ಮಂಗಳೂರು,ಡಿ.17 : ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ 317D ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘ, ಶಾಸ್ತಾವು ಶ್ರೀ ಭೂತನಾಥೇಶ್ವರ ಟ್ರಸ್ಟ್ ಮತ್ತು ಲಯನ್ಸ್ ಕ್ಲಬ್ ವತಿಯಿಂದ ನಡೆದ ವಿಜಯ ದಿವಸ ಆಚರಣೆಯ ಸಭಾ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ವೀರ ಯೋಧರನ್ನು ಸನ್ಮಾನಿಸಲಾಯಿತು.
ಭಾರತೀಯ ನೌಕಾಪಡೆಯ ವಿಶಿಷ್ಟ ಸೇವಾ ಕಮಾಂಡರ್ ಜೆರೋಮ್ ಕ್ಯಾಸ್ಟಲಿನೊ, ಅಪಾರ ಜಿಲ್ಲಾಧಿಕಾರಿ ಮತ್ತು ಬ್ರಿಗೇಡಿಯರ್ ಸದಾಶಿವ ಪ್ರಭು, ,ಶಿವಸೇನೆ ಪದಕ ಪುರಸ್ಕೃತ, ವಿನೋದ್ ಅಡಪ್ಪ
ಅವರನ್ನು ಸಮ್ಮಾನಿಸಲಾಯಿತು.
ಪಶ್ಚಿಮ ವಲಯ ಐಜಿಪಿ ಅಮೃತ್ ಪೌಲ್, ಲಯನ್ಸ್ ಪದಾಧಿಕಾರಿಗಳಾದ ಕವಿತಾ ಶಾಸ್ತ್ರಿ, ಅರುಣ್ ಶೆಟ್ಟಿ, ಬ್ರಿ . ಐ.ಎನ್. ರೈ, ಕಾಂತಪ್ಪ ಶೆಟ್ಟಿ, ಅರ್ಜುನ್ ರೈ, ವಿಶಾಲ್ ಹೆಗ್ಡೆ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ಲಯನ್ಸ್ ಜಿಲ್ಲೆ 317ಡಿಯ ಜಿಲ್ಲಾ ಗವರ್ನರ್ ಎಚ್.ಎಸ್. ಮಂಜುನಾಥ್ ಮೂರ್ತಿ ಪ್ರಸ್ತಾವನೆಗೈದರು. ಕರ್ನಲ್ ಎನ್.ಎಸ್. ಭಂಡಾರಿ ಸ್ವಾಗತಿಸಿದರು. ಅಕ್ಷತಾ ಶೆಟ್ಟಿ, ರವೀಂದ್ರನಾಥ್ ಶೆಟ್ಟಿ ನಿರೂಪಿಸಿದರು.