ಕನ್ನಡ ವಾರ್ತೆಗಳು

ಉಡುಪಿ: ಇಸ್ಫೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ: ನಾಲ್ವರ ಬಂಧನ; ನಾಲ್ವರು ಎಸ್ಕೇಪ್; 58 ಸಾವಿರ ನಗದು ವಶ

Pinterest LinkedIn Tumblr

Ispit

ಉಡುಪಿ: ತಾಲೂಕಿನ ಹೈಕಾಡಿ ಎಂಬಲ್ಲಿ ತಡರಾತ್ರಿ ಮನೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು ಇಸ್ಫೀಟ್ ಜುಗಾರಿಯಲ್ಲಿ ತೊಡಗಿದ್ದ ೮ ಜನ ಜೂಜುಕೋರರ ಪೈಕಿ ನಾಲ್ವರನ್ನು ಬಂಡಿಸಿದ್ದು ನಾಲ್ವರು ಎಸ್ಕೇಪ್ ಆಗಿದ್ದಾರೆ.

ದಕ್ಷ ಅಧಿಕಾರಿ ಎಂದೇ ಖ್ಯಾತರಾದ ಕಾರ್ಕಳ ಉಪವಿಭಾಗದ ಎ.ಎಸ್ಪಿ. ಅಣ್ಣಾಮಲೈ ನೇತ್ರತ್ವದಲ್ಲಿ ತಡರಾತ್ರಿ ಹೈಕಾಡಿ ಗ್ರಾಮದ ಮನೆಯೊಂದಕ್ಕೆ ಶಂಕರನಾರಾಯಣ ಪೊಲೀಸರು ದಾಳಿ ನಡೆಸಿದ್ದು ಈ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ನಾಲ್ವರು ಪೊಲೀಸರ ಅತಿಥಿಗಳಾದರೇ ಇನ್ನು ನಾಲ್ವರು ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ.

1). ಸುರೇಶ ಶೆಟ್ಟಿ,  2). ಪ್ರವೀಣ,3). ಶಂಕರ, 4) ರಾಜೇಶ, 5). ಸಣ್ಣಯ್ಯ, 6). ರಮೆಶ, 7). ಮುನಾಫ್ 8). ಸುಬ್ಬ ಕುಲಾಲ್ ಎನ್ನುವವರು ಜೂಜು ಆಡುತ್ತಿದ್ದವರಾಗಿದ್ದಾರೆ.

ಬಂದಿತ ಜೂಜುಕೋರರಿಂದ 58 ಸಾವಿರ ನಗದು ಹಾಗೂ ಆಟಕ್ಕೆ ಬಳಸಿದ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment