ಕನ್ನಡ ವಾರ್ತೆಗಳು

ವಿಶ್ವ ಕಿಡ್ನಿ ದಿನಾಚರಣೆ ಹಾಗೂ ಸಮಾವೇಶ ಉದ್ಘಾಟನೆ,

Pinterest LinkedIn Tumblr

kidney_day_photo_1

ಮಂಗಳೂರು, ಮಾ.12 : ಮಂಗಳೂರಿನ ಯುರೋಲಜಿ ಚಾರಿಟೇಬಲ್ ಟ್ರಸ್ಟ್ ಜಿಲ್ಲೆಯ ಹಲವು ಪ್ರಮುಖ ಸಾಮಾಜಿಕ ಸಂಘಟನೆಗಳ ಸಹಯೋಗದೊಂದಿಗೆ ಗುರುವಾರ ಕಿಡ್ನಿ ರೋಗಿಗಳ ಸಮಾವೇಶ ಹಾಗೂ ವಿಶ್ವ ಕಿಡ್ನಿ ದಿನಾಚರಣೆಯು ನಗರದ ಸೈಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ನಡೆಯಿತು.

kidney_day_photo_2 kidney_day_photo_3 kidney_day_photo_4 kidney_day_photo_5 kidney_day_photo_6 kidney_day_photo_7 kidney_day_photo_9

ಸಮಾವೇಶದಲ್ಲಿ ಕಿಡ್ನಿರೋಗ ತಜ್ಞ ಡಾ.ವಿವೇಕ್ ಪಾಠಕ್  ಕಿಡ್ನಿ ರೋಗದ ಬಗ್ಗೆ ವಿಷಯ ಮಂಡಿಸಿದರು. ಈ ಸಂಧರ್ಭದಲ್ಲಿ ಕಿಡ್ನಿ ಎಕ್ಸ್‌ಪೊ ವಸ್ತು ಪ್ರದರ್ಶನವಿದ್ದು, ನರ್ಸಿಂಗ್ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಿಡ್ನಿ ಆರೋಗ್ಯ ಅಭಿಯಾನ ಸಂಘಟನಾ ಸಮಿತಿಯ ಅಧ್ಯಕ್ಷ ಎಸ್. ಗಣೇಶ್ ರಾವ್ , ಸಮಿತಿ ಉಪಾಧ್ಯಕ್ಷ ಸುದೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಉಮರ್ ಯು.ಎಚ್. ಮಂಗಳೂರು ಯುರೋಲಜಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಮುಹಮ್ಮದ್ ಸಲೀಮ್,  ಕರ್ನಾಟಕ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯ  ಅಧ್ಯಕ್ಷ. ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Write A Comment