ಕರ್ನಾಟಕ

ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ ಒಂದೇ ಕುಟುಂಬದ 6 ಮಂದಿ ಸಾವು

Pinterest LinkedIn Tumblr

krishna

ಬಾಗಲಕೋಟೆ: ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟ ಘಟನೆ ಹುನಗುಂದ ತಾಲೂಕಿನಲ್ಲಿರುವ ಇಂದ್ವಾರ-ಇಸ್ಲಾಂಪುರ ಸಮೀಪದಲ್ಲಿ ನಡೆದಿದೆ.

ಇಸ್ಲಾಂಪುರದಲ್ಲಿ ಮದುವೆಗೆ ತೆರಳಿ ಮರಳಿ ಬರುವಾಗ ಮಧ್ಯಾಹ್ನ 2 ಗಂಟೆಯ ವೇಳೆಯ ಈ ದುರ್ಘಟನೆ ನಡೆದಿದ್ದು ಮೃತ ಪಟ್ಟವರೆಲ್ಲರೂ ಕೌಜಗನೂರು ಗ್ರಾಮದ ವ್ಯಕ್ತಿಗಳು ಎಂದು ಗುರುತಿಸಲಾಗಿದೆ
.
ತೆಪ್ಪದಲ್ಲಿ ಎಂಟು ಮಂದಿ ಪ್ರಯಾಣಿಸಿದ್ದು ಮಾಹಂತೇಶ್ ಮತ್ತು ರೇಣುಕಾ ಈಜಿ ಪಾರಾಗಿದ್ದಾರೆ. ಮಲ್ಲವ್ವ (22), ಮಂಜವ್ವ(18), ಹುಲಗವ್ವ(21), ಕರಿಯಪ್ಪ(38) ಸಚಿನ್(4), ಸಾವಿತ್ರಿ(6) ಮೃತರು.

ಮಹಾಂತೇಶ್ ಎಂಬವರ ಅಣ್ಣನ ಮದುವೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟ ಎಳೆಯ ಕಂದಮ್ಮಗಳಾದ ಸಚಿನ್ ಮತ್ತು ಸಾವಿತ್ರಿ ರೇಣುಕಾ ಅವರ ಮಕ್ಕಳಾಗಿದ್ದಾರೆ.

Write A Comment