ಬ್ರಹ್ಮಾವರ: ಉಕ್ರೇನ್‌ನ ಫುಟ್ ಬಾಲ್ ಆಟಗಾರ ವಿಟಾಲಿಯ ರೇವಾ ಅವರು ಹಿಂದೂ ಸಂಸ್ಕೃತಿಯಂತೆ ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ನೀಲಾವರ ಗೋಶಾಲೆಯಲ್ಲಿ ಬುಧ ವಾರ ಪತ್ನಿ ಎಲೆನಾ ರೇವಾ ಅವರೊಂದಿಗೆ ಮರು ಮದುವೆ ಮಾಡಿಕೊಂಡರು.
ಉಕ್ರೇನ್ ದೇಶದ ಫುಟ್ಬಾಲ್ ತಂಡದಲ್ಲಿ ಗೋಲ್ ಕೀಪರ್ ಆಗಿ ಪ್ರಸಿದ್ಧಿ ಹೊಂದಿದ ರೇವಾ, 10 ವರ್ಷಗಳ ಹಿಂದೆ ಕ್ರಿಶ್ಚಿಯನ್ ಸಂಸ್ಕೃತಿಯಂತೆ ಎಲೆನಾ ಅವರನ್ನು ಮದುವೆಯಾಗಿದ್ದು ಅವರಿಗೆ ಏಳು ವರ್ಷದ ಮಗಳಿದ್ದಾಳೆ. ಮಗಳ ಸಮ್ಮುಖದಲ್ಲಿ ಉಡುಪಿಯ ಡಾ. ತನ್ಮಯ್ ಗೋಸ್ವಾಮಿ ಅವರ ಮಾರ್ಗದರ್ಶನದಲ್ಲಿ ವಿವಾಹ ನಡೆಯಿತು.
ಡಾ.ತನ್ಮ್‌ಯ ಗೋಸ್ವಾಮಿ ದಂಪತಿ ರೇವಾ ಅವರ ತಂದೆ ತಾಯಿಯಾಗಿ ದೆಹಲಿಯ ಆರ್.ಎಕ್ಸ್ ಜಿಂಗನ್ ದಂಪತಿ ಎಲೆನಾ ಅವರ ತಂದೆ ತಾಯಿಯಾಗಿ ಈ ಮದುವೆ ನಡೆಸಿಕೊಟ್ಟರು. ಮಾಂಗಲ್ಯ ಧಾರಣೆ, ಅರಳು ಹೊಯ್ಯುವುದು, ಹಾರ ಬದಲಾವಣೆ ವಿಧಿ ವಿಧಾನ ಗಳ ಮೂಲಕ ಮದುವೆ ಕಾರ್ಯ ನಡೆಯಿತು.
ಉಡುಪಿ ಸಂತೆಕಟ್ಟೆಯ ಮಂಜುನಾಥ ಭಟ್ ಪೌರೋಹಿತ್ಯ ನಿರ್ವಹಿಸಿ ದರು. ಯೋಗ, ವೇದ ಮಂತ್ರಗಳು ಕ್ರೀಡೆ ಯಲ್ಲಿ ತೊಡಗಿಸಿ ಕೊಳ್ಳುವ ವ್ಯಕ್ತಿಗೆ ಹುಮ್ಮಸ್ಸು ನೀಡುತ್ತವೆ ಎನ್ನುವುದು ವಿಟಾಲಿಯ ರೇವಾ ಅವರ ದೃಢವಾದ ನಂಬಿಕೆ.