ಮುಂಬಯಿ : ದೇವಾಡಿಗ ಸಂಘ ಮುಂಬೈಯ ಮಹಿಳಾ ವಿಭಾಗದ ಅರಸಿನ ಕುಂಕುಮ ಕಾರ್ಯಕ್ರಮವು ಜ. 26ರಂದು ಅಪರಾಹ್ನ ದೇವಾಡಿಗ ಭವನ ನೆರೂಲ್ನಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎಸ್. ನಿಟ್ಟೇಕರ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಪ್ರಾರಂಭದಲ್ಲಿ ಪ್ರಭ ದೇವಾಡಿಗ, ಶಾಂತಾ ದೇವಾಡಿಗ, ಆಶಾ ದೇವಾಡಿಗ ಮತ್ತು ಶುಭ ದೇವಾಡಿಗ ಇವರಿಂದ ಪ್ರಾರ್ಥನೆ ಜರಗಿತು. ವೇದಿಕೆಯಲ್ಲಿ ಮಹಿಳಾ ವಿಭಾಗ ದ ಮಾಜಿ ಕಾರ್ಯಾಧ್ಯಕ್ಷೆ ಹಾಗೂ ಸಂಘದ ಜತೆ ಕಾರ್ಯದರ್ಶಿ ಮಾಲತಿ ಜೆ ಮೊಯಿಲಿ, ಸಂಘದ ಅಧ್ಯಕ್ಷ ವಾಸು ದೇವಾಡಿಗ ಇವರ ಧರ್ಮಪತ್ನಿ ಹಾಗೂ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರಫುಲ್ಲ ವಿ ದೇವಾಡಿಗ, ಉಪಕಾರ್ಯಾಧ್ಯಕ್ಷೆ ಸುರೇಖಾ ದೇವಾಡಿಗ, ಕಾರ್ಯದರ್ಶಿ ಜಯಂತಿ ಎಂ ದೇವಾಡಿಗ, ಜತೆ ಕಾರ್ಯದರ್ಶಿ ಲತಾ ವಿ ಮೊಯಿಲಿ, ವಿವಿಧ ಪ್ರಾದೇಶಿಕ ಸಮನ್ವಯ ಸಮಿತಿಗಳ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯರು ಉಪಸ್ತಿತರಿದ್ದು ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆಯಿತ್ತರು.
ಸುರೇಖಾ ದೇವಾಡಿಗ ಸ್ವಾಗತಿಸಿ, ಮಾಲಜಿ ಮೊಯಿಲಿ ಯವರು ಅರಸಿನ ಕುಂಕುಮ ಕಾರ್ಯಕ್ರಮದ ವಿಶೇಷತೆಯನ್ನು ಬಣ್ಣಿಸಿದರು. ಪ್ರಫುಲ್ಲ ದೇವಾಡಿಗರು ಮಾತಾಡುತ್ತಾ ಹಳದಿ ಕುಂಕುಮದ ವೈಶಿಷ್ಟ್ಯತೆ ಹಾಗೂ ಒಗ್ಗಟ್ಟಿನಿಂದ ಇದ್ದರೆ ನಾವು ಯಾವ ಸಾಧನೆಯನ್ನೂ ಕೂಡ ಮಾಡಬಹುದು ಎಂದು ಮನ ಗಟ್ಟಿಸಿದರು. ಈ ಸಂದರ್ಭದಲ್ಲಿ, ಸಂಘದ ಅಧ್ಯಕ್ಷ ವಾಸು ದೇವಾಡಿಗ, ಪ್ರಾದೇಶಿಕ ಸಮಿತಿಗಳ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯರನ್ನು ಸಮಾಜದ ಹಿರಿಯ ಮಹಿಳೆ ಸರಸ್ವತಿ ಬರ್ಕೆ ಹಾಗೂ ಡಿಸೆಂಬರ್ನಲ್ಲಿ ನಡೆದ ವಿಶ್ವತುಳುಪರ್ಬದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಭಾಗವಹಿಸಿದ ಎಲ್ಲರನ್ನೂ ಹೂಗುಚ್ಛ ನೀಡಿ ಸತ್ಕರಿಸಲಾಯಿತು.
ನಂತರ ಸಂಘದ ವಿವಿಧ ಪ್ರಾದೇಶಿಕ ಸಮಿತಿ, ಯುವ ಸಮಿತಿ ಮತ್ತು ಮಹಿಳಾ ವಿಭಾಗದ ಸದಸ್ಯರಾದ ಪ್ರಫುಲ್ಲ ವಿ ದೇವಾಡಿಗ, ಜಯಂತಿ ಎಂ ದೇವಾಡಿಗ, ಸುರೇಖಾ ದೇವಾಡಿಗ, ಮಾಲತಿ ಜೆ ಮೊಯಿಲಿ, ಭಾರತಿ ಎಸ್ ನಿಟ್ಟೇಕರ್ ನಟಿಸಿದ ಕಿರುನಾಟಕ, ಯುವ ವಿಭಾಗದ ಸದಸ್ಯರಾದ ದೀಪ ದೇವಾಡಿಗ, ಪ್ರಶಾಂತ ಮೊಯಿಲಿ, ನಿತೇಶ್ ದೇವಾಡಿಗ, ಪ್ರಣೀತ್ ದೇವಾಡಿಗ, ಸಂದೇಶ ದ್ದೇವಾಡಿಗ, ಶಿವಸಾಗರ ದೇವಾಡಿಗ, ಶಾಂಭವಿ ದೇವಾಡಿಗ, ಭಾಗ್ಯಶ್ರೀ ದೇವಾಡಿಗ ಮತ್ತು ಹರೀಶ ದೇವಾಡಿಗ ನಟನೆಯ ಸ್ಕಿಟ್ ಮತ್ತು ದೀಕ್ಷಾ ದೇವಾಡಿಗ, ಜೋತ್ಸ್ನಾ ದೇವಾಡಿಗ, ಅಕ್ಷತಾ ದೇವಾಡಿಗ, ತನ್ವಿ ದೇವಾಡಿಗ, ತೃಶಾ ಶೇರಿಗಾರ್, ರಕ್ಷಿತಾ ಶೇರಿಗಾರ್, ಸಿದ್ಧಿ ಶೇರಿಗಾರ್, ಕ್ಶಿತಇಜ ದೇವಾಡಿಗ, ರೋಹನ ದೇವಾಡಿಗ, ಚಿರಾಗ್ ದೇವಾಡಿಗ, ಕಾರ್ತಿಕ್ ದೇವಾಡಿಗ, ಪ್ರತೀಕ್ ದೇವಾಡಿಗ, ಸಂದೇಶ್ ದೇವಾಡಿಗ, ರಕ್ಷಿತಾ ದೇವಾಡಿಗ, ಭುವನ ದೇವಾಡಿಗ, ಪ್ರಮೀಳಾ ಶೇರಿಗಾರ್, ಪ್ರತಿಮಾ ಮೊಯಿಲಿ, ಪೂರ್ಣಿಮಾ ದೇವಾಡಿಗ, ಕಲಾವತಿ ಶೇರಿಗಾರ್, ಅಂಬಿಕಾ ದೇವಾಡಿಗ ಇವರಿಂದ ನೃತ್ಯ, ಫ್ಯಾಷನ್ ಷೋ ಮುಂತಾದಕಾರ್ಯಕ್ರಮಜರಗಿತು.
ಜಯಂತಿ ಎಂ ದೇವಾಡಿಗ ಕಾರ್ಯದರ್ಶಿ ಮಾಲತಿ ಜೆ ಮೊಯಿಲಿ ಕಾರ್ಯಕ್ರವನ್ನು ನಿರೂಪಿಸಿದರು ಹಾಗೂ ಸಂಘದ ಯುವ ವಿಭಾಗ ಮತ್ತು ಎಲ್ಲಾ ಪ್ರಾದೇಶಿಕ ಸಮಿತಿಗಳು ಮಹಿಳಾ ವಿಭಾಗದೊಂದಿಗೆ ಸಕ್ರಿಯವಾಗಿ ಭಾಗವಹಿಸಿದರು.
ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಸರ್ವ ಮಹಿಳೆಯರು ಭಾಗವಹಿಸಿ ಒಬ್ಬರನ್ನೊಬ್ಬರು ಅಭಿನಂದಿಸಿ ಶುಭ ಕೋರಿದರು. ಕೊನೆಗೆ ನಿಧಿ ನಿಟ್ಟೇಕರ್ ರ ಧನ್ಯವಾದದ ನಂತರ ರಾಷ್ಟ್ರಗೀತೆಯೊಂದಿಗೆಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯವಾಯ್ತು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್