ಮನೋರಂಜನೆ

ನಟಿ ನಿಖಿತಾಗೆ ಅಶ್ಲೀಲ ಚಿತ್ರ ಟ್ವೀಟ್…!

Pinterest LinkedIn Tumblr

nikitha

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ನಿಖಿತಾ ತುಕ್ರಲ್‌ಗೆ ಟ್ವಿಟರ್‌ನಲ್ಲಿ ದುಷ್ಕರ್ಮಿಯೊಬ್ಬ ಅಶ್ಲೀಲ ಚಿತ್ರಗಳನ್ನು ರವಾನಿಸಿರುವುದಾಗಿ ತಿಳಿದುಬಂದಿದೆ. ನಿಖಿತಾ ತುಕ್ರಲ್‌ ಅವರ ಟ್ವಿಟರ್ ಖಾತೆಗೆ ಅನುಯಾಗಿರುವ ಅನಾಮಿಕನೊಬ್ಬ ಈ ದುಷ್ಕೃತ್ಯವನ್ನು ಎಸಗಿದ್ದು, ತನ್ನ ದೇಹದ ಖಾಸಗಿ ಭಾಗಗಳ ದೃಶ್ಯಗಳನ್ನು ಕ್ಲಿಕ್ಕಿಸಿಕೊಂಡು ನಿಖಿತಾ ಅವರ ಟ್ವಿಟರ್ ಖಾತೆಗೆ ರವಾನಿಸಿದ್ದಾನೆ. ಇದನ್ನು ಕಂಡ ನಿಖಿತಾ ಗಾಬರಿಗೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಗಣ್ಯರು ಅಭಿಮಾನಿಗಳೊಂದಿಗೆ ಮಾತನಾಡಲು ಒಂದು ವೇದಿಕೆಯಾಗಿದ್ದು, ಇದನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಶ್ಲೀಲ ಚಿತ್ರ ಹಾಗೂ ಮಾತುಗಳನ್ನು ನನಗೆ ಟ್ವೀಟ್ ಮಾಡಬೇಡಿ, ನನ್ನ ಟ್ವಿಟರ್ ಖಾತೆ ಇರುವುದು ಅಭಿಮಾನಿಗಳೊಂದಿಗೆ ಮಾತನಾಡುವುದಕ್ಕಾಗಿ, ದುರುಪಯೋಗ ಪಡಿಸಿಕೊಳ್ಳುವ ಜನರಿಗಾಗಿ ಅಲ್ಲ ಎಂದು ನಿಖಿತ ಟ್ವೀಟ್ ಮಾಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ನಿಖಿತಾ, ನನ್ನ ಟ್ವಿಟರ್ ಖಾತೆಗೆ ಅನಾಮಿಕನೊಬ್ಬ ತನ್ನದೇ ಅಶ್ಲೀಲ ಚಿತ್ರ ಹಾಗೂ ಸಂದೇಶಗಳನ್ನು ಪ್ರತೀ ನಿತ್ಯ ನಿರಂತರವಾಗಿ ರವಾನಿಸುತ್ತಿದ್ದನು. ಕೆಲವರಲ್ಲಿ ಇಂತಹ ವ್ಯಕ್ತಿತ್ವ ಇರುತ್ತದೆ. ಅದು ಒಂದು ರೀತಿಯ ಖಾಯಿಲೆ ಇದ್ದ ಹಾಗೆ ಇಂತಹ ವ್ಯಕ್ತಿಗಳಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುತ್ತದೆ. ಈ ರೀತಿಯ ಸಮಸ್ಯೆ ನನ್ನೊಬ್ಬಳಿಗೆ ಎದುರಾಗಿರುವಂತಹದ್ದಲ್ಲ. ಪ್ರತಿಯೊಬ್ಬ ಮಹಿಳೆಯೂ ಇಂತಹ ಸಮಸ್ಯೆಯನ್ನು ಒಂದಲ್ಲ ಒಂದು ರೀತಿ ಪ್ರತಿನಿತ್ಯ ಎದುರಿಸುತ್ತಲೇ ಇರುತ್ತಾರೆ. ಇಂತಹ ಕೃತ್ಯಗಳನ್ನು ಪ್ರತಿಯೊಬ್ಬರು ಖಂಡಿಸಬೇಕು ಎಂದು ಹೇಳಿದ್ದಾರೆ.

Write A Comment