ಕರಾವಳಿ

ದುಬೈಯಲ್ಲಿ ಡ್ರೈವಿಂಗ್ ಲೈಸನ್ಸ್ ಕೊಡಿಸುವಲ್ಲಿ ವಿಶೇಷತೆ ಮರೆಯುತ್ತಿರುವ ತರಬೇತುದಾರ: ತೆರೆಮರೆಯಲ್ಲಿ ಗಮನ ಸೆಳೆಯುತ್ತಿರುವ ಝಕರಿಯ

Pinterest LinkedIn Tumblr

Zakariya_Mar 2_2015-007

ದುಬೈ, ಮಾ.2: ಯುಎಇ ಸೇರಿದಂತೆ ಗಲ್ಫ್ ದೇಶಗಳಲ್ಲಿ ವಾಹನ ಖರೀದಿಸುವುದು ಸುಲಭ….ಆದರೆ ಅದನ್ನು ಚಲಾಯಿಸಲು ಲೈಸನ್ಸ್(ಪರವಾನಗಿ) ಪಡೆಯುವುದು ಮಾತ್ರ ದೊಡ್ಡ ಸಹಾಸವೇ ಸರಿ. ಈ ಲೈಸನ್ಸ್ ಪಡೆಯುವುದಕ್ಕೆ ನೀಡುವ ಚಾಲನಾ ತರಬೇತಿ ಕೂಡಾ ಅತೀ ಮುಖ್ಯ. ಇಂಥ ತರಬೇತುದಾರರ ಪೈಕಿ ದುಬೈಯಲ್ಲಿ ತೆರೆಮರೆಯಲ್ಲಿ ನಿಂತು ಚಾಲಕರಿಗೆ ಲೈಸನ್ಸ್ ಕೊಡಿಸುವಲ್ಲಿ ಕರಾವಳಿ ಭಾಗದ ಮಂಗಳೂರಿನ ವ್ಯಕ್ತಿಯೊಬ್ಬರ ಸಾಧನೆ ಗಮನಾರ್ಹವಾದದ್ದು.

ಮಂಗಳೂರಿನ ಜೆಪ್ಪುವಿನವರಾದ ಝಕರಿಯ ಅಬ್ದುಲ್ ರೆಹ್ಮಾನ್ ಕಳೆದ 24 ವರ್ಷಗಳಿಂದ ದುಬೈಯಲ್ಲಿ ವಾಹನ ಚಾಲಕ ತರಬೇತುದಾರರಾಗಿ ಸೇವೆಸಲ್ಲಿಸುತ್ತಿದ್ದು, ಇವರು ನೀಡುವ ತರಬೇತಿ ವಿಶೇಷವಾಗಿದೆ. ಬಹುತೇಕ ಚಾಲಕರಿಗೆ ಪ್ರಥಮ ಪರೀಕ್ಷೆ(ಫೈನಲ್ ಟೆಸ್ಟ್)ಯಲ್ಲಿಯೇ ಲೈಸನ್ಸ್ ಕೊಡಿಸುವಲ್ಲಿ ಯಶಸ್ವಿಯಾಗುತ್ತಿರುವ ಝಕರಿಯ್ಯರ ಸಾಧನೆ ಎಲ್ಲರೂ ಮೆಚ್ಚುವನಂಥದ್ದು.

Zakariya_Mar 2_2015-002

Zakariya_Mar 2_2015-004

ದುಬೈ ಸೇರಿದಂತೆ ಯುಎಇಯಲ್ಲಿ ಲೈಸನ್ಸ್ ಪಡೆಯಲು ಚಾಲಕರು ಹರಸಾಹಸವೇ ಪಡಬೇಕಾಗುತ್ತೆ. ಪ್ರಥಮ ಟೆಸ್ಟ್‌ನಲ್ಲಿ ಲೈಸನ್ಸ್ ಪಡೆದರೆ ಅದು ಬಹುದೊಡ್ಡ ಸಾಧನೆ. ಹಲವಾರು ಬಾರಿ ಟೆಸ್ಟ್ ನೀಡಿದರೂ ಲೈಸನ್ಸ್ ಸಿಗುವುದು ಇಲ್ಲಿ ಬಹಳ ಕಷ್ಟ. ಕೆಲವು ಮಂದಿ 10-15 ಬಾರಿ ಫೈನಲ್ ಟೆಸ್ಟ್‌ಗಳನ್ನು ನೀಡಿದ್ದರೂ, ಈವರೆಗೂ ಅವರಿಗೆ ಲೈಸನ್ಸ್ ಸಿಕ್ಕಿಲ್ಲ. ಇಲ್ಲಿ ಚಾಲಕರ ಫೈನಲ್ ಟೆಸ್ಟ್ ತೆಗೆದುಕೊಳ್ಳುವ ಆರ್‌ಟಿಓ(ರೋಡ್ ಟ್ರಾನ್ಸ್‌ಪೋರ್ಟ್ ಅಥಾರಿಟಿ) ಅಧಿಕಾರಿಗಳು ಬಹಳ ಕಟ್ಟುನಿಟ್ಟು. ಒಂದು ಸಣ್ಣಪುಟ್ಟ ತಪ್ಪುಗಳಾದರೂ, ಫೈಲ್ ಮಾಡುತ್ತಾರೆ.

ಇಂಥ ಕಠಿಣ ಸಂದರ್ಭದಲ್ಲಿ ವಾಹನ ತರಬೇತುದಾರರು ನೀಡುವ ತರಬೇತಿ ಬಹಳಷ್ಟು ಮುಖ್ಯವಾಗಿರುತ್ತದೆ. ತರಬೇತುದಾರರ ವಿಶೇಷ ತರಬೇತಿಯ ಮೇಲೆಯೇ ಲೈಸನ್ಸ್ ಪಡೆಯುವುದು ನಿರ್ಧಾರವಾಗಿರುತ್ತದೆ.

ಈ ರೀತಿಯ ತರಬೇತು ನೀಡುವ ಮೂಲಕ ಹೊಸ ಚಾಲಕರಿಗೆ ಲೈಸನ್ಸ್ ಕೊಡಿಸುವಲ್ಲಿ ಝಯಕರಿಯ್ಯರವರು ನೀಡುವ ತರಬೇತಿ ವಿಶೇಷವಾದದ್ದು.

Zakariya_Mar 2_2015-010

Zakariya_Mar 2_2015-012

ಯುಎಇಯಲ್ಲಿ ಕರ್ನಾಟಕ ಮೂಲದ ಮೂವರು ತರಬೇತುದಾರರಿದ್ದು, ಅವರ ಪೈಕಿ ಝಕರಿಯ್ಯ ನೀಡುವ ತರಬೇತಿಯ ಬಗ್ಗೆ ಇದೀಗ ಕರ್ನಾಟಕ, ಕರಾವಳಿ ಭಾಗದ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ದುಬೈಯ ಸತ್ವಾದಲ್ಲಿ ಅಲ್‌ಕವಾಕಿಬ್ ಡ್ರೈವಿಂಗ್ ಸ್ಕೂಲ್‌ನಲ್ಲಿ ತರಬೇತುದಾರರಾಗಿ ಸೇರಿದ ಝಕರಿಯ್ಯ, ಅಲ್ಲಿ 18 ವರ್ಷಗಳ ಕಾಲ ತರಬೇತುದಾರರಾಗಿ ಸೇವೆಸಲ್ಲಿಸಿ, ಬಳಿಕ ಕಳೆದ ಆರು ವರ್ಷಗಳಿಂದ ದುಬೈಯ ಅಲ್‌ವಾಸ್ಲ್ ರಸ್ತೆಯಲ್ಲಿರುವ ಬೆಲ್ಹಾಸ ಡ್ರೈವಿಂಗ್ ಸೆಂಟರ್‌ನಲ್ಲಿ ನುರಿತ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದ ಆರು ವರ್ಷಗಳಿಂದ 2 ಸಾವಿರಕ್ಕೂ ಮಿಕ್ಕಿ ಚಾಲಕರಿಗೆ ಲೈಸನ್ಸ್ ಕೊಡಿಸುವಲ್ಲಿ ಇವರು ನೀಡಿದ ತರಬೇತಿ ಅನನ್ಯ. ಬಹುತೇಕ ಮಂದಿ ಈ ವೇಳೆ ಮೊದಲ ಪರೀಕ್ಷೆಯಲ್ಲಿಯೇ ಉತ್ತೀರ್ಣರಾಗಿ ಲೈಸನ್ಸ್ ಪಡೆದರೆ, ಇನ್ನು ಕೆಲವರು ದ್ವಿತೀಯ. ತೃತೀಯ ಬಾರಿಗೆ ಲೈಸನ್ಸ್ ಪಡೆದುಕೊಂಡಿದ್ದಾರೆ.

ಹೊಸ ಚಾಲಕರೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುವ ಝಕರಿಯ್ಯ, ತರಬೇತಿಯ ಸಂದರ್ಭದಲ್ಲಿ ಕೊಡುವ ಸಲಹೆ, ಸೂಚನೆ ಕೂಡಾ ವಿಶೇಷ. ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಇನ್ನಿತರ ದೇಶಗಳಲ್ಲಿ ಹೊಸ ವಾಹನ ಚಾಲಕರಿಗೆ ತರಬೇತಿ ನೀಡುವ ಅರ್ಹತೆಯನ್ನು ಹೊಂದಿರುವ ಝಕರಿಯ್ಯರ ಬಳಿ ಕರ್ನಾಟಕ, ಕರಾವಳಿ ಭಾಗದ ಮಂದಿ ಚಾಲನಾ ತರಬೇತಿಗಾಗಿ ಮುಗಿಬೀಳುತ್ತಿದ್ದಾರೆ. ಪ್ರತಿದಿನ ಜನರು ಬೆಲ್ಹಾಸ ಡ್ರೈವಿಂಗ್ ಸೆಂಟರ್‌ನಲ್ಲಿ ಲೈಸನ್ಸ್ ಪಡೆಯುದಕ್ಕೆ ಬಂದರೆ ಮೊದಲು ಸಂದರ್ಶಿಸುವುದೇ ಝಕರಿಯಾರನ್ನು.

ಝಕರಿಯ್ಯರನ್ನು ಸಂಪರ್ಕಿಸಲು ಅವರ ಮೊಬೈಲ್ ಸಂಖ್ಯೆ 050-5680633, 056-7299866, 055-8632657ನ್ನು ಸಂಪರ್ಕಿಸಬಹುದು.

Write A Comment