ಕನ್ನಡ ವಾರ್ತೆಗಳು

ರಾಷ್ಟ್ರ ಪದಕ ವಿಜೇತ ನಿವೃತ್ತ ಎಎಸ್‍ಐ ನಾರಾಯಣ ಮಣಿಯಾಣಿ ಆತ್ಮಹತೈ : ಕಾರಣ ನಿಗೂಡ..

Pinterest LinkedIn Tumblr

narayana_maniyani_suicide1

ಮಂಗಳೂರು, ಡಿ.24 : ರಾಷ್ಟ್ರ ಪದಕ ಹಾಗೂ ಎರಡು ಬಾರಿ ಮುಖ್ಯಮಂತ್ರಿ ಪದಕ ಪಡೆದ ನಿವೃತ್ತ ಎಎಸ್‍ಐ ನಾರಾಯಣ ಮಣಿಯಾಣಿ ಮಂಗಳವಾರ ಸಂಜೆ ತೊಕ್ಕೊಟ್ಟಿನ ವೃಂದಾವನ ಲಾಡ್ಜ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪೊಲೀಸ್ ಇಲಾಖೆಯಲ್ಲಿರುವಾಗ ಅನೇಕ ಕಠಿಣ ಪ್ರಕರಣಗಳನ್ನು ಬೇಧಿಸುವ ಮೂಲಕ ಪ್ರಸಿದ್ಧಿ ಪಡೆದಿದ್ದ ನಾರಾಯಣ ಮಣಿಯಾಣಿ ಅವರ ಆತ್ಮಹತ್ಯೆ ಸಾಕಷ್ಟು ಕುತೂಹಲಗಳನ್ನು ಕೆರಳಿಸಿದೆ.

Police_Maniyani_Sucide_1

ಪೊಲೀಸ್ ಇಲಾಖೆಯಿಂದ ನಿವೃತ್ತಿ ಪಡೆದ ನಂತರ ನಾರಾಯಣ ಮಣಿಯಾಣಿ ತೊಕ್ಕೊಟ್ಟು ಮೂಲದ ಕುರಲ್ ಮೀಡಿಯಾ ಲಿಮಿಟೆಡ್‌ನ ಸಹಯೋಗದೊಂದಿಗೆ ವಿದ್ಯಾಧರ್ ಶೆಟ್ಟಿ ಹಾಗೂ ಅಶೋಕ್ ಶೆಟ್ಟಿ ಬ್ರಹ್ಮರಕೂಟ್ಲು ಇವರ ಪಾಲುದಾರಿಕೆಯಲ್ಲಿ ಮಾಣಿಯಾಣಿ ಕ್ರೈಂ ಚಾನೆಲ್ (ಡೈಲಿ 10 ನ್ಯೂಸ್) ನ್ನು ನಡೆಸುತ್ತಿದ್ದರು. ಮಾತ್ರವಲ್ಲ ಹಣಕಾಸು ವ್ಯವಹಾರವನ್ನೂ ನಡೆಸುತ್ತಿದ್ದರು. ಪೊಲೀಸ್ ಇಲಾಖೆಯಲ್ಲಿರುವಾಗಲೇ ಮಣಿಯಾನಿ ಕುರಿಫಂಡ್ ನಡೆಸುತ್ತಿದ್ದರು. ಅದನ್ನು ನಿವೃತ್ತಿಯ ನಂತರವೂ ಮುಂದುವರಿಸಿದ್ದರು. ಕೊಲ್ಯ ಶ್ರೀಗಳ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದ ನಾರಾಯಣ ಮಣಿಯಾಣಿಯವರ ಆತ್ಮಹತ್ಯೆ ಅವರ ಆತ್ಮೀಯ ಬಳಗವನ್ನು ಗರಬಡಿಸಿದೆ. ಮಣಿಯಾಣಿ ನಿಧನದ ಹಿಂದಿನ ರಹಸ್ಯ ತಿಳಿದುಬಂದಿಲ್ಲವಾದರೂ ಆರ್ಥಿಕವಾಗಿ ಸಶಕ್ತವಾಗಿ ರುವ ಮಾಜಿ ಪೊಲೀಸ್ ಅಧಿಕಾರಿಯ ಆತ್ಮಹತ್ಯೆಗೆ ವೈಯಕ್ತಿಕ ಕಾರಣಗಳು ಇದ್ದಿರಬಹುದು ಎಂಬ ಶಂಕೆ ಎದ್ದಿದೆ.

maniyani_suside_photo_4 maniyani_suside_photo_5

narayana_maniyani_suicide2 narayana_maniyani_suicide3

ಆತ್ಮಹತೈ … ನಿಗೂಢ ಸಾವು

ನಾರಾಯಣ ಮಣಿಯಾಣಿ ಅವರು ನಿನ್ನೆ ಬೆಳಗ್ಗೆ ಮಂಗಳೂರಿನಲ್ಲಿರುವ ಕ್ರೈಂ 10 ನ್ಯೂಸ್ ಚಾನೆಲ್ ಕಚೇರಿಗೆ ಬಂದಿದ್ದರು. ಬಳಿಕ ಮನೆಗೆ ತೆರಳಿದವರು ಸಂಜೆ ವೇಳೆಗೆ ಕಾರ್‍ನಲ್ಲಿ ತೊಕ್ಕೊಟ್ಟಿಗೆ ಬಂದು ಲಾಡ್ಜ್‍ನಲ್ಲಿ ರೂಂ ಪಡೆದಿದ್ದರು. ಅವರ ಮನೆಯವರು ನಾರಾಯಣ ಮಣಿಯಾಣಿಯವರ ಮೊಬೈಲ್‍ಗೆ ಕರೆ ಮಾಡಿದಾಗ ಸ್ವಿಚ್‍ಆಫ್ ಆಗಿತ್ತು. ಈ ಬಗ್ಗೆ ಕಾರ್ ಚಾಲಕನಲ್ಲಿ ವಿಚಾರಿಸಿದಾಗ ಅವರನ್ನು ತೊಕ್ಕೊಟ್ಟು ವಿನಲ್ಲಿರುವ ಲಾಡ್ಜ್‍ನಲ್ಲಿ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದ. ಲಾಡ್ಜ್‍ಗೆ ಬಂದು ಮನೆಯವರು ನೋಡಿದಾಗ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂತು.

narayana_maniyani_suicide4 narayana_maniyani_suicide5 narayana_maniyani_suicide6

ನಾರಾಯಣ ಮಣಿಯಾಣಿ ಪೊಲೀಸ್ ಇಲಾಖೆಯಲ್ಲಿ ಉತ್ತಮ ಹೆಸರು ಸಂಪಾದಿಸಿದ್ದರು. ಮಂಗಳೂರು ರೌಡಿ ನಿಗ್ರಹದಳದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಉತ್ತಮ ಸೇವೆಗಾಗಿ ರಾಷ್ಟ್ರಪತಿ ಪದಕ ಪಡೆದಿದ್ದರು. ಎರಡು ಬಾರಿ ಮುಖ್ಯಮಂತ್ರಿ ಪದಕ ಅವರ ಸಾಧನೆಗೆ ಲಭಿಸಿತ್ತು. ಮಣಿಯಾಣಿಯವರು ಕರ್ತವ್ಯದಲ್ಲಿದ್ದ ಸಂದರ್ಭ ಅನೇಕ ಕ್ರಿಮಿನಲ್ ಪ್ರಕರಣಗಳನ್ನು ಭೇದಿಸಿದ್ದರು. ಅದರಲ್ಲೂ ಕುಖ್ಯಾತ ದರೋಡೆಕೋರ ರಿಪ್ಪನ್ ಚಂದ್ರನ್ ಬಂಧನ ಹಾಗೂ ವಾಮಂಜೂರಿನಲ್ಲಿ ಮನೆ ಮಂದಿಯನ್ನು ಕೊಂದು ಹಾಕಿದ್ದ ಪ್ರವೀಣ ವಾಮಂಜೂರ್‍ನನ್ನು ಗೋವಾದಲ್ಲಿ ಬಂಧಿಸುವಲ್ಲಿ ನಾರಾಯಣ ಮಣಿಯಾಣಿ ಯವರ ಪಾತ್ರ ಪ್ರಮುಖವಾಗಿತ್ತು.

ಮಣಿಯಾಣಿ ನಿವೃತ್ತಿ ನಂತರ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಕೊಂಡಿದ್ದರು. ಕೆಲವು ಹಣಕಾಸು ಸಂಸ್ಥೆಗಳಲ್ಲಿ ಪಾಲುದಾರರಾಗಿದ್ದರು. ನಾರಾಯಣ ಮಣಿಯಾಣಿಯವರ ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ. ಅವರು ಲಾಡ್ಜ್‌ಗೆ ತಂದಿದ್ದ ಬ್ಯಾಗ್‍ನ್ನು ಪರಿಶೀಲಿಸಿದಾಗ ಅದರಲ್ಲಿ ಖಾಲಿ ಕಾಗದಗಳು ಮಾತ್ರ ಲಭಿಸಿವೆ.

Write A Comment