ್ನದಲ್ಲಿ ನಟಿಸಲು ತುದಿಗಾಲಲ್ಲಿ ನಿಂತಿದ್ದಾರೆ. ವಿಶೇಷವೆಂದರೆ ಸಿಲ್ಕ್ ಚಿತ್ರದಲ್ಲಿ ವೀಣಾ ಮಲ್ಲಿಕ್ ರಿಗೆ ಡೈರೆಕ್ಟ್ ಮಾಡಿದ್ದ ನಿರ್ದೇಶಕರೇ ಈ ಚಿತ್ರಕ್ಕೂ ನಿರ್ದೇಶನ ಮಾಡಲಿದ್ದು ಕನ್ನಡ ಚಿತ್ರದಲ್ಲಿ ಮೇಘನಾರ ‘ಪ್ರತಿಭೆ’ಯನ್ನು ಎಷ್ಟು ಹೊರಕ್ಕೆ ತರುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.
ಸಾಧು ಕೋಕಿಲ ಹೀರೊ ಆಗಿ ಅಭಿನಿಸುತ್ತಿರುವ ಈ ಚಿತ್ರದಲ್ಲಿ ನಿರ್ದೇಶಕ ತ್ರಿಶೂಲ್ ಹಾಸ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದು ಈಗಾಗಲೇ ಸಿನಿಮಾದ ಸಾಂಗ್ ರೆಕಾರ್ಡಿಂಗ್ ಕೂಡ ಮುಗಿದಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಸದ್ಯದಲ್ಲಿಯೇ ಆರಂಭವಾಗಲಿರುವ ಈ ಚಿತ್ರದ ಮೂಲಕ ಮೇಘನಾ ಪಟೇಲ್ ಕನ್ನಡ ರಸಿಕರ ಹೃದಯಕ್ಕೆ ಕಿಚ್ಚು ಹಚ್ಚುವುದಂತೂ ಸತ್ಯ.!