ಮೈಸೂರು: ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರನ್ನು ರಾಷ್ಟ್ರೀಯ ಸಂಶೋಧಕ ಪ್ರಾಧ್ಯಾಪಕರಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಜ್ಞಾನದ ಬೆಳವಣಿಗೆಗೆ ವಿಶಿಷ್ಟ ಸೇವೆ ಸಲ್ಲಿಸಿರುವ ವಿದ್ವಾಂಸರನ್ನು ಗುರುತಿಸಿ ಈ ಹುದ್ದೆಗೆ ನೇಮಕ ಮಾಡಲಾಗುತ್ತದೆ. 65 ವರ್ಷ ಮೀರಿದವರನ್ನು ಐದು ವರ್ಷ ಅವಧಿಗೆ ನೇಮಕ ಮಾಡಲಾ ಗುತ್ತದೆ. ಹುದ್ದೆ ಅವಧಿಯನ್ನು ಮತ್ತೆ ಐದು ವರ್ಷಕ್ಕೆ ವಿಸ್ತರಿಸಲು ಅವಕಾಶ ಇದೆ. ಇವರಿಗೆ ಒಬ್ಬರು ಸಹಾಯಕರು ಇರುತ್ತಾರೆ.
ರಾಷ್ಟ್ರೀಯ ಸಂಶೋಧಕ ಪ್ರಾಧ್ಯಾ ಪಕರಿಗೆ ತಿಂಗಳಿಗೆ ₨ 75 ಸಾವಿರ ಗೌರವಧನ ನೀಡಲಾಗುವುದು. ಅಲ್ಲದೇ, ಇತರ ಖರ್ಚಿಗೆ ವರ್ಷಕ್ಕೆ ₨ 1 ಲಕ್ಷ ನೀಡಲಾಗುವುದು. ಅವಧಿ ಪೂರ್ಣಗೊಂಡ ನಂತರ ತಿಂಗಳಿಗೆ ₨ 25 ಸಾವಿರ ಪಿಂಚಣಿ ಸೌಲಭ್ಯ ಇದೆ.
ರಾಷ್ಟ್ರೀಯ ಸಂಶೋಧಕ ಪ್ರಾಧ್ಯಾ ಪಕರಿಗೆ ಯಾವುದೇ ನಿಗದಿತ ಕರ್ತವ್ಯ ಮತ್ತು ಜವಾಬ್ದಾರಿ ಇರುವುದಿಲ್ಲ. ಈವರೆಗೆ ಅವರು ಸಾಧನೆ ಮಾಡಿದ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಅವಕಾಶ ಇರುತ್ತದೆ.
ಬರವಣಿಗೆಯನ್ನೇ ಮುಂದುವರಿಸುವೆ: ‘ರಾಷ್ಟ್ರೀಯ ಸಂಶೋಧಕ ಪ್ರಾಧ್ಯಾ ಪಕರಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ನಾನು ಹೊಸದೇನೂ ಮಾಡುವು ದಿಲ್ಲ. ಈಗ ಮಾಡುವ ಬರವಣಿ ಗೆಯನ್ನೇ ಮುಂದುವರಿಸುವೆ’ ಎಂದು ಡಾ.ಎಸ್.ಎಲ್. ಭೈರಪ್ಪ ಅವರು ಪ್ರತಿಕ್ರಿಯಿಸಿದರು.