ಕನ್ನಡ ವಾರ್ತೆಗಳು

ನೇಕಾರರಿಂದ ನೇರ ಗ್ರಾಕರಿಗೆ ಮನಮೆಚ್ಚಿದ ವಸ್ತ್ರಗಳು ಒಂದೇ ಸೂರಿನಡಿ – ಐವನ್ ಡಿ ಸೋಜಾ

Pinterest LinkedIn Tumblr

hindi_sabha_hndloms_1

ಮಂಗಳೂರು ,ಮಾರ್ಚ್.09 : ಮೇಕ್ ಇನ್ ಕರ್ನಾಟಕ ಇದು ನಮ್ಮ ಸರ್ಕಾರದ ಘೋಷಣೆಯಾಗಿದೆ, ನಮ್ಮ ನೇಕಾರರು ಉತ್ಪಾದಿಸುವ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರಕಿಸುವಲ್ಲಿ ರಾಜ್ಯ ಸರ್ಕಾರ ಸಂಕಲ್ಪ ಮಾಡಿದ್ದು, ಅದರಂತೆ ರಾಜ್ಯದ ವಿವಿದೆಡೆಗಳಲ್ಲಿ ಕೈಮಗ್ಗಗಳಿಂದ ನೇಯ್ಗೆ ಮಾಡಿದ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿ ಗ್ರಾಹಕರಿಗೆ ಅವರಿಗೆ ಮನಮೆಚ್ಚಿದ ವಸ್ತ್ರಗಳು ಒಂದೇಸೂರಿನಡಿ ಲಭ್ಯವಾಗುವಂತೆ ಮಾಡುವ ಮೂಲಕ ನೆಕಾರರಿಗೂ ಹಾಗೂ ಗ್ರಾಹಕರಿಗೂ ಉತ್ತಮ ಸಂಪರ್ಕವನ್ನ ಕೈಮಗ್ಗ ಮತ್ತು ಜವಳಿ ಇಲಾಖೆ ಅವಕಾಶ ಕಲ್ಪಿಸಿದೆ, ಈ ಅವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ವಿಧಾನ ಪರಿಷತ್‌ನ ಸದಸ್ಯ ಐವನ್ ಡಿ ಸೋಜಾ ಅವರು ತಿಳಿಸಿದ್ದಾರೆ.

ಅವರು ಭಾನುವಾರ ಮಂಗಳೂರು ಲಾಲ್‌ಬಾಗ್‌ನಲ್ಲಿರುವ ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿ ಹಾಲ್‌ನಲ್ಲಿ ಅಭಿವೃದ್ದಿ ಆಯುಕ್ತರು(ಕೈ ಮಗ್ಗ)ಜವಳಿ ಮಂತ್ರಾಲಯ, ಭಾರತ ಸರಕಾರ,ನವದೆಹಲಿ ಹಾಗೂ ಜವಳಿ ಅಭವೃದ್ದಿ ಆಯುಕ್ತರು ಹಾಗೂ ನಿರ್ದೇಶಕರು, ಕೈ ಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ಸರ್ಕಾರ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ 8 ರಿಂದ 22ರ ವರೆಗೆ ಏರ್ಪಡಿಸಿರುವ ವಿಶೇಷ ಕೈಮಗ್ಗ ಮೇಳ ವಸ್ತ್ರಸಾಗರ-2015 ರಾಜ್ಯ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.

hindi_sabha_hndloms_2 hindi_sabha_hndloms_3 hindi_sabha_hndloms_4 hindi_sabha_hndloms_5 hindi_sabha_hndloms_6

ವಸ್ತು ಪ್ರದರ್ಶನದಲ್ಲಿ 45 ಸ್ಟಾಲ್‌ಗಳಿದ್ದು, ರಾಜ್ಯದ ಚಾಮರಾಜನಗರ, ಮೈಸೂರು,ಚಿಕ್ಕಬಳ್ಳಾಪುರ, ಭೆಂಗಳೂರು,ಚಿತ್ರದುರ್ಗ, ಧಾರವಾಡ, ವಿಜಯಪುರ, ಮುಂತಾದ ಜಿಲ್ಲೆಗಳಲ್ಲದೆ ಗುಜರಾತ್ ರಾಜ್ಯದ ನೇಕಾರರು ಸಹ ತಮ್ಮ ಉತ್ತಮ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸಿ ಮಾರಾಟ ಮಾಡುತ್ತಿದ್ದಾರೆ, ಗ್ರಾಹಕರಿಗೆ ಇದೊಂದು ಸುವರ್ಣ‌ಅವಕಾಶ ಎಂದು ದ.ಕಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕರಾದ ಕೆ.ಎಂ.ಭಾವಿಕಟ್ಟಿ ತಿಳಿಸಿದರು.

Write A Comment