ಕನ್ನಡ ವಾರ್ತೆಗಳು

ಹುಸಿ ಬಾಂಬ್ ಟ್ವೀಟ್‍ಗೆ ಮೂಡಬಿದ್ರೆಯಲ್ಲಿ ಅತಂಕ

Pinterest LinkedIn Tumblr

alva's_college_vidyagiri

ಮೂಡಬಿದ್ರೆ ಡಿ.30  : ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ, ಮೂಡಬಿದ್ರೆಯ ಆಳ್ವಾಸ್ ಕಾಲೇಜಿಗೆ ಬಾಂಬ್ ಹಾಕುತ್ತೇನೆ. ಎಂಬ ಟ್ವೀಟ್ ಒಂದನ್ನು ಉಗ್ರನೋರ್ವ ಪ್ರಧಾನಿ, ಕೇಂದ್ರ ಸಚಿವರುಗಳಾದ ಸದಾನಂದ ಗೌಡ ಮತ್ತು ರಾಜ್‍ನಾಥ್ ಸಿಂಗ್‍ಗೆ ಕಳೆದ ಡಿಸೆಂಬರ್ 22 ತಾರೀಕಿಗೆ ರವಾನಿಸಿದ್ದಾನೆ ಎಂಬ ಸುದ್ದಿಯೊಂದು ಖಾಸಗಿ ವಾಹಿನಿ ಮೂಲಕ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಮೂಡಬಿದ್ರೆ ಬೆಚ್ಚಿಬಿದ್ದಿದೆ.

ಘಟನೆಯ ವಿವರ: ಅಬ್ದುಲ್ಲಾ ಖಾನ್ ಹೆಸರಿನಿಂದ ವ್ಯಕ್ತಿಯೊಬ್ಬ ಟ್ವೀಟ್ ಮಾಡಿ ಬೆಂಗಳೂರಿನ ಚರ್ಚ್‍ಸ್ಟ್ರೀಟ್ ನಲ್ಲಿ ಬಾಂಬ್ ಹಾಕಿದ್ದು ನಾನೇ. ಸದ್ಯ ನಾನು ಮೂಡಬಿದ್ರೆಯ ಆಳ್ವಾಸ್ ಕಾಲೇ ಜಿನಲ್ಲಿದ್ದೇನೆ. ನನ್ನ ಜೊತೆ 600 ಯುವ ಕರ ತಂಡವೂ ಇದೆ. ಐಸಿಸ್ ಸೇರಿದರೆ 50 ಲಕ್ಷ ರೂ. ಬಹುಮಾನ ನೀಡಲಾ ಗುವುದು, ಭಾರತದ ಪೊಲೀಸ್ ಆರ್ಮಿ ನನ್ನ ಕಾಲಿಗೆ ಸಮಾನ ಎಂದು ಲೇಟೆಸ್ಟ್ ಅಬ್ದುಲ್ಲಾ ಎನ್ನುವ ಹೆಸರಿನಲ್ಲಿ ದೃಶ್ಯ ಮಾಧ್ಯಮವೊಂದಕ್ಕೆ ಟ್ವೀಟ್ ಮಾಡಿದ್ದಾನೆ.

ಈ ಟ್ವಿಟರ್ ಖಾತೆಯನ್ನು ಪೊಲೀಸರು ನಿಷ್ಕ್ರಿಯಗೊಳಿಸಿದ್ದಾರೆ. ಅಸಲಿಗೆ ಆತ ಮೂಡಬಿದ್ರೆಯಲ್ಲಿ ಬಾಂಬ್ ಇಟ್ಟ ಬಗ್ಗೆ ಪೋಲಿಸ್ ಇಲಾಖೆಗೆ ಯಾವುದೇ ಸಂದೇಶವಾಗಲಿ, ಎಚ್ಚರಿಕೆಯಾಗಲೀ ಬಂದಿಲ್ಲ ಎನ್ನುವುದು ಪೋಲಿಸ್ ಮೂಲಗಳಿಂದ ತಿಳಿದು ಬಂದಿದೆ. ಆದರೂ ಪ್ರದಾನಿ, ಮತ್ತು ಕೇಂದ್ರ ಸಚಿವರುಗಳಿಗೆ ಟ್ವೀಟ್ ಬಂದಿದೆ ಎನ್ನವುದು ನಾನಾ ಸಂಶಯಗಳನ್ನು ಹುಟ್ಟುಹಾಕಿದೆ.  `ಮೆಹ್ದಿ ಮಸ್ರೂರ್ ಬಿಸ್ವಾಸ್‍ನನ್ನು ಬಿಡದಿದ್ದರೆ ಇನ್ನೆರಡು ದಿನದಲ್ಲಿ ಮತ್ತೆ ಬಾಂಬ್ ಸ್ಫೋಟಿಸುತ್ತೇನೆ, ಹೇ ಸಾಲೆ ತುಮೆ ಕ್ಯಾ ಬಾತ್ ಕರ್ತೆ, ಕರ್ತೆ ಭೀ ಕುಚ್ ನಹೀ… ಬೆಂಗಲೊರ್ ಬ್ಲಾಸ್ಟ್ ಮೈನೇ ಕಿಯಾ.. ಮೆಹ್ದೀ ಕೋ ಚೋಡೋ, ನಹೀ ತೋ ಬ್ಲಾಸ್ಟ್ ಕರ್ತೆ ರಹೇಗಾ… ದೇಕೋ 2 ದಿನ್ ಕೆ ಬಾದ್ ಫಿರ್ ಬ್ಲಾಸ್ಟ್ ಕರೇಗಾ…’ ಎಂದು ಟ್ವೀಟ್‍ನಲ್ಲಿ ಎಚ್ಚರಿಕೆ ನೀಡಿದ್ದಾನೆ.

ಬೆಂಗಳೂರಲ್ಲಿ ಬಾಂಬ್ ಸ್ಫೋಟದ ಬಗ್ಗೆ ಟ್ವೀಟ್ ವಿಚಾರವಾಗಿ ಆಳ್ವಾಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ದೃಶ್ಯ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಆಳ್ವಾಸ್ ಕಾಲೇಜಿನಲ್ಲಿದ್ದೇನೆ ಎಂದು ಟ್ವೀಟ್ ಮಾಡಿದ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಆದರೆ ನಮ್ಮ ಕಾಲೇಜಿನಲ್ಲಿ ಇಂತಹ ವ್ಯಕ್ತಿ ಯಾರೂ ಇಲ್ಲ. ಇಂಥ ಕೃತ್ಯ ನಡೆಸುವವರು ಇದ್ದರೆ ಅಂಥವರನ್ನು ಬಿಡುವುದಿಲ್ಲ. ಕೆಲ ಕಿಡಿಗೇಡಿಗಳು ಈ ರೀತಿ ಟ್ವೀಟ್ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸಬೇಕು. ಜನರನ್ನು ಹೆದರಿಸುವವರನ್ನು ಸದೆಬಡಿಯಬೇಕು. ಈ ಬಗ್ಗೆ ಪೊಲೀ ಸರಿಗೆ ಮಾಹಿತಿ ನೀಡಿದ್ದೇವೆ. ಕಾಲೇಜಿನಲ್ಲಿ ಎಲ್ಲ ರೀತಿಯ ಭದ್ರತೆ ಕೈಗೊಂಡಿದ್ದೇವೆ. ಕಾಲೇಜಿನ ಕ್ಯಾಂಪಸ್‍ನಲ್ಲಿ ಸಿಸಿಟಿವಿ ಅಳವಡಿಸಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮೂಡಬಿದ್ರೆಯಲ್ಲಿ ಕಟ್ಟೆಚ್ಚರ: ಬಾಂಬ್ ಬೆದರಿಕೆ ಸುಳ್ಳು ಎಂಬ ನಂಬಿಕೆ ಪೋಲೀಸ್ ಇಲಾಖೆಗೆ ಇದ್ದರೂ ಕೂಡ ಭದ್ರತೆಯ ದೃಷ್ಟಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಾಂಬ್ ಬೆದರಿಕೆಯಿಂದ ಆಳ್ವಾಸ್ ಕಾಲೇಜಿಗೆ ವಿಧ್ಯಾರ್ಥಿಗಳ ಪೋಷಕರು ಕಂಗಾಲಾಗಿ ನಿರಂತರವಾಗಿ ಮೇಲಿಂದ ಮೇಲೆ ಫೋನ್ ಕಾಲ್ ಮಾಡುತ್ತಿರುವುದು ಸಂಸ್ಥೆಗೆ ಮತ್ತು ಪೊಲೀಸ್ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ.

ಅಬ್ದುಲ್ಲಾ ಖಾನ್ ವಶಕ್ಕೆ: ಟ್ವಿಟರ್ ಮೂಲಕ ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಿದ್ದ ಅಬ್ದುಲ್ ಖಾನ್(17) ಎಂಬಾತನ್ನು ಬೆಂಗಳೂರಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸಿಸಿಬಿ ಡಿಸಿಪಿ ಅಭಿಷೇಕ್ ಗೋಯಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಬಾಲಕ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದ್ದು, ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿ ಬೆದರಿಕೆ ಹಾಕಿದ್ದನೇ ಅಥವಾ ನಿಜವಾಗಿ ಐಸಿಸ್ ಉಗ್ರನಾಗಿ ಬದಲಾಗಿ ಬೆದರಿಕೆ ಹಾಕಿದ್ದನೇ ಎಂದು ತನಿಖೆಯಿಂದಷ್ಟೇ ತಿಳಿದುಬರಬೇಕಾಗಿದೆ. ಈತನ ಹೆತ್ತವರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

 

 

 

Write A Comment