ಬಹರೇನ್ ; ಭಾರತದ ಮಾಜಿ ರಾಷ್ಟ್ರ ಪತಿ,ಖ್ಯಾತ ವಿಜ್ಞಾನಿ ಭಾರತ ರತ್ನ ಡಾ ಎ . ಪಿ. ಜಿ ಅಬ್ದುಲ್ ಕಲಾಮ್ ರವರು ಇಂದು ಆಗಮಿಸಲಿದ್ದಾರೆ . ಬಹರೈನ್ ದ್ವೀಪ ರಾಷ್ಟ್ರಕ್ಕೆ ಇದು ಅವರ ಮೊದಲ ಭೇಟಿಯಾಗಿದ್ದು , ಶ್ರೀ ಅಬ್ದುಲ್ ಕಲಾಮ್ ರವರು ಇಲ್ಲಿ ಮೂರು ದಿನಗಳ ಕಾಲ ತಂಗಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ .
ನಾಳೆ ಸಂಜೆ ಇಲ್ಲಿನ ಶತಮಾನೋತ್ಸವದ ಸಂಭ್ರಮದಲ್ಲಿರುವ ಇಂಡಿಯನ್ ಕ್ಲಬ್ಬಿನ ಶತಮಾನೋತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಶ್ರೀಯುತರು ವಿದ್ಯುಕ್ತ ಚಾಲನೆ ನೀಡಲಿದ್ದಾರೆ ಅಲ್ಲದೆ ಕೊಲ್ಲಿ ರಾಷ್ಟ್ರಗಳಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿ ಜನಪ್ರಿಯರಾಗಿರುವ ಡಾ ವರ್ಗೀಸ್ ಕುರಿಯನ್ ,ಡಾ ಬಿ. ಆರ್ . ಶೆಟ್ಟಿ ,ಡಾ ರವಿ ಪಿಳ್ಳೈ , ರೊನಾಲ್ಡ್ ಕುಲಾಸೊ ಹಾಗು ಎಂ ಎ ಯೂಸುಫ್ ಆಲಿ ಇವರುಗಳನ್ನು ಇಂಡಿಯನ್ ಕ್ಲಬ್ಬಿನ ಪರವಾಗಿ ಸಮ್ಮಾನಿಸಲಿದ್ದಾರೆ . ಈ ಮೂರು ದಿನಗಳ ಭೇಟಿಯಲ್ಲಿ ಡಾ ಅಬ್ದುಲ್ ಕಲಾಮ್ ರವರು ಇಲ್ಲಿನ ವಿವಿಧ ಶಾಲಾ ,ಕಾಲೇಜುಗಳಿಗೆ ಭೇಟಿ ನೀಡಿ ಉಪನ್ಯಾಸ ನೀಡಲಿದ್ದಾರೆ .
ವರದಿ -ಕಮಲಾಕ್ಷ ಅಮೀನ್