ಮುಂಬಯಿ, ಮಾ.09 : ಸ್ತ್ರೀಯರಲ್ಲಿ ಇಂದು ಸಮಗ್ರ ಹಿತರಕ್ಷಣೆಯ ವಿವೇಚನೆ ಮೊಳೆತಿದೆ. ಇದನ್ನು ಮುನ್ನಡೆಸಲು ಮಹಿಳೆಯರು ಜಾಗೃತರಾಗಬೇಕು. ನಾರಿಶಕ್ತಿ ಸಂಘಟಿತವಾದಲ್ಲಿ ಮಾತ್ರ ಸಮಾನ ಜೀವನ ಸಾಧ್ಯ. ಆದಕ್ಕಾಗಿ ಮಹಿಳೆಯರು ಶ್ರದ್ಧಾಯುಕ್ತ ಪ್ರಯತ್ನಕ್ಕೆ ಮುಂದಾಗಬೇಕು. ನಿಮ್ಮಲ್ಲಿನ ಮಮತಾ ಪೂಜಾರಿ ನಮ್ಮ ಸಾಧನೆಗೂಸ್ಫೂರ್ತಿಯಾಗಿದೆ. ಸಾಧನೆಯ ಗುರಿಯತ್ತ ಸ್ತ್ರೀಯರ ಚಿತ್ತವಿರಲಿ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಹಾಗೂ ಹೆಸರಾಂತ ಯುವ ಸಮಾಜ ಸೇವಕಿ ಶೈನಾ ಎನ್.ಸಿ ಕರೆಯಿತ್ತರು.
ಆದಿತ್ಯವಾರ ಅಪರಾಹ್ನ ಚೆಂಬೂರು ಅಲ್ಲಿನ ಶಿವಸ್ವಾಮಿ ಸಭಾಗೃಹದ ದಿವಂಗತ ನ್ಯಾಯವಾದಿ ನಾರಾಯಣ ಅಂಚನ ವೇದಿಕೆಯಲ್ಲಿ ಬಿಲ್ಲವ ಜಾಗೃತಿ ಬಳಗ (ರಿ.) ಮುಂಬಯಿ ಇದರ ಮಹಿಳಾ ಮಂಡಲವು ಜಾಗತಿಕ ಮಹಿಳಾ ದಿನಾಚರಣೆ-2015 ನ್ನು ಸಂಭ್ರಮಿಸಿದ್ದು, ಬಳಗದ ಅಧ್ಯಕ್ಷ ಎನ್.ಟಿ.ಪೂಜಾರಿ ಅಧ್ಯಕ್ಷತೆಯಲ್ಲಿ ನೆರವೇರಿಸಲ್ಪಟ್ಟ ಮಹಿಳೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಶೈನಾ ಮಾತನಾಡಿದರು. ವೇದಿಕೆಯಲ್ಲಿ ಮಹಿಳಾ ವಿಭಾಗಧ್ಯಕ್ಷೆಶಾರದಾ ಎಸ್.ಕರ್ಕೇರ, ಗೌ| ಕಾರ್ಯದರ್ಶಿ ರೇಖಾ ಸದಾನಂದ್, ಕೃಪಾ ತಂಡದ ನಾಯಕಿ, ಕೇಂದ್ರ ಸರಕಾರದ ಏಕಲವ್ಯ ಹಾಗೂ ಅರ್ಜುನ ಕ್ರೀಡಾ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಮಮತಾ ಪೂಜಾರಿ ಅವರನ್ನು ಬಳಗದ ಅಧ್ಯಕ್ಷ ಎನ್.ಟಿ.ಪೂಜಾರಿ ಸನ್ಮಾನಿಸಿದರು. ಹಾಗೂ ಮಮತಾ ಅವರ ಪತೆ ಅಭಿಷೇಕ್ ಕೋಟ್ಯಾನ್ ಅವರನ್ನೂ ಪುಷ್ಪಗುಪ್ಚವನ್ನಿತ್ತು ಗೌರವಿಸಿದರು.
ಕಾರ್ಯಕ್ರಮದಲ್ಲಿ ಸ್ಥಾಪಕ ಅಧ್ಯಕ್ಷ ಸೂರು ಸಿ.ಕರ್ಕೇರ, ಗೌರವಾಧ್ಯಕ್ಷ ಸುರೇಶ್ ಎಸ್.ಪೂಜಾರಿ, ಡಿ.ಬಿ ಅಮೀನ್ ಮತ್ತು ಪುರುಷೋತ್ತಮ ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಕೇಶವ ಕೆ.ಕೋಟ್ಯಾನ್, ಕೋಶಾಧಿಕಾರಿ ಪದ್ಮನಾಭ ಎಸ್.ಪೂಜಾರಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸಂತೋಷಿ ಸುರೇಶ್ ಪೂಜಾರಿ, ಕೆ.ಭೋಜರಾಜ್, ಲಕ್ಷ್ಮಣ ಪೂಜಾರಿ, ಹರೀಶ್ ಜಿ.ಪೂಜಾರಿ, ರಮೇಶ್ ಪೂಜಾರಿ ನೆರೂಳ್, ಎನ್.ಪಿ ಸುವರ್ಣ, ಚಿತ್ರಾಪು ಕೆ.ಎಂ ಕೋಟ್ಯಾನ್, ಗಿರೀಶ್ ಬಿ.ಸಾಲ್ಯಾನ್ ಸೇರಿದಂತೆ ಬಳಗದ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದು, ನಗರದ ಅನೇಕ ತುಳು ಕನ್ನಡಿಗ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಮತಾ ಪೂಜಾರಿ ಅವರಿಗೆ ಗೌರವಿಸಿದರು.
ಮಮತಾ ಪೂಜಾರಿ ಮಾತನಾಡಿ ತುಳುಪ್ರಧಾನ ಸಮಾರಂಭದಲ್ಲಿ ತೌಳವರ ಕೂಡುವಿಕೆ ಮತ್ತು ತುಳು ಭಾಷೆಯ ಉಪಚಾರದಿಂದ ನಾನು ಸಂತುಷ್ಟಳಾಗಿದ್ದೇನೆ. ಇಲ್ಲಿ ತಮರೂರ ಸಂಬಂಧ ಬೆಳೆಯುತ್ತಿದೆ. ನಾನು ಕಬ್ಬಡ್ಡಿ ಆಯ್ಕೆ ಮಾಡಿದಾಗ ನನಗೆ ಮನೆಮಂದಿ ಬಂಧುಮಿತ್ರರೆಲ್ಲರೂ ನಿರುತ್ಸಾಹ ಗೊಳಿಸುತ್ತಿದ್ದರು. ಆದರೆ ಪುರುಷ ಪ್ರಧಾನ ಕಬ್ಬಡ್ಡಿಗೆ ಮಹಿಳಾ ಮಾನ್ಯತೆ ತರುವಲ್ಲಿ ಇಂದು ಯಶಸ್ಸು ಪಡೆದಿದ್ದೇನೆ. ಈ ಮೂಲಕ ಮಹಿಳೆ ಏನಾನ್ನೂ ಸಾಧಿಸ ಬಹುದು ಎನ್ನುವುದನ್ನು ಶಾಬೀತು ಪಡಿಸಿದ್ದೇನೆ. ಬಲಿಷ್ಠ ಮಹಿಳಾ ಸಮಾಜಕ್ಕೆ ಇಟ್ಟ ಹೆಜ್ಜೆ ಇದಾಗಿದೆ. ಮಹಿಳಾ
ಯುವ ನಾಯಕತ್ವವನ್ನು ಪ್ರೇರಿಪಿಸಿದ್ದಲ್ಲಿ ಸ್ತ್ರೀಕುಲದ ಸರ್ವಾಂಗೀಣ ಸಾಧ್ಯ ಎಂದರು.
ಸಮಕಾಲೀನ ಸ್ಥಿತಿಗತಿಯ ಮೆಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಜಾಗೃತಿ ಬಳಗ ಶ್ರಮಿಸುತ್ತಾ ನಮ್ಮನ್ನು ಪ್ರೋತ್ಸಹಿಸುತ್ತಿದೆ. ೧೩ನೇ ವರ್ಷದಲ್ಲಿನ ಬಳಗದ ಈ ಮಹಿಳಾ ಮಂಡಲ ಸಮಾಜಕ್ಕಾಗಿ ಹಲವಾರು ಸೇವೆಗಳನ್ನು ಮಾಡುತ್ತಾ ಮುನ್ನಡೆಯುತ್ತಿದೆ. ಭವಿಷ್ಯತ್ತಿನಲ್ಲೂ ನಮ್ಮಲ್ಲಿನ ಮಹಿಳೆಯರು ನ್ಯಾಯ ಸಮ್ಮತ ಬಾಳಿಗೆ ಸಿದ್ಧರಾಗಬೇಕು. ನಾವೆಲ್ಲರೂ ಸಂಘಟಿತರಾದಾಲ್ಲಿ ಸ್ತ್ರೀಶಕ್ತಿಗೆ ಫಶ್ರುತಿ ಸಾಧ್ಯ ಎಂದು ಶಾರದಾ ಕರ್ಕೇರ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ವಿಶ್ವಮಹಿಳಾ ದಿನಾಚರಣೆಯಿಂದಾಗಿ ಸ್ತ್ರೀಶಕ್ತಿಯು ಬಲಾಢ್ಯ ಗೊಳ್ಳುತ್ತಿದೆ. ಮಹಿಳಾ ದಿನಾಚರಣೆ ಸಮಾನತೆ ಸಾರುವ ಸುದಿನವೂ ಹೌದು. ಆದುದರಿಂದ ಇದು ಏಕ ದಿನದ ಆಚರಣೆ ಆಗದೆ ದೈನಂದಿನ ಅನುಸರಣೆ ಆಗಲಿ. ಮಮತಾ ಪೂಜಾರಿ ಬಿಲ್ಲವ ಸಮಾಜದ ಮಾಣಿಕ್ಯವಾಗಿದ್ದು ಆಕೆಯ ಬದುಕು ನಮ್ಮೆಲ್ಲರಿಗೂ ಆದರ್ಶನೀಯ. ರಾಷ್ಟ್ರಭಿವೃದ್ಧಿಗೆ ಸ್ತ್ರೀಶಕ್ತಿ ಪೂರಕವಾಗಲಿ. ಮಹಿಳಾ ವಿಭಾಗದ ಗೌ| ಕಾರ್ಯದರ್ಶಿ ರೇಖಾ ಸದಾನಂದ್ ಸುಖಾಗಮನ ಬಯಸಿದರು.
ಪೂಜಾ ಪುರುಷೋತ್ತಮ ಕೋಟ್ಯಾನ್, ತಾರಾ ಸೋಮನಾಥ್ ಕುಕ್ಯಾನ್ ಮತ್ತು ವೇದ ಸುವರ್ಣ ಪ್ರಾರ್ಥನೆಯನ್ನಾಡಿದರು. ಲತಿಕಾ ಅಮೀನ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದನೆ ಸಲ್ಲಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಜಾಗೃತಿ ಬಳಗದ ಮಹಿಳಾ ಮಂಡಲದ ಸದಸ್ಯೆಯರು ವೈವಿಧ್ಯತೆಗಳ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಿದರು. ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರ ರಚನೆ ಮತ್ತು ದಿಗ್ದರ್ಶನದಲ್ಲಿ ಕಲಾಜಗತ್ತು ಮುಂಬಯಿ ತಂಡವು `ಮೋಕ್ಷ’ ತುಳು ನಾಟಕ ಪ್ರದರ್ಶಿಸಿದರು.