ಕರ್ನಾಟಕ

ಸುವರ್ಣ ಸೌಧದ ಬಳಿ ಪ್ರತಿಭಟನೆ ನಡೆಸಿದೆ ವಾಟಾಳ್ ಬಂಧನ

Pinterest LinkedIn Tumblr

vatal

ಬೆಳಗಾವಿ, ಡಿ.8: ನಾಳೆಯಿಂದ ಸುವರ್ಣಸೌಧದಲ್ಲಿ ಆರಂಭ ವಾಗಲಿರುವ ವಿಧಾ ಮಂಡಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ಯಾಗಬೇಕು, ಪ್ರತಿಪಕ್ಷಗಳ ಅನಾವಶ್ಯಕ ಪ್ರತಿಭಟನೆ ಅಧಿವೇಶನವನ್ನು ಹಾಳುಗೆಡವಬಾರದು ಎಂದು ಆಗ್ರಹಿಸಿ ಇಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಹಾಸಿಗೆ, ದಿಂಬು, ಚಾಪೆ ಸಮೇತ ಸುವರ್ಣಸೌಧದ ಬಳಿ ಬಂದ ವಾಟಾಳ್ ನಾಗರಾಜ್ ಸುಗಮ ಅಧಿವೇಶನ ನಡೆಯಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ದರಲ್ಲದೆ, ಇದುವರೆಗೂ ಸುವರ್ಣ ಸೌಧದಲ್ಲಿ ಐದು ಅಧಿವೇಶನಗಳು ನಡೆದಿವೆ. ಆದರೆ ಉತ್ತರಕರ್ನಾಟಕದ ಸಮಸ್ಯೆಗಳ ಬಗ್ಗೆ ಯಾವುದೇ ಮಹತ್ವದ ಚರ್ಚೆ ನಡೆದಿಲ್ಲ ಎಂಬುದು ಗಮನಾರ್ಹ. ಈ ನಿಟ್ಟಿನಲ್ಲಿ ಈ ಬಾರಿಯ ಅಧಿವೇಶನ ಬೆಂಗಳೂರಿನಲ್ಲಿ ನಡೆಯುವ ಅಧಿವೇಶನದಂತಾಗಬಾರದು ಎಂದು ಒತ್ತಾಯಿಸಿದರು. ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಹಾಗೂ ಆಡಳಿತಾರೂಢ ಪಕ್ಷ ಕಾಂಗ್ರೆಸ್ ಎಲ್ಲಾ ಸಮಸ್ಯೆಗಳ ರಚನಾತ್ಮಕ ಚರ್ಚೆಯಲ್ಲಿ ಪಾಲ್ಗೊಂಡು ಸಮಸ್ಯೆಗಳ ಪರಿ ಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸರ್ಕಾರ ಬೇಕಿದ್ದರೆ ನನ್ನನ್ನು ಬಂಧಿಸಿ ಯಾವುದೇ ಶಿಕ್ಷೆ ಕೊಡಲಿ, ಅದಕ್ಕೆ ಹೆದರುವುದಿಲ್ಲ ಎಂದು ಹೇಳಿದರು. ಪ್ರತಿಭಟನೆ ನಡೆಸುತ್ತಿದ್ದ ವಾಟಾಳ್ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.

Write A Comment