ಕರ್ನಾಟಕ

ಮಹಿಳೆಗೆ ಇರಿದು ತಾನು ಆತ್ಮಹತ್ಯೆಗೆ ಯತ್ನಿಸಿದ ಜಿಮ್ ಇನ್‌ಸ್ಟ್ರಕ್ಟರ್

Pinterest LinkedIn Tumblr

suc

ಬೆಂಗಳೂರು,ಡಿ.8: ಶಾಲೆಯಿಂದ ಮಗುವನ್ನು ಕರೆತರಲು ಹೋಗುತ್ತಿದ್ದ ಗೃಹಿಣಿಯನ್ನು ಹಿಂಬಾಲಿಸಿದ ಜಿಮ್ ಇನ್‌ಸ್ಟ್ರಕ್ಟರ್‌ವೊಬ್ಬ ಅಟ್ಟಾಡಿಸಿಕೊಂಡು ಆಕೆಗೆ ಚಾಕುವಿನಿಂದ ಇರಿದು, ತಾನು ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಭೀಕರ ಘಟನೆ ರಾಮಮೂರ್ತಿ ನಗರದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಇಂದು ಮಧ್ಯಾಹ್ನ 12.30ರಲ್ಲಿ ಮಂಜುಳಾ ಎಂಬುವರು ಮಗುವನ್ನು ಶಾಲೆಯಿಂದ ಕರೆತರಲು ಹೋಗುವಾಗ ಒಎಂಬಿಆರ್ ಲೇಔಟ್‌ನ ಛಾಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಳಿ ಜಿಮ್ ಇನ್‌ಸ್ಟ್ರಕ್ಟರ್ ಸ್ಟೀಫನ್ ಎಂಬಾತ ಹಿಂಬಾಲಿಸಿದ್ದಾನೆ. ಆಗ ಗೃಹಿಣಿ ತಪ್ಪಿಸಿಕೊಳ್ಳಲು ಓಡಿದ್ದು, ಬೆನ್ನಟ್ಟಿದ ಆರೋಪಿ ಆಕೆಗೆ ಚಾಕುವಿನಿಂದ ಹೊಟ್ಟೆಗೆ ಇರಿದು ಕೊಲೆಗೆ ಯತ್ನಿಸಿ ನಂತರ ತಾನು ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಘಟನೆಯನ್ನು ಕಂಡ ಸಾರ್ವಜನಿಕರು ಗಾಯಾಳುಗಳಿಬ್ಬರನ್ನು ಛಾಯಾ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸುದ್ದಿ ತಿಳಿದು ರಾಮಮೂರ್ತಿನಗರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಆಕೆಯ ಮೇಲಿನ ವ್ಯಾಮೋಹ ದಿಂದ ಕೃತ್ಯ ನಡೆಸಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

ಒಎಂಬಿಆರ್ ಲೇಔಟ್‌ನಲ್ಲಿರುವ ಜಿಮ್‌ವೊಂದರಲ್ಲಿ ಸ್ಟೀಫನ್ ಇನ್‌ಸ್ಟ್ರಕ್ಟರ್ ಆಗಿದ್ದು, ಅಲ್ಲಿಗೆ ಮಂಜುಳಾ ಅವರು ಹೋಗುತ್ತಿದ್ದರು. ಕೆಲವು ತಿಂಗಳಿನಿಂದ ಆಕೆ ಜಿಮ್‌ಗೆ ಹೋಗುವುದನ್ನು ನಿಲ್ಲಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಕಳೆದ ಒಂದೂವರೆ ತಿಂಗಳ ಹಿಂದೆ ಸ್ಟೀಫನ್‌ನನ್ನು ಜಿಮ್‌ನವರು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ತಿಳಿದುಬಂದಿದೆ.

Write A Comment