ಮಂಗಳೂರು,ಡಿ.15 : ಕ್ರೀಡಾ ಭಾರತಿ ಮಂಗಳೂರು ಇದರ ಅಶ್ರಯದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ರಾಜ್ಯ ಮಟ್ಟದ ಕಬ್ಬಡಿ ಕ್ರೀಡಾಕೂಟ ಮತ್ತು ಕರ್ನಾಟಕ ರಾಜ್ಯ ಕ್ರೀಡಾ ಘಟಕದ ಉದ್ಘಾಟನೆಯು ನೆರವೇರಿತು. ಉದ್ಘಾಟನೆಯನ್ನು ಕ್ರೀಡಾ ಭಾರತಿಯ ಅಖಿಲ ಭಾರತ ಸಂಯೋಜಕರಾದ ಶ್ರೀ ರಾಜ್ ಚೆಧುರಿ ದೀಪ ಪ್ರಜ್ವಲನ ಮತ್ತು ಹಿಂಗಾರ ಅರಳಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಪೂವಮ್ಮ ಮತ್ತು ಸಹನಾ ಕುಮಾರಿ ಯವರಿಗೆ ಕ್ರೀಡಾಭಾರತಿ ವತಿಯಿಂದ ಸನ್ಮಾನ ಸಮಾರಂಭವು ನಡೆಯಿತು.
ಸಂಸದ ನಳೀನ್ ಕುಮಾರ್ ಕಟೀಲ್ ,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಾಲಕ ಪಿ ವಿ ಶೆಣೈ , ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ , ಮೋಹನ್ ಆಳ್ವ , ಎಂ ಬಿ ಪುರಾಣಿಕ್ ಅಂತರಾಷ್ಟ್ರೀಯ ಕ್ರೀಡಾ ಪಟುಗಳಾದ ರೈಮಂಡ್ ಡಿಸೋಜಾ, ಪೂವಮ್ಮ, ಸಹನಾ ಕುಮಾರಿ , ಚಂದ್ರ ಶೇಖರ್ ಜಾಗೀರ್ ದಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಕಾಲೇಜಿನ ಕ್ರೀಡಾ ಪಟುಗಳು ಪಾಲ್ಗೊಂದಿದ್ದರು.