ಕನ್ನಡ ವಾರ್ತೆಗಳು

ಆಟೋರಿಕ್ಷಾಗಳ ದರ ನಿಗದಿ : ಜಿಲ್ಲಾಧಿಕಾರಿ ಎ.ಬಿ‌ಇಬ್ರಾಹಿಂ

Pinterest LinkedIn Tumblr

Auto

ಮಂಗಳೂರು, ಫೆ.28 : ಮಂಗಳೂರು, ದ.ಕ. ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋರಿಕ್ಷಾ ಚಾಲನೆಯ ವಿವಿಧ ಅಂಶಗಳನ್ನು ಪರಿಶೀಲಿಸಿ ದ.ಕ.ಜಿಲ್ಲೆಯಲ್ಲಿ ಸಂಚರಿಸುವ ಆಟೋರಿಕ್ಷಾಗಳ ದರಗಳನ್ನು ಪರಿಷ್ಕರಣೆ ಮಾಡಿ  01.03.2015 ರಿಂದ ಜಾರಿಗೆ ಬರುವಂತೆ ಆದೇಶಿಸಿದೆ.

ಕನಿಷ್ಟ ದರ ಮೊದಲ 1.5 ಕಿ.ಮೀ ಗಳಿಗೆ ರೂ. 23.೦೦ ನಂತರದ ಪ್ರತಿ ಕಿ.ಮೀ ಗೆ ರೂ.12.೦೦ (ಗರಿಷ್ಟ 3 ಪ್ರಯಾಣಿಕರಿಗೆ) ಕಾಯುವ ದರ ಮೊದಲ 15 ನಿಮಿಷ ಉಚಿತ, ನಂತರದ 45ನಿಮಿಷದವರೆಗೆ ಪ್ರಯಾಣ ದರದ ಶೇ. 25, ಲಗೇಜು ದರ. ಮೊದಲ 20 ಕಿ.ಗ್ರಾಂ ಉಚಿತ ನಂತರದ ಪ್ರತಿ ಕಿ.ಗ್ರಾಂ ಅಥವಾ ಭಾಗಕ್ಕೆ ರೂ 02.00 ರಾತ್ರಿ 10.00 ಗಂಟೆಯ ನಂತರ ಬೆಳಿಗ್ಗೆ 5.00 ಗಂಟೆಯವರೆಗೆ ಮಾತ್ರ ಮೇಲಿನ ದರದ ಒಂದೂವರೆ ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶವಿದೆ.

auto-namedisplay

ದರದ ಪಟ್ಟಿಯನ್ನು ಆಟೋರಿಕ್ಷಾಗಳಲ್ಲಿ ಪ್ರದರ್ಶಿಸತಕ್ಕದ್ದು. ಚಾಲಕನ ಭಾವಚಿತ್ರವುಳ್ಳ ಪರವಾನಿಗೆ , ಮೊಭೈಲ್ ಸಂಖ್ಯೆಯೊಂದಿಗೆ ಚಾಲಕನ ಸೀಟಿನ ಹಿಂಬದಿ ಲಗತ್ತಿಸಬೇಕು. ಕಡ್ಡಾಯವಾಗಿ ಡಿಜಿಟಲ್ ಫೇರ್ ಮೀಟರ್ ಅಳವಡಿಸತಕ್ಕದ್ದು. ಎಂದು ದ.ಕ.ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಎ.ಬಿ‌ಇಬ್ರಾಹಿಂ ಅವರು ತಿಳಿಸಿರುತ್ತಾರೆ.

Write A Comment