ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಹಾಗೂ ಬಂಟ ಸಿರಿ ಕಲಾವೈಭವ -2015 ರ ಅಮಂತ್ರಣ ಪತ್ರಿಕೆಯನ್ನು ಬಿಡುಗಡೆ
ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಫೆ.05 : ಎ.ಸದಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಆರಂಭಗೊಳ್ಳಲಿರುವ ” ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್”ನ ಉದ್ಘಾಟನಾ ಸಮಾರಂಭ ಹಾಗೂ ” ಬಂಟಸಿರಿ” ಕಲಾವೈಭವ -2015 ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಂಕ 07-02-2015 ನೇ ಶನಿವಾರ ಬೆಳಗ್ಗೆ 10.55 ಕ್ಕೆ ಸರಿಯಾಗಿ ಮಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಟಿ.ಎಂ.ಎ.ಪೈ ಇಂಟರ್ ನ್ಯಾಷನಲ್ ಸಭಾಭವನದಲ್ಲಿ ಜರಗಲಿದೆ.
ಟ್ರಸ್ಟಿನ ಉದ್ಘಾಟನೆಯನ್ನು ನಿಟ್ಟೆ ವಿಶ್ವ ವಿಧ್ಯಾನಿಲಯದ ಕುಲಪತಿಗಳಾದ ಡಾ.ಎನ್.ವಿ ಹೆಗ್ಡೆಯವರು ನೆರೆವೇರಿಸಲಿದ್ದು, ಶ್ರೇಷ್ಠ ಬರಹಗಾರ, ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ ಟ್ರಸ್ಟಿನ ವೆಬ್ ಸೈಟ್ ಗೆ ಚಾಲನೆ ನೀಡಲಿದ್ದಾರೆ ಎಂದು ಟ್ರಸ್ಟ್‌ನ ಅಧ್ಯಕ್ಷ ಎ.ಸದಾನಂದ ಶೆಟ್ಟಿಯವರು ತಿಳಿಸಿದರು.
ಶನಿವಾರ ನಗರದ ಕುಡ್ಲ ಫೆವಿಲಿಯನ್ ಹೊಟೇಲ್ ಸಭಾಂಗಣದಲ್ಲಿ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್”ನ ಉದ್ಘಾಟನಾ ಸಮಾರಂಭ ಹಾಗೂ ಬಂಟ ಸಿರಿ ಕಲಾವೈಭವ -2015 ರ ಅಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಸ್ಟಿನ ಉದ್ಘಾಟನೆಯ ಸಂಧರ್ಭದಲ್ಲಿ ಪೂವಾರ್ಹ್ನ ಘಂಟೆ 09 ರಿಂದ ರಾತ್ರಿ 9.30 ರವರೆಗೆ ವೈವಿಧಯಮಯ ಸಾಂಸ್ಕ್ರತೀಕ ಕಾರ್ಯಕ್ರಮ ” ಬಂಟಸಿರಿ” ಕಲಾವೈಭವ -2015 ಜರುಗಲಿದ್ದು ಇದರಲ್ಲಿ ನ್ಯತ್ಯ ವಂದನ, ಬಂಟರ ಉಡಿಗೆ – ತೊಡಿಗೆ, ಹಾಸ್ಯ ರಂಜನೆ, ಯಕ್ಷ ಹಾಸ್ಯ -ಲಾಸ್ಯ, ಬಂಟರ ವೈಭವ, ಮಹಿಳಾ ಸಾಂಸ್ಕ್ರತಿಕ ವೈವಿಧ್ಯ, ಮಿಸ್ ಬಂಟ್, ಮಿಸ್ಟರ್ ಬಂಟ್, ಭಲೇಜೋಡಿ. ನಮ್ಮ ಯಜಮಾನ್ರು, ಯಕ್ಷಗಾನ ಬಯಲಾಟ ಮಾತ್ರವಲದ್ದೇ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಬಳಗದವರಿಂದ ಸಂಗೀತ ರಸಧಾರೆ ಜರಗಲಿರುವುದು.
ಇದೇ ಸಂದರ್ಭದಲ್ಲಿ ನೂರು ವರ್ಷಗಳನ್ನು ಪೊರೈಸಿರುವ ನಾಡೋಜ ಕೈಯಾರ ಕಿಜ್ಞಣ್ಣ ರೈ ಯವರಿಗೆ ನುಡಿನಮನ ಕಾರ್ಯಕ್ರಮ ಜರಗುಗಲಿರುವುದು. ಕಾರ್ಯಕ್ರಮದಲ್ಲಿ ಚಲನಚಿತ್ರ ನಟ – ನಟಿಯರು ಭಾಗವಹಿಸುವ ನಿರೀಕ್ಷೆಯಿದೆ. ಸಮಾರಂಭದಲ್ಲಿ ಬಂಟ ಸಮಾಜದ ಸಾಂಪ್ರದಾಯಿಕ ಊಟೋಪಚಾರದ ವ್ಯವಸ್ಥೆಯು ಮುಂಜಾನೆಯ ಉಪಹಾರದಿಂದ ಆರಂಭಗೊಂಡು ರಾತ್ರಿಯ ಭೋಜನದವರೆಗೂ ನಡೆಯಲಿರುವುದು ಎಂದು ಸದಾನಂದ ಶೆಟ್ಟಿ ವಿವರ ನೀಡಿದರು.
ಬಂಟ ಸಮಾಜ ಮಾತ್ರವಲ್ಲದೆ ಇತರ ಸಮಾಜದ ಪ್ರತಿಯೊಂದು ಕುಟುಂಬದ ಸಮಸ್ಯೆಗಳಿಗೂ ಸ್ಪಂದಿಸುವುದರೊಂದಿಗೆ ಊಟ, ವಸತಿ, ಉದ್ಯೋಗ, ಶಿಕ್ಷಣ ಈ ಮೂಲಭೂತ ಅಗತ್ಯತೆಗಳು ಪ್ರತಿಯೊಬ್ಬರಿಗೂ ಲಭಿಸುವಂತಾಗಬೇಕು. ಬಂಟ ಸಮಾಜದ ಮಹಿಳೆಯರಿಗೆ ಜೌನತ್ಯ ನೀಡಿ ಪ್ರೋತ್ಸಾಹಿಸುವುದರೊಂದಿಗೆ ಸಾಮಾಜಿಕ, ಧಾರ್ಮಿಕ, ಸಾಂಸ್ಕ್ರತಿಕ, ರಾಜಕೀಯ ಕ್ಷೇತ್ರಗಳಲ್ಲಿ ಯುವಪೀಳಿಗೆಗೆ ಮಹತ್ವ ನೀಡಿ ಪೋತ್ಸಾಹಿಸುವ ಕಾರ್ಯಕ್ರಮ ರೂಪುಗೊಳ್ಳಬೇಕು, ಬಂಟರ ಸಂಸ್ಕ್ರತಿ – ಸಂಪ್ರದಾಯಗಳ ಕಲಾ ಸುಪರ್ಧಿಯ ಸ್ಥಾಪನೆಯಾಗಬೇಕು.
ಕೃಷಿಗೆ ಹೆಚ್ಚು ಮಾನ್ಯತೆ ನೀಡಿ ಜೊತೆಗೆ ಅಧುನಿಕ ರೀತಿಯ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಿಸುವ ವ್ಯವಸ್ಥೆಯಾಗಬೇಕು. ಸಮಾಜದ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಸಂಬಂಧಿಸಿ ಶ್ರೇಯೋಭಿವೃದ್ಧಿ ಕಾರ್ಯಕ್ರಮಗಳ ಸಂಘಟತವಾಗಬೇಕು ಎಂಬಿತ್ಯಾದಿ ಪ್ರಮುಖ ಧ್ಯೇಯೋದ್ಧೇಶಗಳನ್ನು ಇರಿಸಿಕೊಂಡು ಪ್ರಾರಂಭವಾಗಿರುವ ” ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್”ನ ಗೌರವ ಅಧ್ಯಕ್ಷರಾಗಿ ಸಚಿವ ಬೆಳ್ಳಿಪಾಡಿ ರಮಾನಾಥ್ ರೈ, ಕಾರ್ಯಧ್ಯಕ್ಷರಾಗಿ ಮಾಜಿ ಸಚಿವ ಕೆ.ಅಮರನಾಥ್ ಶೆಟ್ಟಿ, ಗೌರವ ಸಲಹೆಗಾರರಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ಸದಾನಂದ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಪದಾಧಿಕಾರಿಗಳಾದ ವಸಂತ್ ಕುಮಾರ್ ಶೆಟ್ಟಿ, ಶಶಿಧರ್ ಶೆಟ್ಟಿ, ನವನೀತ್ ಶೆಟ್ಟಿ, ಚಿತ್ತರಂಜನ ರೈ,ರಾಜ್‌ಗೋಪಾಲ ರೈ, ಬಾಸ್ಕರ್ ರೈ ಕುಕ್ಕುವಳ್ಳಿ, ಪ್ರದೀಪ್ ಆಳ್ವ, ಸಂತೋಷ್ ಕುಮಾರ್ ಶೆಟ್ಟಿ, ಜ್ಯೋತಿಪ್ರಕಾಶ್ ಹೆಗ್ಡೆ, ಭಾಸ್ಕರ ಅರಸ್ ಹಾಗೂ ಯುವ ಘಟಕದ ಅಧ್ಯಕ್ಷ ದೇವಿಚರಣ್ ಶೆಟ್ಟಿ ಉಪಸ್ಥಿತರಿದ್ದರು.