ಕನ್ನಡ ವಾರ್ತೆಗಳು

ಹಳೆ ಹಾಡುಗಳ ಭಾವಯಾನದಲ್ಲಿ ಗಾಯಕರ ಗಾನಯಾನ.

Pinterest LinkedIn Tumblr

alvas_gana_yanaa_2

ವಿದ್ಯಾಗಿರಿ,ಜ.19 : ಇಲ್ಲಿನ ಆಳ್ವಾಸ್ ಕಾಲೇಜಿನ ವಿ.ಎಸ್ ಆಚಾರ್‍ಯ ವೇದಿಕೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಂಗಳೂರು ಹಾಗೂ ಆಳ್ವಾಸ್ ಪ್ರತಿಷ್ಟಾನ ಮೂಡಬಿದಿರೆ ಇದರ ಜಂಟಿ ಆಶ್ರಯದಲ್ಲಿ ಗಾನಯಾನ ಕಾರ್ಯಕ್ರಮ ನಡೆಯಿತು. ಹಳೆಯ ಚಿತ್ರ ಗೀತೆಗಳನ್ನು ನೆನಪಿಸುವ ಈ ಪ್ರಯತ್ನವನ್ನು ಈ ಕಾರ್ಯಕ್ರಮದ ಮೂಲಕ ಮಾಡಲಾಯಿತು.

alvas_gana_yanaa_4 alvas_gana_yanaa_3

ಮೈಸೂರಿನ ಆರ್.ಕೆ ಕ್ರಿಯೇಟರ್‍ಸ್ ತಂಡದವರ ಸಾರಥ್ಯದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಟಿ.ವಿ ಎದೆ ತಂಬಿ ಹಾಡುವೆನು, ಜೀ ವಾಹಿನಿಯ ಸರಿಗಮಪ, ವಾಯ್ಸ್ ಆಫ್ ಬೆಂಗಳೂರು ಹೀಗೆ ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನಮನ ಗೆದ್ದ ಕಲಾವಿದರಾದ ಕುಮಾರಿ ಹಂಸಿನಿ ಶಿವಕುಮಾರ್, ಕುಮಾರಿ ಪೃಥ್ವಿ, ಶ್ರೀ ಹರ್ಷ ಹಾಗೂ ಅತಿಶಯ್ ಜೈನ್‌ರವರು ಯುಗಳ ಗೀತೆಗಳನ್ನು ಹಾಡಿ ಕಲಾ ರಸಿಕರನ್ನು ರಂಜಿಸಿದರು.

alvas_gana_yanaa_6 alvas_gana_yanaa_5

ಲೂಯಿಸ್, ಕಿರಣ್, ಬಾಬ್ಬಿ, ಜಾನ್ ಬ್ರಿಟೋ ವಿನ್ಸೆಂಟ್, ಹಾಗೂ ಸುಬ್ರಹ್ಮಣ್ಯ ರಾವ್‌ರವರು ಹಾಡುಗಾರರಿಗೆ ವಾದ್ಯ ಸಹಕಾರವನ್ನು ನೀಡಿದರು. ಪ್ರೇಮದ ಪುತ್ರಿ, ರತ್ನ ಮಂಜರಿ, ಸ್ಕೂಲ್ ಮಾಸ್ಟರ್, ಸದಾರಮೆ, ಗಂಧದ ಗುಡಿ ಮುಂತಾದ ಹಳೆಯ ಚಿತ್ರದ ಗೀತೆಗಳನ್ನು ಈ ಸಂದರ್ಭದಲ್ಲಿ ಸುಮಧುರವಾಗಿ ಹಾಡಲಾಯಿತು. ಯುವ ಜನತೆಯನ್ನೇ ಗುರಿಯಾಗಿಟ್ಟುಕೊಂಡು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Write A Comment