ಕನ್ನಡ ವಾರ್ತೆಗಳು

ಮಂಗಳೂರು ಶಾಂತಿ-ಸಹಬಾಳ್ವೆಗೆ ಹೆಸರಾಗಲಿ: ಬಿಷಪ್‌ರಿಂದ ಕ್ರಿಸ್ಮಸ್ ಸಂದೇಶ

Pinterest LinkedIn Tumblr

bisop_house_chrimas_1a

ಮಂಗಳೂರು, ಡಿ.24: ವಿಶ್ವದಲ್ಲೇ ಸುಂದರ ಹಾಗೂ ಶಾಂತಿ ಸುಭಿಕ್ಷೆಯ ನೆಲೆವೀಡಾಗಿ ಮೆರೆಯುತ್ತಿದ್ದ ಮಂಗಳೂರು ಅಶಾಂತಿ, ಗಲಭೆ, ಗೊಂದಲಗಳ ಬೀಡಾಗುತ್ತಿರುವುದು ಖೇದಕರ. ಈ ನಗರವು ಮತ್ತೆ ವಿಶ್ವದಲ್ಲೇ ಶಾಂತಿ, ಸಹಬಾಳ್ವೆಗೆ ಹೆಸರಾಗಲಿ ಎಂದು ಹಾರೈಸಿ ಮಂಗಳೂರು ಬಿಷಪ್ ಅ.ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಕ್ರಿಸ್ಮಸ್ ಸಂದೇಶ ನೀಡಿದ್ದಾರೆ.

bisop_house_chrimas_2

ಬಿಷಪ್ ಹೌಸ್‌ನಲ್ಲಿ ಇಂದು ಕೇಕ್ ಕತ್ತರಿಸಿ ಪತ್ರಿಕಾ ಗೋಷ್ಠಿಯಲ್ಲಿ ಕ್ರಿಸ್ಮಸ್ ಹಬ್ಬದ ಸಂದೇಶ ನೀಡಿದ ಅವರು, ಡಿ.28ರಂದು ಬಿಷಪ್ ಹೌಸ್ ನಲ್ಲಿ ವಿವಿಧ ಆಶ್ರಮಗಳ 200 ಮಂದಿಗೆ ಊಟದ ವ್ಯವಸ್ಥೆಯೊಂದಿಗೆ ಕ್ರಿಸ್ಮಸ್ ಆಚರಿಸುವುದಾಗಿ ತಿಳಿಸಿದರು. ಮಂಗಳೂರು ಧರ್ಮಪ್ರಾಂತದ ವತಿಯಿಂದ ಜಿಲ್ಲೆಯ ತೀರಾ ಬಡ ಕುಟುಂಬದವರಿಗೆ ತಲಪಾಡಿಯ ಮರಿಯಾಶ್ರಮದಲ್ಲಿ 24 ಮನೆಗಳನ್ನು ಕ್ರಿಸ್ಮಸ್ ಕಾಣಿಕೆ ಯಾಗಿ ನೀಡಲಾಗಿದೆ ಎಂದವರು ತಿಳಿಸಿದರು.

bisop_house_chrimas_3 bisop_house_chrimas_4 bisop_house_chrimas_5

ಮಾನವ ಕುಲದ ಐಕ್ಯಕ್ಕಾಗಿ ಹಾಗೂ ಎಲ್ಲರ ಒಳಿತಿಗಾಗಿ ಜನಿಸಿದ ಏಸುಕ್ರಿಸ್ತರು ಮೋಕ್ಷ ಸಂಪಾ ದಿಸಲು ತನ್ನನ್ನೇ ಮುಡಿಪಾಗಿಟ್ಟ ಸ್ಮರಣೆಯ ಆಚ ರಣೆ ಇದಾಗಿದೆ. ಹಾಗಾಗಿ ಎಲ್ಲರೂ ಒಟ್ಟಾಗಿ ಕ್ರಿಸ್ಮಸ್ ಆಚರಿಸುವುದು ಅರ್ಥಪೂರ್ಣ ಎಂದವರು ಹೇಳಿದರು. ಪಾಕಿಸ್ತಾನದ ಪೇಶಾವರದಲ್ಲಿ ದುಷ್ಕರ್ಮಿಗಳ ಗುಂಡಿಗೆ ಹತರಾದ ಮಕ್ಕಳ ಬಗ್ಗೆ ದುಃಖ ವ್ಯಕ್ತಪಡಿಸಿದ ಬಿಷಪ್, ಅವರ ಹೆತ್ತವರಿಗೆ ನೋವು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

bisop_house_chrimas_6

 

ಪತ್ರಿಕಾಗೋಷ್ಠಿಯಲ್ಲಿ ವಂ.ಡೆನಿಸ್ ಮೊರಾಸ್, ಸಾರ್ವಜನಿಕ ಸಂಪರ್ಕ ಅಧಿಕಾರಿ ವಂ. ವಿಲಿಯಂ ಮಿನೇಜಸ್, ಮಾರ್ಸೆಲ್ ಮೊಂತೆರೊ, ಮಂಗಳೂರು ಧರ್ಮಪ್ರಾಂತದ ಪಾಲನಾ ಸಮಿತಿಯ ಕಾರ್ಯದರ್ಶಿ ಎಂ.ಪಿ. ನೊರೊನ್ಹ, ಇ. ಫೆರ್ನಾಂಡಿಸ್, ರೈಮಂಡ್ ಡಿಕುನ್ಹ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

Write A Comment