ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ನಗರದ ಪ್ರತಿಷ್ಠಿತ ಹೋಟೇಲ್ ಓಷಿಯನ್ ಪರ್ಲ್‌ನಲ್ಲಿ ಎರಡು ದಿನಗಳ “ಕೇರಳ ಶೈಲಿಯ ಆಹಾರ ಮೇಳ”ವನ್ನು ಅಯೋಜಿಸಲಾಗಿದ್ದು, ಶುಕ್ರವಾರ ನಗರದ ಗಣ್ಯರಾದ ಶ್ರೀಮತಿ ಸುನೀತಾ ಶರ್ಮಾ, ಶ್ರೀಮತಿ ಸೋನಿಯಾ ಮೋರಸ್, ಶ್ರೀಮತಿ ಅಂಜು ಶರ್ಮಾ, ಯೆನೆಪೊಯ ಸಂಸ್ಥೆಯ ಶ್ರೀ ಹಸೀನಾ ನೌಫಾಲ್ ಹಾಗೂ ಮಾಂಡವಿ ಸಂಸ್ಥೆಯ ಶ್ರೀ ಅನಿತಾ ರಾವ್ ಅವರು ಈ ಅಹಾರ ಮೇಳವನ್ನು ವಿಧ್ಯುಕ್ತವಾಗಿ ಉದ್ಘಾಟಸಿದರು.
ಹೋಟೇಲ್ ಓಷಿಯನ್ ಪರ್ಲ್‌ನ ಉಪಾಧ್ಯಕ್ಷರಾದ ಬಿ.ಎನ್. ಗಿರೀಶ್ ಸ್ವಾಗತಿಸಿದರು. ಹೋಟೇಲ್ ಓಷಿಯನ್ ಪರ್ಲ್‌ನ ಎ.ಜಿ.ಎಮ್ ಶ್ರೀ ಬಿಜು ವರ್ಗೀಸ್ ಉಪಸ್ಥಿತರಿದ್ದರು.
ಈ ಸಂದರ್ಭ ಸುದ್ಧಿಗಾರರ ಜೊತೆ ಮಾತನಾಡಿದ ಓಷಿಯನ್ ಪರ್ಲ್ ಹೋಟೇಲ್‌ನ ಉಪಾಧ್ಯಕ್ಷರಾದ ( ವೈಸ್ ಪ್ರೆಸಿಡೆಂಟ್ ) ಬಿ.ಎನ್. ಗಿರೀಶ್ ಅವರು, ಕಳೆದ ಹಲವು ವರ್ಷಗಳಿಂದ ನಾವು ವಿವಿಧ ರಾಜ್ಯಗಳ ಸಾಂಪ್ರದಾಯಿಕ ಶೈಲಿಯ ಆಹಾರೋತ್ಸವವನ್ನು ಹಮ್ಮಿಕೊಂಡು ಬಂದಿದ್ದೇವೆ. ಇದಕ್ಕೆ ನಮ್ಮ ಗ್ರಾಹಕರು ಉತ್ತಮ ಸ್ಪಂದನೆ ವ್ಯಕ್ತ ಪಡಿಸಿದ್ದಾರೆ.
ಇದೀಗ ಈ ಬಾರಿ ಕೇರಳ ಶೈಲಿಯ ಆಹಾರ ಮೇಳವನ್ನು ಅಯೋಜಿಸಿದ್ದು, ಕೇರಳ ರಾಜ್ಯದ ಸಾಂಪ್ರದಾಯಿಕ ಶೈಲಿಯ ನೂರಾರು ಬಗೆಯ ಆಹಾರಗಳನ್ನು ಸಿದ್ದಪಡಿಸಿ, ಗ್ರಾಹಕರಿಗೆ ನೀಡುತ್ತಿದ್ದೇವೆ. ಕೇರಳದಲ್ಲಿ ಪ್ರಸಿದ್ದಿ ಪಡೆದಿರುವ ಮೀನೂ ಹಾಗೂ ಕೋಳಿಯ ವೈವಿಧ್ಯಮಯ ಖಾದ್ಯಗಳನ್ನು ವಿಶೇಷವಾಗಿ ಸಿದ್ದಪಡಿಸಿ ಗ್ರಾಹಕರಿಗೆ ನೀಡಲಾಗುವುದು.
ಈ ವಿಶೇಷ ಆಹಾರ ಮೇಳದಲ್ಲಿ ಕೇರಳ ಶೈಲಿಯ ಸುಮಾರು ( ಮಾಂಸಹಾರಿ ಹಾಗೂ ಸಸ್ಯಹಾರಿ) 150ಕ್ಕೂ ಹೆಚ್ಚು ವೈವಿಧ್ಯಮಯ ಹಾಗೂ ವಿಶಿಷ್ಠ ರೀತಿಯ ಆಹಾರಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಸಿದ್ದಪಡಿಸಲಾಗಿದೆ ಎಂದು ಆಹಾರ ಮೇಳದ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಆಹಾರೋತ್ಸವದಲ್ಲಿ ಗ್ರಾಹಕರು ಎಲ್ಲಾ ತೆರಿಗೆಗಳು ಸೇರಿ ರೂ.750ಕ್ಕೆ ಕೇರಳ ಶೈಲಿಯ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಖಾದ್ಯಗಳನ್ನು ಸವಿಯ ಬಹುದು. ಜೊತೆಗೆ ಗ್ರಾಹಕರನ್ನು ಸಂತುಷ್ಟಗೊಳಿಸಲು ಕೇರಳದ ಪ್ರಸಿದ್ದ ಚೆಂಡೆ ಸಮೂಹದಿಂದ ಚೆಂಡೆ ಮೇಳ ( Chenda Melam (Traditional Kerala Drummer’s) Agama kerala musicala Banda progrmme) ಹಾಗೂ ಸಹ್ಯಾದ್ರಿ ಸಮೂಹ ಸಂಸ್ಥೆಯ ಸಗೀತಗಾರರಿಂದ ಲಘು ಸಂಗೀತ ರಸಮಂಜರಿಯನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 800 ರಿಂದ 1000 ಮಂದಿ ಈ ಆಹಾರೋತ್ಸವದಲ್ಲಿ ಭಾಗವಹಿಸಲು ಸಾದ್ಯವಾಗುವಂತೆ ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಓಷಿಯನ್ ಪರ್ಲ್ ಹೋಟೇಲ್ ಈಗಾಗಲೇ ದೇಶವಿದೇಶಗಳಲ್ಲಿ ಬಹಳ ಪ್ರಖ್ಯಾತಿ ಪಡೆದಿದ್ದು, ಮಂಗಳೂರಿನ ಈ ಹೋಟೆಲ್‌ಗೆ ಸನ್ಮಾನ್ಯ ಮೋದಿ ಸೇರಿದಂತೆ ಪ್ರಸಿದ್ಧ ಉದ್ಯಮಿಗಳು, ರಾಜಕೀಯ ಮುಖಂಡರು, ಮಮ್ಮುಟ್ಟಿ, ಐಶ್ವರ್ಯ ರೈ, ತಮನ್ನ ಮುಂತಾದ ಹೆಸರಾಂತ ಸಿನಿಮಾ ನಟರು, ಮಿನಿಸ್ಟರ್ ಗಳು ಬೇಟಿ ನೀಡಿ, ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಉದ್ಯಮವನ್ನು ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಇತರೆಡೆಗಳಿಗೆ ವಿಸ್ತರಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.