ಮಂಗಳೂರು : ಬೆಂಗಳೂರು ತುಳುಕೂಟ ಹಾಗೂ ಬಂಟ ಸಮುದಾಯದಲ್ಲಿ ಸಕ್ರೀಯರಾಗಿ ತೊಡಗಿಕೊಂಡಿದ್ದ ನಿವೃತ್ತ ಯೋಧ ಎಸ್. ಆರ್. ಹೆಗ್ಡೆ(65) ಸೋಮವಾರ ಯಳ್ಳಮಾವಸ್ಯೆ ಸ್ನಾನಕ್ಕೆ ಸಮುದ್ರಕ್ಕೆ ತೆರಳಿದ್ದಾಗ ಮುಳುಗಿ ದುರ್ಮರಣ ಹೊಂದಿದ್ದಾರೆ.
ಇಲ್ಲಿನ ಪುರಾತನ ಮಾರಿಯಮ್ಮ ದೇವಸ್ಥಾನದ ಬಳಿಯ ಲಿಬರ್ಟಿ ಕರಿಯ ಎಂಬಲ್ಲಿ ಸಮುದ್ರಕ್ಕೆ ಎಳ್ಳಮವಾಸ್ಯೆ ಸ್ನಾನಕ್ಕೆ ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ. ಸಮೀಪದ ಚೇಳಾರುಗುತ್ತು ಮನೆತನದವರಾದ ಎಸ್. ಆರ್. ಹೆಗ್ಡೆ ಬೆಂಗಳೂರಿನಲ್ಲಿ ವಾಸವಾಗಿದ್ದು, ಇಲ್ಲಿರುವ ತಮ್ಮ ಫ್ಲ್ಯಾಟ್‌ಗೆ ಭಾನುವಾರವಷ್ಟೆ ಬಂದಿದ್ದರು.
ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಅವರು ತನ್ನ ಫ್ಲ್ಯಾಟ್‌ಗೆ ಸ್ಪಲ್ಪ ದೂರಲ್ಲಿರುವ ಸಮುದ್ರದಲ್ಲಿ ಸ್ನಾನ ಮಾಡಲು ಚಾಲಕನ ಜತೆಗೆ ತೆರಳಿದ್ದರು. ಚಾಲಕ ದಡದ ಬಳಿಯಿದ್ದು ಸಮುದ್ರ ಇಳಿದ ಇವರು ಕಾಣದಿದ್ದಾಗ ಮನೆಯವರಿಗೆ ಹೋಗಿ ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ ಸಮುದ್ರ ಬಿರುಸಾಗಿದ್ದು ಸುಳಿಗಳು ಉಂಟಾಗಿದ್ದವು ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.
ಮನೆಮಂದಿ, ಸುತ್ತಲ ಪರಿಸರದವರದಲ್ಲ ಬಂದರೂ ನೀರಿನಲ್ಲಿ ಮುಳುಗಿದ ವ್ಯಕ್ತಿಯ ತಲಾಶೆ ಸಾಧ್ಯವಾಗಲಿಲ್ಲ. ಸ್ಥಳಕ್ಕೆ ಸಮೀಪದ ಪಣಂಬೂರು ಬೀಚ್ ನಿಂದ ಸ್ಪೀಡ್ ಬೋಟ್‌ನವರು ಧಾವಿಸಿ ಮತದೇಹದ ಶೋಧಕಾರ್ಯ ನಡೆಸಿದರು. ಮತದೇಹ ಬಳಿಕ ಎನ್‌ಐಟಕೆ ಬೀಚ್ ಬಳಿ ಪತ್ತೆಯಾಗಿದೆ.
ಚೇಳ್ಯಾರು ಅಗೋಳಿ ಮಂಜಣ್ಣ ಮನೆತನದವರಾದ ಇವರು ಬೆಂಗಳೂರು ಬಂಟರ ಸಂಘ ಮತ್ತು ತುಳುಕೂಟದಲ್ಲಿ ಸಕ್ರಿಯ ಪದಾಧಿಕಾರಿಯಾಗಿದ್ದರು. ಸೈನ್ಯದಿಂದ ನಿವೃತ್ತರಾದ ಬಳಿಕ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರು ಇತ್ತೀಚೆಗೆ ಮಂಗಳೂರು ಅಡ್ಯಾರ್‌ನಲ್ಲಿ ನಡೆದಿದ್ದ ತುಳು ಪರ್ಬದಲ್ಲಿ ವಿಚಾರ ಮಂಡನೆ ನಡೆಸಿದ್ದರು. ಸಾಹಿತಿಯಾಗಿರುವ ಪತ್ನಿ ಡಾ. ಇಂದಿರಾ ಹೆಗ್ಡೆ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಮತದೇಹದ ಅಂತ್ಯ ಸಂಸ್ಕಾರ ಡಿ. 23ರಂದು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.