(ಸಾಂರ್ಧಬಿಕ ಚಿತ್ರ) ಪುದುಚೆರಿ,ಮಾರ್ಚ್.13 : ಖೋಟಾ ನೋಟು ಚಲಾವಣೆ ಹಗರಣದಲ್ಲಿ ಓರ್ವ ಬಾಂಗ್ಲಾ ದೇಶಿ ಮಹಿಳೆ ಮತ್ತು ಪಕ್ಕದ ಗ್ರಾಮದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಕ್ಕದ ಕೀಝ್ ಶತಮಂಗಳಮ್ ಗ್ರಾಮದ ಬಸ್ ನಿರ್ವಾಹಕನೊಬ್ಬ ಬೆಂಗಳೂರಿನ ಆಕ್ಸಿಸ್ ಬ್ಯಾಂಕ್ ನಲ್ಲಿ ಮತ್ತೊಬ್ಬನ ಖಾತೆಗೆ 40 ಸಾವಿರ ರೂ ಖೋಟ ನೋಟು ಜಮಾ ಮಾಡಲು ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಗದನ್ನು ಎಣಿಸುವಾಗ, ಬ್ಯಾಂಕ್ ಸಿಬ್ಬಂದಿ 500 ರೂ ಮತ್ತು 100 ರೂ ನೋಟುಗಳ ಸುಮಾರು 21 ಸಾವಿರ ರೂ ಮೊತ್ತದ ಹಣ ನಕಲಿ ಎಂದು ಕಂಡು ಹಿಡಿದಿದ್ದಾರೆ.
ಬ್ಯಾಂಕ್, ಪೊಲೀಸ ಠಾಣೆಯಲ್ಲಿ ದೂರು ಸಲ್ಲಿಸಿದ್ದರಿಂದ ಪೊಲೀಸರು ಆ ಮನುಷ್ಯನನ್ನು ಬಂಧಿಸಿದ್ದಾರೆ. ವಿಚಾರಣೆಯ ನಂತರ ಆ ಮನುಷ್ಯ, 29 ವರ್ಷದ ಬಾಂಗ್ಲಾ ದೇಶದ ಮಹಿಳೆಯೊಬ್ಬಳು ಈ ಹಣ ನೀಡಿ ಮತ್ತೊಂದು ಖಾತೆಗೆ ಜಮಾ ಮಾಡಲು ತಿಳಿಸಿದಳು ಎಂದು ಪೊಲೀಸರಿಗೆ ತಿಳಿಸಿದ ಹಿನ್ನಲೆಯಲ್ಲಿ ಮೂರೂ ಜನರನ್ನು ಪೊಲೀಸರು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.