ಬೆಂಗಳೂರು, ಜ.19 : ಬೈಕ್ ಸವಾರರ ಜೊತೆ ಹಿಂಬದಿಯಲ್ಲಿ ಕೂರುವವರು ಸಹ ಹೆಲ್ಮೆಟ್ ಧರಿಸಬೇಕಾಗುತ್ತದೆ ಎಂಬ ಸಾರಿಗೆ ಇಲಾಖೆಯ ಪ್ರಸ್ತಾವನೆಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ಕಾನೂನನ್ನು ಜಾರಿಗೆ ತರುವುದರಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ನಗರದಲ್ಲಿ ಬೈಕ್ ಸವಾರರ ಜೊತೆ ಹಿಂಬದಿಯಲ್ಲಿ ಕೂರುವವರು ಹೆಲ್ಮೆಟ್ ಧರಿಸಬೇಕು ಎಂಬ ನಿಯಮ ಜಾರಿಗೆ ತರಲು ಸಾರಿಗೆ ಇಲಾಖೆ ಮುಂದಾಗಿದ್ದು, ಸರ್ಕಾರಕ್ಕೆ ಈ ಕುರಿತ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಬೆಂಗಳೂರು ಪೊಲೀಸರ ಫೇಸ್ಬುಕ್ ಪುಟದಲ್ಲಿ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.
ಹಿಂಬಂದಿ ಸವಾರರಿಗೂ ಹೆಲ್ಮೆಟ್, ಜನರ ಆಕ್ರೋಶ – ಇದು ಅರ್ಥವಿಲ್ಲದ ನಿಯಮ ಇಂತಹ ಆಲೋಚನೆ ಕೈಬಿಡಿ ಎಂದು ಕೆಲವು ಜನರು ಹೇಳಿದ್ದರೆ, ಸಾರಿಗೆ ಇಲಾಖೆ ಹೆಲ್ಮೆಟ್ ಕಂಪನಿ ಜೊತೆ ಸೇರಿಕೊಂಡು ಇಂತಹ ನಿಯಮ ಜಾರಿಗೆ ತರಲು ಹೊರಟಿದೆ ಎಂದು ಕೆಲವರು ದೂರಿದ್ದಾರೆ.