ಬರೊಬ್ಬರಿ 2 ಶತಮಾನಗಳ ಹಿಂದೆ ಸಮಾಧಿಯಾಗಿದ್ದ ಬೌದ್ಧ ಸನ್ಯಾಸಿಯೊಬ್ಬರು ಈಗಲೂ ಜೀವಂತವಾಗಿದ್ದಾರೆ ಎಂದರೆ ನಂಬಲು ಸಾಧ್ಯವೇ? ಆದರೆ ಮಂಗೋಲಿಯಾದಲ್ಲಿ 200 ವರ್ಷಗಳ ಹಿಂದಿನ ಸಮಾಧಿಯೊಂದು ಪತ್ತೆಯಾಗಿದ್ದು ಅದರಲ್ಲಿ ಬೌದ್ಧ ಬಿಕ್ಕುವೊಬ್ಬರು ಜೀವಂತ ಪತ್ತೆಯಾಗಿದ್ದಾರೆ. ಅವರಿನ್ನು ಧ್ಯಾನಸ್ಥ ಸ್ಥಿತಿಯಲ್ಲಿರುವುದು ಅಚ್ಚರಿಯನ್ನು ಸೃಷ್ಟಿಸಿದೆ.
ಗುಹೆಯೊಂದರಲ್ಲಿ ಈ ಬಿಕ್ಕುವನ್ನು ಪತ್ತೆಹಚ್ಚಿದ ಸ್ಥಳೀಯ ವ್ಯಕ್ತಿಯೊಬ್ಬನು ಅವರನ್ನು ತನ್ನ ಮನೆಗೆತ್ತಿಕೊಂಡು ಬಂದು ಹಲವು ದಿನಗಳ ಕಾಲ ಇಟ್ಟುಕೊಂಡಿದ್ದಾನೆ. ನಂತರ ಕಾಳಸಂತೆಯಲ್ಲಿ ಮಾರಾಟ ಮಾಡಲು ಹೊರಟಾಗ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ.
ಸದ್ಯ ಭಿಕ್ಷುವನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಇಡಲಾಗಿದೆ. ಇದು ಆಳವಾದ ಧ್ಯಾನಸ್ಥ ಸ್ಥಿತಿ. ಮೂರು ದಿನಗಳ ಕಾಲ ನಿರಂತರವಾಗಿ ಧ್ಯಾನಸ್ಥ ಸ್ಥಿತಿಯಲ್ಲಿದ್ದರೆ ಈ ಸ್ಥಿತಿಗೆ ತಲುಪುತ್ತಾರೆ. ಕೆಲ ದಿನಗಳು ಕಳೆದಂತೆ ದೇಹ ನಿಧಾನವಾಗಿ ಸಂಕುಚಿತಗೊಳ್ಳುತ್ತ ಸಾಗುತ್ತದೆ ಎಂದು ಬೌದ್ಧ ಸನ್ಯಾಸಿ ಡಾಕ್ಟರ್. ಬ್ಯಾರಿ ಕೆರ್ಜಿನ್ ತಿಳಿಸಿದ್ದಾರೆ.
ಕೃಪೆ: ವೆಬ್‌ದುನಿಯಾ