ಕನ್ನಡ ವಾರ್ತೆಗಳು

ಯುಜಿಸಿ ರಾಜ್ಯದ 14 ಪದವಿ ಕಾಲೇಜುಗಳಿಗೆ ಸಮುದಾಯ ಕಾಲೇಜು ಮಾನ್ಯತೆ.

Pinterest LinkedIn Tumblr

ucg_news_photo

ಬೆಂಗಳೂರು,ಜ.08 : ರಾಜ್ಯದ 14 ಪದವಿ ಕಾಲೇಜುಗಳನ್ನು ಸಮುದಾಯ ಕಾಲೇಜುಗಳೆಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಮಾನ್ಯತೆ ನೀಡಿದೆ. ಉನ್ನತ ಶಿಕ್ಷಣ ಇಲಾಖೆಯು ರಾಜ್ಯದ 14 ಕಾಲೇಜುಗಳಿಗೆ ಸಮುದಾಯ ಕಾಲೇಜು ಮಾನ್ಯತೆ ನೀಡಬೇಕು ಎಂದು ಯುಜಿಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಇದು ಒಂದಾಗಿದೆ. ವೃತ್ತಿ ಕೌಶಲ ಹೆಚ್ಚಿಸಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಗುಣ ಬೆಳೆಸಲು ಪ್ರಮುಖ ಯೋಜನೆಯಾಗಿದೆ.

ಈ ಮಾನ್ಯತೆ ಪ್ರಕಾರ ವಿದ್ಯಾರ್ಥಿಗಳಲ್ಲಿ ವೃತ್ತಿ ಕೌಶಲ ವೃದ್ಧಿಸಲು ಅಲ್ಪಾವಧಿ ಕೋರ್ಸ್‌ಗಳನ್ನು ಆರಂಭಿಸಲು ಈ ಕಾಲೇಜುಗಳಿಗೆ ಸ್ವಾತಂತ್ರ್ಯವಿರುತ್ತದೆ. ಜತೆಗೆ ಉದ್ಯಮ ಸ್ನೇಹಿಯಾದ ಪಠ್ಯಕ್ರಮವನ್ನು ಈ ಕಾಲೇಜುಗಳು ಮಾಡಿಕೊಳ್ಳಬಹುದಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹಾಗೂ ಯುಜಿಸಿ ಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅಭಿನಂದನೆ ಸಲ್ಲಿಸಿದ್ದಾರೆ.

ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು:
* ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು, ಕಾರವಾರ
* ಸರ್ಕಾರಿ ಆರ್.ಸಿ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜು, ಬೆಂಗಳೂರು
* ಶ್ರೀಮತಿ ವಿಎಚ್‌ಡಿ ಕೇಂದ್ರೀಯ ಗೃಹ ವಿಜ್ಞಾನ ಕಾಲೇಜು, ಬೆಂಗಳೂರು
* ಬಿಎನ್‌ಡಿಇ ಕಲಾ ಕಾಲೇಜು, ವಿಜಯಪುರ
* ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಮೈಸೂರು
* ಕೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಸ್ನಾತಕೋತ್ತರ ಕೇಂದ್ರ, ಗದಗ
* ಲಾಲ್ ಬಹದ್ದೂರ್ ಕಲಾ, ವಿಜ್ಞಾನ ಕಾಲೇಜು ಮತ್ತು ಎಸ್‌ಬಿ ಸೊಲಬಣ್ಣ ಶೆಟ್ಟಿ ವಾಣಿಜ್ಯ ಕಾಲೇಜು, ಸಾಗರ
* ಶ್ರೀಮತಿ ಭಾಗ್ಯಲಕ್ಷ್ಮಮ್ಮ ರಾತಿಹಳ್ಳಿ ರಾಮಪ್ಪ ಮಹಾಜನ ಕಾಲೇಜು, ಮೈಸೂರು
* ಟೇರಿಷಿಯನ್ ಸಮುದಾಯ ಕಾಲೇಜು, ಮೈಸೂರು
ಜೆಎಸ್‌ಎಸ್ ಬನಶಂಕರಿ ಮತ್ತು ಶಾಂತಕುಮಾರ್ ಗುಬ್ಬಿ ವಿಜ್ಞಾನ ಕಾಲೇಜು, ಧಾರವಾಡ
* ಮೌಂಟ್ ಕಾರ್ಮೆಲ್ ಕಾಲೇಜು, ಬೆಂಗಳೂರು
* ಸಂತ ಜೋಸೆಫ್ ಸಂಜೆ ಕಾಲೇಜು, ಬೆಂಗಳೂರು
* ಸಂತ ಅಲೋಷಿಯಸ್ ಕಾಲೇಜು, ಮಂಗಳೂರು
* ಸಂತ ಫಿಲೋಮಿನಾ ಕಾಲೇಜು, ಮೈಸೂರು

Write A Comment