ಬೆಳಗಾವಿ,ಜ.08 : ಭಾರತೀಯ ವೈದ್ಯ ಪದ್ಧತಿಗಳ ಮೂಲಕ ಎಚ್‌ಐವಿ ಸೋಂಕು ನಿವಾರಣೆಗೆ ಔಷಧ ಕಂಡುಹಿಡಿಯಲು ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಪ್ರಯೋಗಾಲಯ ಫೆಬ್ರವರಿ ಮೂರನೇ ವಾರ ಮೈಸೂರಿನಲ್ಲಿ ಕಾರ್ಯಾರಂಭ ಮಾಡಲಿದೆ. ಅನಂತ ಭಾರತ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಹಾಗೂ ಮಾಜಿ ಸಚಿವ ಎಸ್.ಎ ರಾಮದಾಸ ಅವರ ಕನಸಿನ ಯೋಜನೆ ಇದು. 2025ರ ಹೊತ್ತಿಗೆ ಇಡೀ ಕರ್ನಾಟಕವನ್ನು ಎಚ್‌ಐವಿ ವೈರಸ್ ಮುಕ್ತವಾಗಿಸುವ ಗುರಿ ಇದರ ಹಿಂದಿದೆ.
ರಾಮದಾಸ್, ಎಚ್‌ಐವಿ ಸೋಂಕು, ಏಡ್ಸ್ ನಿವಾರಣೆಗೆ ಯಾವುದೇ ಔಷಧಿ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ ಭಾರತೀಯ ವೈದ್ಯ ಪದ್ಧತಿಗಳಾದ ಆಯುರ್ವೇದ, ಯುನಾನಿ, ಅಲೋಪಥಿ, ಯೋಗ ಮೂಲಕ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಣಗಳನ್ನು ವೃದ್ಧಿಸುವ ಔಷಧಿ ಕಂಡುಹಿಡಿಯಲು ಸಂಶೋಧನೆ ನಡೆಸಲಾಗುವುದು. ಗುಂಡು ಎಚ್.ಆರ್. ರಾವ್ ಸಂಶೋಧನಾ ತಂಡದ ನೇತೃತ್ವ ವಹಿಸುವರು ಎಂದರು. ತಮ್ಮ ಟ್ರಸ್ಟ್‌ನಿಂದ ಬೆಳಗಾವಿಯ ಎಚ್‌ಐವಿ ಪೀಡಿತ ಅನಾಥ ಮಕ್ಕಳ ಕೇಂದ್ರವಾದ ನಂದನಾ ಸ್ಪಂದನಾ ಮಕ್ಕಳ ಧಾಮಕ್ಕೆ ಮಾರುತಿ ಓಮಿನಿ ಕಾರನ್ನು ರಾಮದಾಸ್ ಕೊಡುಗೆಯಾಗಿ ನೀಡಿದರು.