ಉಡುಪಿ: ಸೋಮವಾರ ಉಡುಪಿಯಲ್ಲಿ ನಡೆಯುವ ವಿರಾಟ್ ಹಿಂದೂ ಸಮಾವೇಶಕ್ಕ ವಿಶ್ವಹಿಂದೂ ಪರಿಷತ್ ರಾಷ್ಟೀಯ ಅಧ್ಯಕ್ಷ ಪ್ರವೀಣ್ ಬಾಯಿ ತೊಗಾಡಿಯಾ ಅವರನ್ನು ನಿಷೇದ ಮಾಡಿರುವುದು ಸಂವಿಧಾನ ವಿರೋಧಿ ಕೃತ್ಯವಾಗಿದ್ದು ಇದಕ್ಕೆ ಸಂಬಂದಪಟ್ಟವರ ಹಿಟ್ಲರ್ ಶಾಹಿ ವರ್ತನೆಯನ್ನು ಶ್ರೀ ರಾಮ ಸೇನೆ ಪ್ರಬಲವಾಗಿ ಖಂಡಿಸುತ್ತದೆ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುದ್ಧಿಗೋಷ್ಠಿಯಲ್ಲಿ ಮಾತನಾಡುತ್ತಾ, ಶಿವಮೊಗ್ಗ ಹಾಗೂ ಇತರೆಡೆ ನಡೆದ ಗಲಭೆಗೆ ತೊಗಾಡಿಯಾ ಅವರನ್ನೇ ನಿಷೇದ ಮಾಡಿರುವುದು ಯಾವ ನ್ಯಾಯ ಎಂದು ಕೇಳಿದ್ ಅವರು. ಗಲಭೆಗೆ, ಅಶಾಂತಿಗೆ ಕಾರಣರಾದವರನ್ನು ಬಂಧಿಸಬೇಕು ಹೊರತು ತೊಗಾಡಿಯವರನು ನಿಷೇದ ಮಾಡಿರುವುದು ಸಂವಿಧಾನಕ್ಕೆ ಚೂರಿಹಾಕಿದಂತಿದೆ.
ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಲಭೆ ನಡೆಯುತ್ತದೆ ಎಂದು ಕೇಂದ್ರ ಗುಪ್ತಚರ ಇಲಾಖೆಯ ಮುನ್ಸೂಚನೆ ಮೇಲೂ ಪಿಎಫ್ ಐ ಸಂಘಟನೆಗೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಿರುವುದು ಸರ್ಕಾರ ಎಸ್ಪಿ ಅವರ ಮೇಲೆ ಹಾಕಿದ ಒತ್ತಡವೇ ಕಾರಣ ಆದ್ದರಿಂದ ಮೊನ್ನೆ ಶಿವಮೊಗ್ಗದಲ್ಲಿ ನಡೆದ ಗಲಭೆಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಮುತಾಲಿಕ್ ಇದೇ ಸಂದರ್ಭ ಆರೋಪಿಸಿದರು.
ಭಾರತವನ್ನು ಹಣಿಯಲು ಹೊರಟವರೊಂದಿಗೆ ಭಟ್ಕಳದ ಕೆಲವರು ನೇರ ಸಂಪರ್ಕ ಇರುವುದಕ್ಕೆ ಹಲವು ಸಾಕ್ಷಾಧರವಿದೆ, ಈ ಬಗ್ಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ಭಟ್ಕಳದಲ್ಲಿ ಭಯೋತ್ಪಾದನೆ ವಿರೋಧಿಸಿ ಶ್ರೀರಾಮ ಸೇನೆಯಿಂದ “ಭಯೋತ್ಪಾದನೆ ಅಳಿಸಿ ದೇಶ ಉಳಿಸಿ” ಎಂಬ ಧ್ಯೇಯ ವಾಕ್ಯದೊಡನೆ “ಬೆಂಗಳೂರು ಟು ಭಟ್ಕಳ ಚಲೋ” ಕಾರ್ಯಕ್ರಮ ಏಪ್ರಿಲ್ ಅಂತ್ಯದಲ್ಲಿ ನಡೆಸಲಿದೆ ಎಂದರು.
ಬಿಜೆಪಿ ವಿರುದ್ಧ ಠೀಕೆ: ಬಿಜೆಪಿಯ ಈಶ್ವರಪ್ಪನವರು ಈ ಹಿಂದೆ ತೊಗಾಡಿಯಾ ಕರ್ನಾಟಕಕ್ಕೆ ನಿಷೇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪಾಕಿಸ್ತಾನದಲ್ಲಿದೆಯೇ ಎಂದು ಪ್ರಶ್ನಿಸಿದ್ದರು ಆದರೇ ಗೋವಾದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಾರೆ ಎಂಬ ಹೆದರಿಕೆಯಿಂದ ಬಿಜೆಪಿ ಸರ್ಕಾರ ಶ್ರೀರಾಮ ಸೇನೆಯನ್ನು ಕಳೆದ ಮೂರ್ನಾಲ್ಕು ತಿಂಗಳಿನಿಂದ ಗೋವಾದಲ್ಲಿ ನಿಷೇದ ಹೇರಿದ್ದು ಹಾಗಾದರೆ ಗೋವಾ ಅಫಘಾನಿಸ್ಥಾನದಲ್ಲಿದೆಯೇ ಎಂದು ಮರು ಪ್ರಶ್ನಿಸಿದರು.