ಅಂತರಾಷ್ಟ್ರೀಯ

ದಕ್ಷಿಣ ಕೊರಿಯಾದಲ್ಲಿ ಅಮೇರಿಕಾ ರಾಯಭಾರಿ ಮಾರ್ಕ್ ಲಿಪ್ಪರ್ಟ್ ಮೇಲೆ ಹಲ್ಲೆ

Pinterest LinkedIn Tumblr

 Mark_Lippert_attcat_2

ಸಿಯೋಲ್: 10 ಇಂಚಿನ ಚಾಕು ಹಿಡಿದ ಮನುಷ್ಯನೊಬ್ಬ ದಕ್ಷಿಣ ಕೊರಿಯಾದಲ್ಲಿ ಅಮೇರಿಕಾ ರಾಯಭಾರಿ ಮಾರ್ಕ್ ಲಿಪ್ಪರ್ಟ್(42 ) ಕಪ್ಪಾಳಕ್ಕೆ ಮತ್ತು ಮಣಿಕಟ್ಟಿಗೆ ಬೀಸಿ, ದಕ್ಷಿಣ ಮತ್ತು ಉತ್ತರ ಕೊರಿಯಾಗಳನ್ನು ಒಗ್ಗೂಡಬೇಕು ಎಂದು ಘೋಷಣೆ ಕೂಗಿದ ಘಟನೆ ನಡೆದಿರುವುದನ್ನು ದಕ್ಷಿಣ ಕೊರಿಯಾ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮಾಧ್ಯಮದಲ್ಲಿ ಕಂಡಿರುವ ಚಿತ್ರಗಳ ಪ್ರಕಾರ ಲಿಪ್ಪರ್ಟ್ ಅವರು ರಕ್ತದ ಮಡುವಿನಲ್ಲಿರುವುದು ಕಂಡು ಬಂದಿದೆ. ಈ ಕೃತ್ಯವನ್ನು ಅಮೇರಿಕಾ ತೀವ್ರವಾಗಿ ಖಂಡಿಸಿದೆ. ಲಿಪ್ಪರ್ಟ್ ಅವರನ್ನು ಪ್ರಾದೇಶಿಕ ಆಸ್ಪತ್ರೆಯಲ್ಲಿ ಸುಶ್ರೂಷೆ ಮಾಡಲಾಗುತ್ತಿದೆ. ಅವರಿಗಾಗಿರುವ ಗಾಯ ಮಾರಾಣಾಂತಿಕವಲ್ಲ ಎಂದು ತಿಳಿದುಬಂದಿದೆ.
ವೈ ಟಿ ಎನ್ ವಾಹಿನಿ ವರದಿ ಮಾಡಿರುವ ಪ್ರಕಾರ ದಾಳಿ ಮಾಡಿದವನ ಹೆಸರು ಕಿಮ್ ಕಿ ಜಾಂಗ್ (55 ). ದಾಳಿ ಮಾಡುವ ವೇಳೆಯಲ್ಲಿ “ದಕ್ಷಿಣ ಮತ್ತು ಉತ್ತರ ಕೊರಿಯಾ ಒಗ್ಗೂಡಬೇಕು” ಎಂದು ಘೋಷಣೆ ಕೂಗಿದ್ದಾನೆ.

Mark_Lippert_attcat_1

ಈ ಹಿಂದೆಯೂ ಸಿಯೋಲ್ ನಲ್ಲಿ ಅಮೇರಿಕಾ ವಿರುದ್ಧದ ಪ್ರತಿಭಟನೆಗಳು ನಡೆದಿದ್ದವು. ಅಮೇರಿಕಾ ಮತ್ತು ದಕ್ಷಿಣ ಕೊರಿಯಾದ ಮಿಲಿಟರಿ ಜಂಟಿ ಸೇನಾ ಕಾರ್ಯಾಚರಣೆಯ ವಿರುದ್ಧ ಕೂಡ ಆಕ್ರೋಶ ಕೇಳಿ ಬಂದಿತ್ತು.

ಲಿಪ್ಪರ್ಟ್ ಅವರೊಂದಿಗೆ ದೂರವಾಣಿಯೊಂದಿಗೆ ಮಾತನಾಡಿದ ಅಮೇರಿಕಾ ಅಧ್ಯಕ್ಷ ಒಬಾಮಾ, ಬೇಗ ಗುಣಮುಖಿಯಾಗಲು ಪ್ರಾರ್ಥಿಸಲಿದ್ದೇನೆ ಎಂದಿದ್ದಾರೆ.

Write A Comment