ಮನೋರಂಜನೆ

ಚೊಚ್ಚಲ ಶತಕ ಸಿಡಿಸಿ ಸಾಮರ್ಥ್ಯ ಪ್ರದರ್ಶಿಸಿದ ಕನ್ನಡಿಗ ಮಂಗಳೂರಿನ ರಾಹುಲ್

Pinterest LinkedIn Tumblr

Rahul----Karnatkaa

ಸಿಡ್ನಿ, ಜ.8: ಕೊನೆಗೂ ಆಯ್ಕೆಗಾರರ ಮೆಚ್ಚಿಸುವಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಶತಕ ಸಿಡಿಸುವ ಮೂಲಕ ತನ್ನ ಭುಜ ಬಲದ ಪರಾಕ್ರಮವನ್ನು ಪ್ರದರ್ಶಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಗವಾಸ್ಕರ್-ಬಾರ್ಡರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯದ 3ನೇ ದಿನವಾದ ಇಂದು ಒತ್ತಡದ ನಡುವೆಯೂ ಮನಮೋಹಕ ಆಟ ಪ್ರದರ್ಶಿಸಿದ ಕೆ.ಎಲ್.ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ 2ನೇ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಭಾರತ ತಂಡಕ್ಕೂ ಆಸರೆಯಾದರು.

ನಿನ್ನೆ 30 ರನ್ ಗಳಿಸಿ ರೋಹಿತ್ ಶರ್ಮಾ ಜೊತೆಗೂಡಿ ಉತ್ತಮ ಆರಂಭ ತಂದುಕೊಟ್ಟು ಅಜೇಯರಾಗಿ ಉಳಿದಿದ್ದ 3ನೇ ದಿನದ ಆಟ ಆರಂಭಿಸಿದ ರಾಹುಲ್ ವಿಚಲಿತರಾಗದೆ ಆಸೀಸ್ ಬೋಲರ್‌ಗಳನ್ನು ದಿಟ್ಟವಾಗಿ ಎದುರಿಸಿ ಮೊದಲ ಸೆಷನ್‌ನಲ್ಲೇ ಅರ್ಧಶತಕ ಸಿಡಿಸಿ ಗಮನಸೆಳೆದರು. ಜೊತೆಗಿದ್ದ ಅನುಭವಿ ಹಾಗೂ ಆಕರ್ಷಕ ಆಟಗಾರ ರೋಹಿತ್ ಶರ್ಮಾ ಕೂಡ ಪ್ರೋತ್ಸಾಹ ನೀಡಿದ್ದು ಗಮನ ಸೆಳೆಯಿತು. ನಂತರ ರೋಹಿತ್ ಶರ್ಮಾ ಔಟಾದ ನಂತರ ಬಂದ ವಿರಾಟ್ ಕೊಹ್ಲಿ ಯುವ ಆಟಗಾರನಿಗೆ ಮಾರ್ಗದರ್ಶನ ನೀಡಿ ತಂಡವನ್ನು 200ರ ಗಡಿ ದಾಟಿಸಿ ತಂಡಕ್ಕೆ ಹೊಸ ಚೈತನ್ಯ ನೀಡಿದರು.

ಕುತೂಹಲ ಸನ್ನಿವೇಶದಲ್ಲಿ ರಾಹುಲ್ ನೀಡಿದ ಕ್ಯಾಚ್‌ಅನ್ನು ಹಿಡಿಯುವಲ್ಲಿ ಆಸಿಸ್ ನಾಯಕ ಸ್ಮಿತ್ ವಿಫಲರಾದರು. ನಂತರ ಪ್ರತಿಕ್ರಿಯೆ ನೀಡಿದ ಅವರು, ಜೇಡರ ಹುಳ ನನಗೆ ಕ್ಯಾಚ್ ಹಿಡಿಯುವುದನ್ನು ತಪ್ಪಿಸಿತು ಎಂದು ಹೇಳಿದರು. ಟೀ ವಿರಾಮಕ್ಕೆ ಸ್ವಲ್ಪ ಸಮಯ ಇರುವಂತೆಯೇ ಎಚ್ಚರ ತಪ್ಪಿದ ರಾಹುಲ್ ಔಟಾಗಿ ನಿರಾಸೆಯಿಂದ ಪೆವಿಲಿಯನ್ ಸೇರಿದರು. ನಂತರ ಬಂದ ಅಜಿಂಕೆ ರಹಾನೆ ಜತೆಗೂಡಿದ ಕೊಹ್ಲಿ ಕೂಡ ಆಕರ್ಷಕ ಶತಕ ಸಿಡಿಸಿ ಗಮನ ಸೆಳೆದರು. ಇದು ಆಸ್ಟ್ರೇಲಿಯಾ ನೆಲದಲ್ಲಿ ರಾಹುಲ್ ದ್ರಾವಿಡ್ ಮಾಡಿದ ದಾಖಲೆ ಮುರಿಯುವ ಹಂತಕ್ಕೆ ಬಂದರು. ಪ್ರಸಕ್ತ ಸರಣಿಯಲ್ಲೇ 500ಕ್ಕೂ ಹೆಚ್ಚು ರನ್‌ಗಳನ್ನು ಕಲೆ ಹಾಕಿದ ಎರಡನೆ ಆಟಗಾರ ಎಂಬ ಕೀರ್ತಿಗೂ ಅವರು ಪಾತ್ರರಾದರು.

ದಿನದಂತ್ಯಕ್ಕೆ ಭಾರತ 300ರ ಗಡಿ ದಾಟಿ ಇನ್ನೂ 150 ರನ್‌ಗಳ ಹಿನ್ನಡೆ ಅನುಭವಿಸಿದೆ. ನಾಳಿನ ಆಟ ಕುತೂಹಲ ಕೆರಳಿಸಿದ್ದು, ಆಸಿಸ್‌ಗೆ ಭಾರತ ಕೂಡ ದಿಟ್ಟ ಪ್ರತ್ಯುತ್ತರ ನೀಡಿದೆ. ಇಂದಿನ ಆಟದಲ್ಲಿ ಕೊಹ್ಲಿ ಮತ್ತು ರಾಹುಲ್ ಅವರ ಶತಕ ಮಿಂಚಿದ್ದು ವಿಶೇಷ.

Write A Comment