ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಫೆ.09: ನಗರದ ಶ್ರೀ ಗೋರ್ಕಣನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ರಾಷ್ಟ್ರೀಯ ಮಟ್ಟದ ಸ್ನಾತಕೋತ್ತರ ಉತ್ಸವ “ಸೃಷ್ಟಿ -2015 ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಮ್.ಆರ್.ಪಿ.ಎಲ್ ನ ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ) ಶ್ರೀಮತಿ ಲಕ್ಷ್ಮಿ ಎಂ. ಕುಮಾರನ್ ಅವರು, ಒಂದೇ ಜಾತಿ ಒಂದೇ ಮತ. ಒಂದೇ ಧರ್ಮ ಎನ್ನುವ ಶ್ರೀ ನಾರಾಯಣ ಗುರು ಸ್ವಾಮಿಗಳ ಧೇಯ್ಯವಾಕ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ಉಜ್ವಾಲವಾಗಿ ರೂಪಿಸುವಲ್ಲಿ ಕಾರ್ಯಪ್ರವ್ರತವಾಗ ಬೇಕು ಎಂದು ಅವರು ಕರೆ ಕೊಟ್ಟರು.
ಸೃಷ್ಠಿ ಎಂದರೆ ಸೃಜನ ಶೀಲತೆ. ವಿದ್ಯಾರ್ಥಿಗಳು ಸೃಜನ ಶೀಲತೆಯೊಂದಿಗೆ ವಿದ್ಯಾರ್ಥಿ ಜೀವನದಲ್ಲಿ ಸಿಗುವ ಉತ್ತಮ ಅವಕಾಶಗಳನ್ನುಸದುಪಯೋಗಿಸಿಕೊಂಡು ಸಾಧನೆ ಮಾಡಬೇಕು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಅವಕಾಶ ಶಿಕ್ಷಕರಿಗೆ ಮಾತ್ರ ಸಿಗುತ್ತದೆ. ಅಂತೆಯೇ ಈ ಶಿಕ್ಷಕರ ಮೂಲಕ ಉಜ್ವಲ ಭವಿಷ್ಯ ರೂಪಿಸುವ ಅವಕಾಶ ನಿಮಗೆ ಸಿಕ್ಕಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಶಿಕ್ಷಕರ ಮಾರ್ಗದರ್ಶನದಲ್ಲಿ ಜೀವನದಲ್ಲಿ ಏನಾದರೂ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೊಡುಗೆ ಸಲ್ಲಿಸಬೇಕು ಎಂದು ಲಕ್ಷ್ಮಿ ಕುಮಾರನ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಲೇಜಿನ ಸಂಚಾಲಕ ಎಸ್ ಜಯವಿಕ್ರಮ್ ಅವರು ಮಾತನಾಡಿ, ವಿದ್ಯೆಯೇ ಇಲ್ಲದ, ಯಾವೂದೇ ಫಲಫೇಕ್ಷೆ ಇಲ್ಲದ, ಒರ್ವ ಸಾಮಾಜಿಕ ಚಿಂತನೆ ಹೊಂದಿದ ವ್ಯಕ್ತಿಯಿಂದ ಈ ಶಾಲೆಯ ಸ್ಥಾಪನೆಗೆ ಪ್ರೇರಪಣೆ ಸಿಕ್ಕಿದೆ. ಅಂದಿನ ಅವರ ಪ್ರಯತ್ನದಿಂದ ಇಂದು ನಿಮಗೆ ಈ ಕಾಲೇಜಿನಲ್ಲಿ ಉತ್ತಮ ವಿದ್ಯಾಬ್ಯಾಸ ಸಿಗಲು ಕಾರಣವಾಗಿದೆ. ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಂಡು ಸತತ ಪರಿಶ್ರಮದಿಂದ ಸಾಧನೆ ಮಾಡಿ ನಿಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಬೇಕು. ಜೊತೆಗೆ ನಿಮ್ಮಿಂದ ಸಮಾಜಕ್ಕೆ ಉತ್ತಮ ಕೆಲಸಗಳಾಗಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಗಂಗಾಧರ್.ಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ರೇಣುಕ. ಕೆ., ಸ್ನಾತಕೋತ್ತರ ವಿಭಾಗದ ಸಂಯೋಜಕಿ ಶ್ರೀಮತಿ ಅಶ್ವಿನಿ ಕೆ.ಆರ್, ವಿಧ್ಯಾರ್ಥಿ ಸಂಯೋಜಕರಾದ ದುರ್ಗಾ ಗಣೇಶ್ ಕೆ ವಿ, ನಿಮೇಶ್ ಟಿ.ವಿ, ನಾಯಕಿ ರಶ್ಮಿತ ಆರ್ ಉಚ್ಚಿಲ, ಕೃತ್ತಿಕ ಮೊದಲಾವದರು ವೇದಿಕೆಯಲ್ಲ್ಲಿಉಪಸ್ಥಿತರಿದ್ದರು.
ಬ್ರಿಜೇಶ್ ಹಾಗೂ ರಶ್ಮಿ ಕಾರ್ಯಕ್ರಮ ನಿರೂಪಿಸಿದರು. ಪ್ರೋ. ಮಾಲತಿ ಸ್ವಾಗತಿಸಿದರು. ಪ್ರೋ. ತನುಜಾ ವಂದಿಸಿದರು.