ಕನ್ನಡ ವಾರ್ತೆಗಳು

ರೈಲು ಅಪಘಾತ ತಪ್ಪಿಸಲು ನೂತನ ‘ವಾರ್ನಿಂಗ್ ಸಿಸ್ಟಮ್’ ಆಳವಡಿಕೆ.

Pinterest LinkedIn Tumblr

trai_waring_system_photo

ನವದೆಹಲಿ,ಫೆ.26  : ರೈಲು ಅಪಘಾತ ತಪ್ಪಿಸಲು ಕೇಂದ್ರ ರೇಲ್ವೇ ಸಚಿವ ಸುರೇಶ್ ಪ್ರಭು ಅವರು ಕ್ರಮಗಳನ್ನು ಕೈಗೊಂಡಿದ್ದು, ಪ್ರತಿಯೊಂದು ರೈಲ್ವೇ ನಿಲ್ದಾಣಗಳಲ್ಲಿಯೂ ವಾರ್ನಿಂಗ್ ಸಿಸ್ಟಮ್ ಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು. ದೆಹಲಿಯ ಸಂಸತ್ ಭವನದಲ್ಲಿ ಇಂದು 2015ರ ರೇಲ್ವೇ ಬಜೆಟ್ ಮಂಡಿಸಿದ ಸುರೇಶ್ ಪ್ರಭು ಅವರು, ರೈಲು ಅಪಘಾತಗಳಂತಹ ಗಂಭೀರ ಸಮಸ್ಯೆಗಳನ್ನು ನಿವಾರಿಸಲು ಸಚಿವಾಲಯ ಕೊಗೊಳ್ಳಲಿರುವ ಕ್ರಮಗಳನ್ನು ವಿವರಿಸಿದರು.

ಅಪಘಾತಗಳ ತಡೆಗೆ ಐದು ವರ್ಷಗಳ ಸುರಕ್ಷತಾ ಯೋಜನೆ. ನಾಲ್ಕು ಫ್ರೈಟ್ ಕಾರಿಡಾರ್ ಗಳ ನಿರ್ಮಾಣ ಈ ವರ್ಷವೇ ಪೂರ್ಣಗೊಳ್ಳಲ್ಲಿದ್ದು, 9,420 ಕಿ.ಮೀ. ರೈಲ್ವೆ ಮಾರ್ಗದ ಸಾಮರ್ಥ್ಯ ವೃದ್ದಿಗೆ 96,182 ಕೋಟಿ ರೂ. ಯೋಜನೆ ಮೀಸಲಿಡಲಾಗುವುದು. ರೈಲುಗಳಲ್ಲಿ ಬೆಂಕಿ ಅನಾಹುತ ಸಂಭವಿಸಿದಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡಲು ವಾರ್ನಿಂಗ್ ಸಿಸ್ಷಮ್ ಅಳವಡಿಸಲಾಗುವುದು.ಬೋಗಿಗಳಲ್ಲೇ ವಾರ್ನಿಂಗ್ ಸಿಸ್ಟಮ್ ಅಳವಡಿಕೆ. ಖಾಲಿ ಸೀಟುಗಳ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು.

ಎಸ್ಎಂಎಸ್ ನಲ್ಲಿ ರೈಲಿನ ಆಗಮನ, ನಿರ್ಗಮನ ಮಾಹಿತಿ. ಹೈ ಸ್ಪೀಡ್ ರೈಲುಗಳ ಸಂಖ್ಯೆ ಹೆಚ್ಚಳ. 9 ಮಾರ್ಗಗಳಲ್ಲಿ ರೈಲಿನ ವೇಗ 200 ಕಿ.ಮೀಗೆ ಹೆಚ್ಚಳ. ಗರ್ಭಿಣಿಯರಿಗೆ ಲೋವರ್ ಬರ್ತ್ ನಲ್ಲೇ ಸೀಟು ನೀಡುವ ವ್ಯವಸ್ಥೆ. ರೈಲ್ವೆ ನಿಲ್ದಾಣಗಳ ಪುನರ್ ನಿರ್ಮಾಣಕ್ಕೆ ಬಹಿರಂಗ ಬಿಡ್. ಅತ್ಯಂತ ಪಾರದರ್ಶಕ ಬಿಡ್ಡಿಂಗ್ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು.

Write A Comment