ಕರ್ನಾಟಕ

ಇನ್ನು ಮುಂದೆ ವಿಧಾನಸಭೆಯ ಕಲಾಪದಲ್ಲಿ ಮೊಬೈಲ್ ರಿಂಗಣಿಸುದಿಲ್ಲ !

Pinterest LinkedIn Tumblr

Mob net

ಬೆಳಗಾವಿ: ಬಿಜೆಪಿ ಶಾಸಕ ಪ್ರಭು ಚವಾಣ್ ವಿಧಾನಮಂಡಲದ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲೇ ಸದನದಲ್ಲಿ ಮೊಬೈಲ್ ವೀಕ್ಷಿಸಿದ ಪ್ರಕರಣ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಹಿನ್ನಲೆಯಲ್ಲಿ ಸದನದಲ್ಲಿ ಮೊಬೈಲ್ ಬಳಕೆಯನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ನಿಷೇಧಿಸಿದ್ದಾರೆ.

ಈ ಹಿನ್ನಲೆಯಲ್ಲಿ ಇಂದು ನಡೆಯುತ್ತಿರುವ ಕಲಾಪದಲ್ಲಿ ಭಾಗವಹಿಸಲು ಆಗಮಿಸಿದ ಶಾಸಕರುಗಳು ಸುವರ್ಣ ಸೌಧದಲ್ಲಿ ವ್ಯವಸ್ಥೆ ಮಾಡಲಾಗಿರುವ ಕೌಂಟರಿನಲ್ಲಿ ತಮ್ಮ ತಮ್ಮ ಮೊಬೈಲ್ ಗಳನ್ನಿಟ್ಟು ಟೋಕನ್ ಪಡೆದುಕೊಂಡಿದ್ದಾರೆ. ಇದಕ್ಕೆ ಮಂತ್ರಿಗಳೂ ಹೊರತಾಗಿಲ್ಲವಾಗಿದ್ದು ಅವರುಗಳೂ ಸಹ ತಮ್ಮ ಮೊಬೈಲನ್ನು ಕೌಂಟರ್ ಬಳಿ ಇದ್ದ ಸಿಬ್ಬಂದಿಗೆ ನೀಡಿ ಟೋಕನ್ ಪಡೆದುಕೊಂಡಿದ್ದಾರೆ.

ವಿಧಾನಸಭಾಧ್ಯಕ್ಷರ ಈ ಖಡಕ್ ತೀರ್ಮಾನದಿಂದಾಗಿ ಇನ್ನು ಮುಂದೆ ಕಲಾಪದಲ್ಲಿ ಮೊಬೈಲ್ ರಿಂಗಣಿಸುವುದು ತಪ್ಪಿದಂತಾಗಿದ್ದು, ಕದ್ದು ಮುಚ್ಚಿ ಮೊಬೈಲ್ ನಲ್ಲಿ ಆಟವಾಡುವವರು, ಚಿತ್ರಗಳನ್ನು ವೀಕ್ಷಿಸುವುದಕ್ಕೆ ಕಡಿವಾಣ ಬಿದ್ದಂತಾಗಿದೆ. ವಿಧಾನಸಭಾಧ್ಯಕ್ಷರ ಈ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲ ಶಾಸಕರುಗಳು ಇದನ್ನು ಸ್ವಾಗತಿಸಿದರೆ ಮತ್ತೆ ಕೆಲವರು ಕ್ಷೇತ್ರದಲ್ಲಿ ಒಮ್ಮೊಮ್ಮೆ ಏನಾದರೂ ಸಮಸ್ಯೆಯುಂಟಾದರೆ ತುರ್ತು ಕರೆ ಬರುವ ಸಾಧ್ಯತೆಯಿರುತ್ತದೆ. ಇದರಿಂದಾಗಿ ತಾವುಗಳು ತಕ್ಷಣಕ್ಕೆ ಸ್ಪಂದಿಸುವುದು ಕಷ್ಟವಾಗುತ್ತದೆ ಎಂದಿದ್ದಾರೆ.

Write A Comment